ಲಾಕರ್ ಉಪಯೋಗಿಸಿ: ಈ ಕುರಿತು ಮಾಹಿತಿ ನೀಡಿದ ನಗರಠಾಣೆ ಇನ್‌ಸ್ಪೆಕ್ಟರ್ ಶಿವಮಾದಯ್ಯ, ನಾಗರಿಕರು ಮನೆಯ ಮುಂಬಾಗಿಲಿಗೆ ಡೋರ್ ಲಾಕರ್ ಬಳಸಿ ಬೀಗ ಹಾಕುವುದು ಉತ್ತಮ. ಮತ್ತು ಮನೆಯಲ್ಲಿರುವ ಚಿನ್ನಾಭರಣಗಳನ್ನು ಬ್ಯಾಂಕ್ ಲಾಕರ್‌ನಲ್ಲಿ ಇಡುವ ಪದ್ಧತಿಯನ್ನು ಅನುಸರಿಸುವುದು ಕ್ಷೇಮ. ಮನೆಯವರೆಲ್ಲರೂ ಊರಿಗೆ ಹೋಗುವ ಪರಿಸ್ಥಿತಿ ಬಂದಾಗ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಹಾಗೂ ಅಕ್ಕಪಕ್ಕದವರಿಗೂ ಮಾಹಿತಿ ನೀಡುವ ಕಾರ್ಯ ಮಾಡಬೇಕೆಂದು ನಾಗರಿಕರಲ್ಲಿ ಕೋರಿದ್ದಾರೆ.