ಮೈಸೂರಿನಲ್ಲಿ ಹೆಚ್‌ಡಿಎಫ್‌ಸಿ ಸೆಕ್ಯೂರಿಟೀಸ್ ಹೊಸ ಶಾಖೆ ಪ್ರಾರಂಭ

 ದಕ್ಷಿಣ ಭಾರತದಲ್ಲಿ ನೆಟ್‌ ವರ್ಕ್ ಮತ್ತಷ್ಟು ವಿಸ್ತರಣೆ
ದಕ್ಷಿಣ ಭಾರತದಲ್ಲಿ ನೆಟ್‌ ವರ್ಕ್ ಮತ್ತಷ್ಟು ವಿಸ್ತರಣೆ
Published on

ಪ್ರಮುಖ ಮುಖ್ಯಾಂಶಗಳು

  • ದಕ್ಷಿಣ ಭಾರತದಲ್ಲಿ ನೆಟ್‌ ವರ್ಕ್ ಮತ್ತಷ್ಟು ವಿಸ್ತರಣೆ

ದೇಶದ ಪ್ರಮುಖ ಆರ್ಥಿಕ ಸೇವಾ ಸಂಸ್ಥೆ ಹಾಗೂ ಹೆಚ್‌ಡಿಎಫ್‌ಸಿ ಬ್ಯಾಂಕ್‌ ನ ಅಂಗಸಂಸ್ಥೆಯಾಗಿರುವ ಹೆಚ್‌ಡಿಎಫ್‌ಸಿ ಸೆಕ್ಯೂರಿಟೀಸ್, ಮೈಸೂರು ನಗರದ ಆರ್ಥಿಕ ಪ್ರಗತಿ ಮತ್ತು ಇಲ್ಲಿನ ನಿವಾಸಿಗಳ ಹೂಡಿಕೆಯ ಆಕಾಂಕ್ಷೆಗಳನ್ನು ಬೆಂಬಲಿಸುವ ಉದ್ದೇಶದಿಂದ ತನ್ನ ನೂತನ ಶಾಖೆಯನ್ನು ನಗರದಲ್ಲಿ ಅಧಿಕೃತವಾಗಿ ಉದ್ಘಾಟಿಸಿದೆ.

