ಕಿಟಕಿ ಬಾಗಿಲು ಮುರಿದು ಚಿನ್ನ, ಬೆಳ್ಳಿ, ನಗದು ದರೋಡೆ

ನಂಜನಗೂಡು ನಗರದ ಟ್ರಾವೆಲ್ ಏಜೆನ್ಸಿ ಉದ್ಯಮಿ ಮನೆಗೆ ನುಗ್ಗಿದ ಕಳ್ಳರು ಚಿನ್ನ, ಬೆಳ್ಳಿ, ಲಕ್ಷಾಂತರ ರೂ. ನಗದನ್ನು ದೋಚಿ ಪರಾರಿಯಾಗಿದ್ದಾರೆ.
ನಂಜನಗೂಡು ನಗರದ ಟ್ರಾವೆಲ್ ಏಜೆನ್ಸಿ ಉದ್ಯಮಿ ಮನೆಗೆ ನುಗ್ಗಿದ ಕಳ್ಳರು ಚಿನ್ನ, ಬೆಳ್ಳಿ, ಲಕ್ಷಾಂತರ ರೂ. ನಗದನ್ನು ದೋಚಿ ಪರಾರಿಯಾಗಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • Gold, silver, cash robbed
ನಂಜನಗೂಡು: ನಗರದ ಟ್ರಾವೆಲ್ ಏಜೆನ್ಸಿ ಉದ್ಯಮಿ ಮನೆಗೆ ನುಗ್ಗಿದ ಕಳ್ಳರು ಚಿನ್ನ, ಬೆಳ್ಳಿ, ಲಕ್ಷಾಂತರ ರೂ. ನಗದನ್ನು ದೋಚಿ ಪರಾರಿಯಾಗಿದ್ದಾರೆ.
ಉದ್ಯಮಿ ಮೋಹನ್ ಎಂಬುವರು ಕುಟುಂಬದ ಸಮೇತ ಕಾರ್ಯನಿಮಿತ್ತ ಶುಕ್ರವಾರ ಮುಂಜಾನೆ ತಾಂಡವಪುರಕ್ಕೆ ತೆರಳಿದ್ದರು. ಈ ವೇಳೆ ಮನೆಯ ಹಿಂಭಾಗದ ಕಿಟಕಿಯ ಸರಳು ಕತ್ತರಿಸಿ ಒಳನುಗ್ಗಿ ಬೀರುವಿನಲ್ಲಿದ್ದ 200 ಗ್ರಾಂ ಚಿನ್ನ, 5 ಕೆಜಿ ಬೆಳ್ಳಿ, 1,10,000 ರೂ.ನಗದನ್ನು ದೋಚಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಬೆರಳಚ್ಚು ಮತ್ತು ಶ್ವಾನದಳದಿಂದ ಪರಿಶೀಲನೆ ನಡೆಸಿದ್ದಾರೆ. ನಗರದ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಕಳ್ಳರನ್ನು ಪತ್ತೆಹಚ್ಚಲು 5 ಜನರ ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ರವೀಂದ್ರ ಮಾಹಿತಿ ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net