ಉತ್ತಮ ಆರೋಗ್ಯವೇ ನೈಜ ಸಂಪತ್ತು:ಪ್ರೊ.ಭಾಷ್ಯಂ ಸ್ವಾಮೀಜಿ ಅಭಿಮತ

ಪುನೀತ್ ರಾಜ್‌ಕುಮಾರ್ ಜನ್ಮ ದಿನದ ನೆನಪಿನಲ್ಲಿ ದಟ್ಟಗಳ್ಳಿಯ ನಯನ ಕುಮಾರ್ಸ್‌ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದ್ದ ಆರೋಗ್ಯ ಉಚಿತ ಶಿಬಿರವನ್ನು ಪ್ರೊ.ಭಾಷ್ಯಂ ಸ್ವಾಮೀಜಿ ಉದ್ಘಾಟಿಸಿದರು. ಎನ್.ಶ್ರೀನಿವಾಸನ್, ಡಾ. ತೇಜಸ್, ಡಾ.ಶಾಲಿನಿ, ಡಾ.ಪ್ರಕಾಶ್, ಡಾ.ದೇವಾನಂದ್, ಡಾ.ಶಿವಾನಂದ್, ಡಾ.ಅಪೂರ್ವ, ಡಾ.ಪೂರ್ಣಿಮಾ ಇತರರಿದ್ದರು.
ಪುನೀತ್ ರಾಜ್‌ಕುಮಾರ್ ಜನ್ಮ ದಿನದ ನೆನಪಿನಲ್ಲಿ ದಟ್ಟಗಳ್ಳಿಯ ನಯನ ಕುಮಾರ್ಸ್‌ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದ್ದ ಆರೋಗ್ಯ ಉಚಿತ ಶಿಬಿರವನ್ನು ಪ್ರೊ.ಭಾಷ್ಯಂ ಸ್ವಾಮೀಜಿ ಉದ್ಘಾಟಿಸಿದರು. ಎನ್.ಶ್ರೀನಿವಾಸನ್, ಡಾ. ತೇಜಸ್, ಡಾ.ಶಾಲಿನಿ, ಡಾ.ಪ್ರಕಾಶ್, ಡಾ.ದೇವಾನಂದ್, ಡಾ.ಶಿವಾನಂದ್, ಡಾ.ಅಪೂರ್ವ, ಡಾ.ಪೂರ್ಣಿಮಾ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಉತ್ತಮ ಆರೋಗ್ಯವೇ ನೈಜ ಸಂಪತ್ತು ಮತ್ತು ಜೀವನದ ಅತಿದೊಡ್ಡ ಆಸ್ತಿ
  • ಆರೋಗ್ಯವಿದ್ದರೆ ಮಾತ್ರ ಜೀವನದ ಸಂತೋಷವನ್ನು ಅನುಭವಿಸಲು ಸಾಧ್ಯ
ಮೈಸೂರು:ಹಣ ಅಥವಾ ಆಸ್ತಿಯಿಂದ ಭೌತಿಕ ವಸ್ತುಗಳನ್ನು ಕೊಳ್ಳಬಹುದು, ಆದರೆ ಆರೋಗ್ಯವನ್ನು ಕೊಳ್ಳಲು ಸಾಧ್ಯವಿಲ್ಲ. ಉತ್ತಮ ಆರೋಗ್ಯವೇ ನೈಜ ಸಂಪತ್ತು ಮತ್ತು ಜೀವನದ ಅತಿದೊಡ್ಡ ಆಸ್ತಿಯಾಗಿದೆ ಎಂದು ವಿಜಯನಗರದ ಶ್ರೀ ಯೋಗಾನರಸಿಂಹಸ್ವಾಮಿ ದೇವಸ್ಥಾನದ ಸಂಸ್ಥಾಪಕ ನಾಡೋಜ ಪ್ರೊ.ಭಾಷ್ಯಂ ಸ್ವಾಮೀಜಿ ಹೇಳಿದರು.
ನಟ.ದಿ.ಪುನೀತ್ ರಾಜ್ಕುಮಾರ್ ಅವರ ಹುಟ್ಟು ಹಬ್ಬದ ಅಂಗವಾಗಿ ದಟ್ಟಗಳ್ಳಿಯ ನಯನ ಕುಮಾರ್ಸ್‌ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮನುಷ್ಯನಿಗೆ ಆರೋಗ್ಯವೇ ಭಾಗ್ಯ ಎಂಬುದು ಅಕ್ಷರಶಃ ಸತ್ಯ. ದೈಹಿಕ ಮತ್ತು ಮಾನಸಿಕ ಆರೋಗ್ಯವು ಸಂತೋಷ, ಉತ್ಪಾದಕತೆ ಮತ್ತು ಜೀವನದ ಒಟ್ಟಾರೆ ಯೋಗಕ್ಷೇಮಕ್ಕೆ ಅತ್ಯಗತ್ಯ ಎಂದು ಅಭಿಪ್ರಾಯಪಟ್ಟರು.