ಹೆಚ್‌ಡಿಎಫ್‌ಸಿ ಬ್ಯಾಂಕ್‌ನ ವಲಯ ಮುಖ್ಯಸ್ಥ ಶ್ರೀ ರಘುನಾಥನ್ ಉಲ್ಲಾತಿಲ್ ಹಾಗೂ ಹೆಚ್‌ಡಿಎಫ್‌ಸಿ ಸೆಕ್ಯೂರಿಟೀಸ್‌ ನ ಸಿಒಒ ಮತ್ತು ಪೂರ್ಣಾವಧಿ ನಿರ್ದೇಶಕ ಶ್ರೀ ಆಶಿಶ್ ರಾಠಿ ಅವರು ನೂತನ ಶಾಖೆಯ ಉದ್ಘಾಟನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ದಕ್ಷಿಣ ಭಾರತದ ಪ್ರಾದೇಶಿಕ ಮುಖ್ಯಸ್ಥ ಲೈಜು ಎಲ್‌ಆರ್, ಕ್ಲಸ್ಟರ್ ಮುಖ್ಯಸ್ಥ ದಿನೇಶ್ ಹೆಚ್.ಎಸ್, ಮತ್ತು ಮೈಸೂರು ಶಾಖೆಯ ವ್ಯವಸ್ಥಾಪಕ ಕೃಷ್ಣ ಡಿ. ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ನಗರ ಪ್ರದೇಶಗಳಲ್ಲಿ ಒಂದಾಗಿರುವ ಹಾಗೂ ಕರ್ನಾಟಕದ ಪ್ರಮುಖ ತಂತ್ರಜ್ಞಾನ ಮತ್ತು ಕೈಗಾರಿಕಾ ಹಬ್ ಆಗಿ ಹೊರಹೊಮ್ಮುತ್ತಿರುವ ಮೈಸೂರು, ಬೆಂಗಳೂರು, ಹುಬ್ಬಳ್ಳಿ ಮತ್ತು ಮಂಗಳೂರಿನಂತೆ ಪ್ರಮುಖ ಆರ್ಥಿಕ ಕೇಂದ್ರವಾಗಿದೆ. ಪ್ರಮುಖ ಐಟಿ ಕಂಪನಿಗಳು, ಸಾಂಪ್ರದಾಯಿಕ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಷ್ಟೇ ಅಲ್ಲದೆ, ತಂತ್ರಜ್ಞಾನ, ಆರೋಗ್ಯ, ಶಿಕ್ಷಣ, ರಕ್ಷಣೆ, ಪ್ರವಾಸೋದ್ಯಮ ಸೇರಿದಂತೆ ವಿವಿಧ ವಲಯಗಳ 400ಕ್ಕೂ ಹೆಚ್ಚು ಸ್ಟಾರ್ಟ್‌ ಅಪ್‌ ಗಳಿಗೆ ಮೈಸೂರು ತಾಣವಾಗಿದೆ. ಜೊತೆಗೆ ನಗರವು ಶೇ. 87.55ರಷ್ಟು ಅಧಿಕ ಸಾಕ್ಷರತಾ ಪ್ರಮಾಣವನ್ನು ಹೊಂದಿದೆ.
ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಹೆಚ್‌ಡಿಎಫ್‌ಸಿ ಸೆಕ್ಯೂರಿಟೀಸ್‌ ನ ಸಿಓಓ ಆಶಿಶ್ ರಾಠಿ ಅವರು, "ಮೈಸೂರು ನಗರವು ಯುವ ಉದ್ಯಮಿಗಳು, ವೃತ್ತಿಪರರು ಹಾಗೂ ಗುಣಮಟ್ಟದ ಹಣಕಾಸು ಸಲಹೆ ಬಯಸುವ ವಿದ್ಯಾರ್ಥಿಗಳಿಂದ ಕೂಡಿದ ಅದ್ಭುತ ಆರ್ಥಿಕ ಶಕ್ತಿಯಾಗಿದೆ. ಮೈಸೂರಿನ ದೀರ್ಘಕಾಲೀನ ಬೆಳವಣಿಗೆಯ ಸಾಮರ್ಥ್ಯದ ಮೇಲೆ ನಮಗಿರುವ ನಂಬಿಕೆಗೆ ಈ ಹೊಸ ಶಾಖೆ ಸಾಕ್ಷಿಯಾಗಿದೆ. ನಾವು ಕೇವಲ ನಮ್ಮ ಜಾಲವನ್ನು ವಿಸ್ತರಿಸುತ್ತಿಲ್ಲ, ಬದಲಿಗೆ ಈ ಪ್ರಗತಿಪರ ನಗರದಲ್ಲಿ ನಮ್ಮ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿದ್ದೇವೆ" ಎಂದರು.
ಪ್ರತಿಯೊಬ್ಬ ಹೂಡಿಕೆದಾರರ ಅಗತ್ಯವೂ ಭಿನ್ನವಾಗಿರುತ್ತದೆ ಎಂಬುದನ್ನು ಮನಗಂಡಿರುವ ಹೆಚ್‌ಡಿಎಫ್‌ಸಿ ಸೆಕ್ಯೂರಿಟೀಸ್, ಡಿಜಿಟಲ್ ಸೇವೆಗಳ ಜೊತೆಗೆ ನೇರ ಸಂಪರ್ಕ ಬಯಸುವ ಹೂಡಿಕೆದಾರರಿಗಾಗಿ ಪ್ರತ್ಯಕ್ಷ ಸಲಹಾ ಸೇವೆಯನ್ನು ಒದಗಿಸುತ್ತಿದೆ.
ಮೊದಲ ಬಾರಿಗೆ ಷೇರು ಮಾರುಕಟ್ಟೆಗೆ ಪ್ರವೇಶಿಸುತ್ತಿರುವ ಹೂಡಿಕೆದಾರರಿಂದ ಹಿಡಿದು, ಸಂಕೀರ್ಣವಾದ ಮಲ್ಟಿ-ಅಸ್ಸೆಟ್ ಪೋರ್ಟ್‌ಫೋಲಿಯೋ ನಿರ್ವಹಿಸುವವರೆಗೆ ಪ್ರತಿಯೊಬ್ಬರಿಗೂ ನೆರವಾಗಲು ನೂತನ ಮೈಸೂರು ಶಾಖೆಯಲ್ಲಿ ಅನುಭವಸ್ಥ ರಿಲೇಶನ್‌ ಶಿಪ್ ಮ್ಯಾನೇಜರ್‌ ಗಳ ತಂಡ ಲಭ್ಯವಿರುತ್ತದೆ. ಗ್ರಾಹಕರು ನೇರವಾಗಿ ಶಾಖೆಗೆ ಭೇಟಿ ನೀಡಿ, ತಮ್ಮ ಹಣಕಾಸಿನ ಗುರಿಗಳಿಗೆ ತಕ್ಕಂತೆ ಹೂಡಿಕೆ ಯೋಜನೆಗಳನ್ನು ರೂಪಿಸಿಕೊಳ್ಳಬಹುದಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net