ಮೈಸೂರಿನಲ್ಲಿ ಗಾಂಜಾ ಆರೋಪಿಗಳ ಬಂಧನ, ಲಕ್ಷಾಂತರ ರೂ. ನಗದು, ಮಾರಕಾಸ್ತ್ರಗಳ ವಶ

ಪೊಲೀಸರು ವಶಪಡಿಸಿಕೊಂಡಿರುವ ಗಾಂಜಾ
ಪೊಲೀಸರು ವಶಪಡಿಸಿಕೊಂಡಿರುವ ಗಾಂಜಾ
Published on

ಪ್ರಮುಖ ಮುಖ್ಯಾಂಶಗಳು

  • ಮಂಡಿ ಪೊಲೀಸ್ ಠಾಣೆ ವ್ಯಾಪ್ತಿಯ ಮೂರು ಮನೆಗಳ ಮೇಲೆ ಸರ್ಚ್ ವಾರಂಟ್‌ನೊಂದಿಗೆ ಮಂಗಳವಾರ ದಾಳಿ ನಡೆಸಿದ ಪೊಲೀಸರು
  • 2 ಕೆಜಿ ಗಾಂಜಾ, 7.30 ಲಕ್ಷ ರೂ.ನಗದು, 10 ತಲ್ವಾರ್, ಕತ್ತಿ, ಮಚ್ಚು ಸೇರಿದಂತೆ ವಿವಿಧ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ
  • ಫಿರ್ದೋಜ್ ಹಾಗೂ ರೋಶನ್‌ ಬಂಧನ
ಮೈಸೂರು: ಮೈಸೂರು ನಗರ ಪೊಲೀಸರು ಮೂರು ಮನೆಗಳ ಮೇಲೆ ದಾಳಿ ನಡೆಸಿ, ಅಪಾರ ಪ್ರಮಾಣದ ಗಾಂಜಾ, ಲಕ್ಷಾಂತರ ರೂ. ನಗದು ಹಾಗೂ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡು, ಇಬ್ಬರನ್ನು ಬಂಧಿಸಿದ್ದಾರೆ.
ಮಂಡಿ ಪೊಲೀಸ್ ಠಾಣೆ ವ್ಯಾಪ್ತಿಯ ಮೂರು ಮನೆಗಳ ಮೇಲೆ ಸರ್ಚ್ ವಾರಂಟ್‌ನೊಂದಿಗೆ ಮಂಗಳವಾರ ದಾಳಿ ನಡೆಸಿದ ಪೊಲೀಸರು, 2 ಕೆಜಿ ಗಾಂಜಾ, 7.30 ಲಕ್ಷ ರೂ.ನಗದು, 10 ತಲ್ವಾರ್, ಕತ್ತಿ, ಮಚ್ಚು ಸೇರಿದಂತೆ ವಿವಿಧ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಇದೇ ವೇಳೆ ಫಿರ್ದೋಜ್ ಹಾಗೂ ರೋಶನ್‌ನನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಇತರ ಆರೋಪಿಗಳಿಗೆ ಶೋಧ ಮುಂದುವರಿಸಿದ್ದಾರೆ.
ಗಾಂಜಾ ಶೋಧ ಕಾರ್ಯಾಚರಣೆ ವೇಳೆ ಈ ದಾಳಿ ನಡೆದಿದೆ. ಪೊಲೀಸರು ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದ್ದರೂ ಮಾದಕ ವಸ್ತು ಪೆಡ್ಲರ್‌ಗಳು ನಿರ್ಭಯವಾಗಿ ತಮ್ಮ ದುಷ್ಕೃತ್ಯ ನಡೆಸುತ್ತಿದ್ದಾರೆ ಎಂಬುದಕ್ಕೆ ಇಂದಿನ ದಾಳಿಯೇ ಸಾಕ್ಷಿಯಾಗಿದೆ. ಪೊಲೀಸರ ಕಣ್ಗಾವಲು ತಪ್ಪಿಸಿ ಇಷ್ಟೊಂದು ಪ್ರಮಾಣದ ಗಾಂಜಾ ಹೇಗೆ ತರಿಸಿಕೊಂಡರು, ಮನೆಯಲ್ಲಿ ಇಷ್ಟು ಸಂಖ್ಯೆಯ ಮಾರಕಾಸ್ತ್ರಗಳನ್ನು ಇಟ್ಟುಕೊಂಡಿದ್ದು ಏಕೆ? ಗಾಂಜಾ ಮಾರಾಟದ ಜತೆಗೆ ಇನ್ಯಾವ ಅಪರಾಧ ಕೃತ್ಯ ನಡೆಸುತ್ತಿದ್ದರು ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸಬೇಕಿದೆ. ಪೆಡ್ಲರ್‌ಗಳು ಹಾಗೂ ಸೇವನೆ ಮಾಡುವವರನ್ನು ಕಠಿಣ ಶಿಕ್ಷೆಗೆ ಗುರಿಯಾಗಿಸದಿದ್ದರೆ ಅಪರಾಧ ಕೃತ್ಯಗಳನ್ನು ತಡೆಯುವುದು ಕಷ್ಟಸಾಧ್ಯವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net