ಭೈರವಿ ಗೌಡತಿಯರ ಬಳಗದಿಂದ ಉತ್ತಮ ಸಂಘಟನೆ

ಸಂತಸ ಫೌಂಡೇಷನ್ ಸಂಸ್ಥಾಪಕ ನಿರ್ದೇಶಕಿ ಡಾ.ಸೌಮ್ಯಾ ದಿನೇಶ್, ಶಿಕ್ಷಣ ತಜ್ಞೆ ಶೋಭಾ ರಾಜಶೇಖರ್, ವರ್ಷ ಅಸೋಸಿಯೇಟ್ಸ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕಿ ರಾಣಿ ಕುಮಾರ್ ಹಾಗೂ ಅಲ್ಟ್ರಾ ಡಿಸ್ಟೆನ್ಸ್ ಸೈಕ್ಲಿಸ್ಟ್ ವೀಣಾ ಅಶೋಕ್, ಆಹಾರ ಮತ್ತು ಕೃಷಿ ವ್ಯವಹಾರ ನಾಯಕತ್ವ ಸಂಸ್ಥೆಯ ಡಾ.ಚೈತ್ರಾ ಭರತ್ ಅವರಿಗೆ ಭೈರವಿ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು. ಶ್ರೀ ಸೋಮೇಶ್ವರನಾಥ ಸ್ವಾಮೀಜಿ , ಕೆ.ಹರೀಶ್‌ಗೌಡ, ಡಾ.ದಾಕ್ಷಾಯಿಣಿ, ಸುಮಾ ಪ್ರಶಾಂತ್ ಇದ್ದರು.

Published on
ಮೈಸೂರು: ಭೈರವಿ ಗೌಡತಿಯರ ಬಳಗವು ಉತ್ತಮವಾಗಿ ಸಂಘಟನೆ ಕಾರ್ಯ ಮಾಡುತ್ತಿದೆ. ಅದನ್ನು ಗ್ರಾಮೀಣ ಪ್ರದೇಶಕ್ಕೂ ವಿಸ್ತರಿಸಬೇಕು ಎಂದು ಶಾಸಕ ಕೆ.ಹರೀಶ್‌ಗೌಡ ಹೇಳಿದರು.
ವಿಜಯನಗರದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಬುಧವಾರ ಆಯೋಜಿಸಿದ್ದ ಭೈರವಿ ಗೌಡತಿಯರ ಬಳಗದ ಮೂರನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ನಗರ ಪ್ರದೇಶದಲ್ಲಿ ಮಹಿಳೆಯರು ಬಹುತೇಕ ಸಬಲೀಕರಣಗೊಂಡಿದ್ದಾರೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಸಬಲೀಕರಣವಾಗಬೇಕಿದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣದಲ್ಲಿ ಮಹಿಳೆಯರಿಗಾಗಿ ವಿಶೇಷ ಕಾರ್ಯಕ್ರಮ ಆಯೋಜಿಸಿ ಮತ್ತು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಕಾರ ನೀಡಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮವನ್ನು ಸಂತಸ ಫೌಂಡೇಷನ್ ಸಂಸ್ಥಾಪಕ ನಿರ್ದೇಶಕಿ ಡಾ.ಸೌಮ್ಯಾ ದಿನೇಶ್, ಶಿಕ್ಷಣ ತಜ್ಞೆ ಶೋಭಾ ರಾಜಶೇಖರ್, ವರ್ಷ ಅಸೋಸಿಯೇಟ್ಸ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕಿ ರಾಣಿ ಕುಮಾರ್ ಹಾಗೂ ಅಲ್ಟ್ರಾ ಡಿಸ್ಟೆನ್ಸ್ ಸೈಕ್ಲಿಸ್ಟ್ ವೀಣಾ ಅಶೋಕ್, ಆಹಾರ ಮತ್ತು ಕೃಷಿ ವ್ಯವಹಾರ ನಾಯಕತ್ವ ಸಂಸ್ಥೆಯ ಡಾ.ಚೈತ್ರಾ ಭರತ್ ಅವರಿಗೆ ಭೈರವಿ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.
ಶ್ರೀ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕೆ.ಆರ್.ಆಸ್ಪತ್ರೆ ಡೀನ್ ಡಾ.ದಾಕ್ಷಾಯಿಣಿ, ಜಾನಪದ ಕಲಾವಿದೆ ಸುಮಾ ಪ್ರಶಾಂತ್, ಬಿಜೆಪಿ ಮಹಿಳಾ ಮೋರ್ಚಾ ಮಾಜಿ ಅಧ್ಯಕ್ಷೆ ಹೇಮಾ ನಂದಿಶ್, ಸಮಾಜ ಸೇವಕರಾದ ಕೋಮಲಾ ವೆಂಕಟೇಶ್, ಸುಶೀಲಾ ಬಸವರಾಜು, ಭೈರವಿ ಗೌಡತಿಯರ ಬಳಗದ ಅಧ್ಯಕ್ಷೆ ರೇವತಿ ಕೃಷ್ಣಪ್ಪ, ಗೌರವಾಧ್ಯಕ್ಷೆ ರಾಧಾ ಲಂಕೇಗೌಡ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net