ಯುವತಿ ಬ್ಯಾಗ್‌ನಲ್ಲಿದ್ದ ಚಿನ್ನಾಭರಣ ಕಳವು

woman's bag
woman's bag
Published on
ನಗರ ಸಾರಿಗೆ ಬಸ್‌ನಲ್ಲಿ ಪ್ರಯಾಣಿಸುವಾಗ ಯುವತಿಯೊಬ್ಬರ ಬ್ಯಾಗ್‌ನಿಂದ ಚಿನ್ನಾಭರಣ ಕಳ್ಳತನವಾಗಿರುವ ಸಂಬಂಧ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಭರಣ ಮತ್ತು ನಗದು ಕಳೆದುಕೊಂಡ ಯುವತಿ ನೀಡಿದ ದೂರಿನನ್ವಯ ಮಾ.14ರಂದು ಎಫ್‌ಐಆರ್ ದಾಖಲಾಗಿದೆ. ಯುವತಿ ಮೈಸೂರಿನ ಪಿಜಿಯೊಂದರಲ್ಲಿ ವಾಸವಾಗಿದ್ದು, ಖಾಸಗಿ ಕಂಪನಿಯೊಂದರಲ್ಲಿ ಆಫೀಸ್ ಅಡ್ಮಿನ್ ಆಗಿದ್ದಾರೆ. ಫೆ.23ರಂದು ಸಂಜೆ ಅಕ್ಷಯ ಭಂಡಾರ್‌ನಿಂದ ನಗರ ಬಸ್ ನಿಲ್ದಾಣಕ್ಕೆ ಬಸ್‌ನಲ್ಲಿ ಪ್ರಯಾಣಿಸುವಾಗ ಬ್ಯಾಗ್‌ನಲ್ಲಿಟ್ಟಿದ್ದ ಸುಮಾರು 13.14 ಗ್ರಾಂ. ಚಿನ್ನದ ಕಿವಿಯೋಲೆಗಳು, ಸುಮಾರು 2.37 ಗ್ರಾಂ ಚಿನ್ನದ ಉಂಗುರ, 2,500 ನಗದು ಆಭರಣ ಕಳವು ಆಗಿದೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net