ಪ್ರದರ್ಶನವಾದ ಗಾಂಧಿ- ಅಂಬೇಡ್ಕರ್ ಬದುಕು

ರಂಗಾಯಣದ ಶ್ರೀರಂಗದಲ್ಲಿ ದೇಸಿರಂಗ ಸಾಂಸ್ಕೃತಿಕ ಸಂಸ್ಥೆ ಭಾನುವಾರ ಆಂೋಜಿಸಿದ್ದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಶಂಕರ್ ದೇವನೂರು, ಡಾ.ಬಿ.ಎಸ್. ದಿನಮಣಿ, ಕೃಷ್ಣ ಜನಮನ ಇತರರಿದ್ದರು.
ರಂಗಾಯಣದ ಶ್ರೀರಂಗದಲ್ಲಿ ದೇಸಿರಂಗ ಸಾಂಸ್ಕೃತಿಕ ಸಂಸ್ಥೆ ಭಾನುವಾರ ಆಂೋಜಿಸಿದ್ದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಶಂಕರ್ ದೇವನೂರು, ಡಾ.ಬಿ.ಎಸ್. ದಿನಮಣಿ, ಕೃಷ್ಣ ಜನಮನ ಇತರರಿದ್ದರು.
Published on
ಮೈಸೂರು: ಚರಿತ್ರೆಗಳ ಹಿಂದೆ ಚೈತನ್ಯವಿದೆ. ಗಾಂಧಿ ಮತ್ತು ಅಂಬೇಡ್ಕರ್ ಅವರ ಬದುಕು ನಿದರ್ಶನವಾಗಿತ್ತು. ಅದರೆ ಅವರ ಅನುಯಾಯಿಗಳದ್ದು ಪ್ರದರ್ಶನವಾಯಿತು ಎಂದು ಸಂಸ್ಕ ೃತಿ ಚಿಂತಕ ಶಂಕರ್ ದೇವನೂರು ತಿಳಿಸಿದ್ದಾರೆ.
ರಂಗಾಯಣದ ಶ್ರೀರಂಗದಲ್ಲಿ ದೇಸಿರಂಗ ಸಾಂಸ್ಕೃತಿಕ ಸಂಸ್ಥೆ ಭಾನುವಾರ ಆಂೋಜಿಸಿದ್ದ ಯುವ ಜನತೆಗಾಗಿ ಗಾಂಧಿ ಮತ್ತು ಅಂಬೇಡ್ಕರ್ ಸಿದ್ಧಾಂತಗಳು ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ವಾತನಾಡಿದರು.
ಅಂಬೇಡ್ಕರ್ ಅವರ ಹಿಂದಿನ ಚೈತನ್ಯ ರವಾಬಾಯಿ ಆಗಿದ್ದರು. ಮಹಾತ್ಮ ಗಾಂಧೀಜಿ ರಾಷ್ಟ್ರಪಿತ ಆದರೆ, ಅಂಬೇಡ್ಕರ್ ರಾಷ್ಟ್ರವಾತೆ. ಆದರೆ ನಾವು ಅವರನ್ನು ಪ್ರತಿಮೆಂುಲ್ಲಿ ಕೂಡಿಡುತ್ತಿದ್ದೇವೆ. ನಮ್ಮದು ಪ್ರದರ್ಶನವಾಗಿರುವುದು ಜಗತ್ತಿನ ದೊಡ್ಡ ದುರಂತ ಎಂದರು.