ಆರೋಗ್ಯವಿದ್ದರೆ ಮಾತ್ರ ಜೀವನದ ಸಂತೋಷವನ್ನು ಅನುಭವಿಸಲು ಸಾಧ್ಯ.ಆದ್ದರಿಂದ, ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಮೊದಲ ಆದ್ಯತೆಯಾಗಿರಬೇಕು ಎಂದು ಸಲಹೆ ನೀಡಿದರು.
ನಾವು ಅನಾರೋಗ್ಯಕ್ಕೆ ಒಳಗಾದರೆ, ನಮ್ಮ ಅಮೂಲ್ಯ ಸಮಯ ಕಳೆದುಹೋಗುತ್ತದೆ. ನಮ್ಮ ಕುಟುಂಬ ಮತ್ತು ಅಧ್ಯಯನದ ಮೇಲೆ ಪರಿಣಾಮ ಬೀರುತ್ತದೆ. ಗಳಿಸಬಹುದಾದ ಮತ್ತು ಮರಳಿ ಪಡೆಯಬಹುದಾದ ಹಣಕ್ಕಿಂತ ಭಿನ್ನವಾಗಿ, ಕಳೆದುಹೋದ ಆರೋಗ್ಯವನ್ನು ಮರಳಿ ಪಡೆಯುವುದು ಕಷ್ಟ. ಆದ್ದರಿಂದ, ಎಲ್ಲರೂ ಆರೋಗ್ಯದತ್ತ ಗಮನಹರಿಸಿ, ಕಾಲಕಾಲಕ್ಕೆ ತಪಾಸಣೆ ಮಾಡಿಸಿಕೊಂಡು ಸೂಕ್ತ ಔಷಧಿ ಪಡೆದುಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದರು.
ಈ ಆಸ್ಪತ್ರೆಯ ಉದ್ಘಾಟನೆಯನ್ನು ನಟ ಪುನೀತ್ ರಾಜ್ ಕುಮಾರ್ ಅವರ ಅಮೃತ ಹಸ್ತದೊಂದಿಗೆ ನೆರವೇರಿಸಬೇಕು ಎಂಬುದು ನಮ್ಮೆಲ್ಲರ ಕನಸಾಗಿತ್ತು.ಆದರೆ ದುರದೃಷ್ಟವಷಾತ್ ಪುನೀತ್ ಅವರು ನಿಧನರಾದರು. ಇದು ನಿಜಕ್ಕೂ ಅತ್ಯಂತ ವಿಷಾದಕರ ಎಂದು ಬೇಸರ ವ್ಯಕ್ತಪಡಿಸಿದರು.
ನಟ ಶಿವರಾಜ್ ಕುಮಾರ್ ಅವರು ಆಸ್ಪತ್ರೆಯನ್ನು ಜನಸೇವೆಗೆ ಲೋಕಾರ್ಪಣೆಗೊಳಿಸಿದರು. ಅಂದಿನಿಂದ ಇಂದಿನವರೆಗೂ ಕಡು ಬಡವರಿಂದ ಹಿಡಿದು ಎಲ್ಲರಿಗೂ ಅತ್ಯುತ್ತಮ , ಗುಣಮಟ್ಟದ ಚಿಕಿತ್ಸೆಯನ್ನು ನೀಡಲಾಗುತ್ತಿದ್ದು, ಇವರ ಸೇವೆ ಹೀಗೆ ಮುಂದುವರೆಯಲಿ ಎಂದು ಆಶೀರ್ವದಿಸಿದರಲ್ಲದೇ, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಯೋಗಾನರಸಿಂಹ ಸ್ವಾಮಿ ದೇವಾಲಯದ ಆಡಳಿತಾಧಿಕಾರಿ ಎನ್.ಶ್ರೀನಿವಾಸನ್, ಡಾ. ತೇಜಸ್, ಡಾ.ಶಾಲಿನಿ, ಡಾ.ಪ್ರಕಾಶ್, ಡಾ.ದೇವಾನಂದ್, ಡಾ.ಶಿವಾನಂದ್, ಡಾ.ಅಪೂರ್ವ, ಡಾ.ಪೂರ್ಣಿಮಾ ಇತರರಿದ್ದರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net