ನಾವು ಓದಿನ ವಿರೋಧಿಗಳಾಗಿದ್ದೇವೆ. ಅಂಬೇಡ್ಕರ್ ದಿನದ 14 ಗಂಟೆಗಳ ಕಾಲ ಓದುತ್ತಿದ್ದರು. ಅವರಲ್ಲಿ ಸುವಾರು 50 ಸಾವಿರ ಪುಸ್ತಕಗಳಿದ್ದವು. ಈ ವಿಷಂುದಲ್ಲಿ ನಾವು ಆತ್ಮ ಮುಟ್ಟಿಕೊಂಡು ನಡೆದುಕೊಳ್ಳಬೇಕು. ನಾವು ಎಷ್ಟು ಗಂಟೆ ಓದುತ್ತೇವೆ. ನಮ್ಮ ಮನೆಂುಲ್ಲಿ ಪುಸ್ತಕ ಎಷ್ಟಿದೆ? ನಾವು ಪ್ರತಿಮೆಗಳಲ್ಲಿ ನಿಲ್ಲುವುದಲ್ಲ. ನನ್ನ ಪ್ರತಿಮೆಂು ವಾಡಿ ನೀವು ಮೆರೆಂುುವುದು, ಮೆರೆಸುವುದು ವ್ಯರ್ಥ ಎಂಬ ಕವಿವಾಣಿಂುಂತೆ, ನಿಮ್ಮ ಹೃದಂುದಲ್ಲಿ ಕಿವಿ ತೆರೆದರೆ ಸಾಲದು, ಕೇಳಬೇಕು, ಕಣ್ಣು ತೆರೆದರೆ ಸಾಲದು ನೋಡುವುದನ್ನೂ ಕಲಿಂುಬೇಕು ಎಂದರು.
ಗಾಂಧಿ ಯಾವತ್ತೂ ಸತ್ಯದ ಪರವಾಗಿದ್ದರು. ಅಂಬೇಡ್ಕರ್ ಮತ್ತು ಗಾಂಧಿ ನಡುವೆ ಸೈದ್ಧಾಂತಿಕ ವೈರುಧ್ಯ ಇರಬಹುದು. ಆದರೆ ಇಂದು ಬೇಕಾಗಿರುವುದು ಸಮನ್ವಯ. ಅದು ಯಾರ ಪರವೂ ಅಲ್ಲ, ವಿರೋಧವೂ ಅಲ್ಲ. ನಾಸ್ತಿಕ ವಾದವೂ ಅಲ್ಲ. ಆಸ್ತಿಕ ವಾದವೂ ಅಲ್ಲ. ಆದರೆ ನಾವು ಇಂದು ಸತ್ಯಕ್ಕೆ ಸಾಕ್ಷಿ ಕೇಳುವ ಕಾಲಘಟ್ಟದಲ್ಲಿದ್ದೇವೆ ಎಂದು ಹೇಳಿದರು.
ಯುವ ಜನತೆಗಾಗಿ ಅಂಬೇಡ್ಕರ್ ತತ್ವಗಳು ಕುರಿತು ಸಹಾಯಕ ಪ್ರಾಧ್ಯಾಪಕ ಡಾ. ಕೃಷ್ಣಮೂರ್ತಿ ಚಮರಂ ವಾತನಾಡಿದರು. ಯುವ ಜನತೆಗಾಗಿ ಗಾಂಧಿ ತತ್ವಗಳು ಕುರಿತು ಉಪನ್ಯಾಸಕಿ ಡಾ.ಬಿ.ಎಸ್. ದಿನಮಣಿ ವಾತನಾಡಿದರು. ಈ. ಧನಂಜಂು ಎಲಿಯೂರು ಗಾಂಧಿ ಮತ್ತು ಅಂಬೇಡ್ಕರ್ ವಿಚಾರಗಳ ಸಮನ್ವಯ ಕುರಿತು ವಿಚಾರ ಮಂಡಿಸಿದರು. ಶಾಂತಲಾ ಕಲಾ ತಂಡದ ಅಧ್ಯಕ್ಷ ವೆಂಕಟರಾಜು ಅಧ್ಯಕ್ಷತೆ ವಹಿಸಿದ್ದರು. ಕೃಷ್ಣ ಜನಮನ ಕಾರ್ಯಕ್ರಮದಲ್ಲಿ ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net