ಬೈಲುಕುಪ್ಪೆ: ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಬಿ.ಎಂ. ರಸ್ತೆ ಸಮೀಪದಲ್ಲಿರುವ ಕಾವೇರಿ ಮಾತೆಗೆ ಹುಣ್ಣಿಮೆಯ ಪ್ರಯುಕ್ತ ವಿಶೇಷ ಪೂಜೆ ಸೋಮವಾರ ನೆರವೇರಿಸಲಾಯಿತು. ಸಂಘದ ಅಧ್ಯಕ್ಷ ಬೇಬೀಂದ್ರ ಪ್ರಸಾದ್, ಬೆಂಗಳೂರಿನ ಸುನಂದಾ ಕೌಶಿಕ್ ಸಮ್ಮುಖದಲ್ಲಿ ಅರ್ಚಕ ಪ್ರಸನ್ನ ಭಟ್ಟ ಅವರು ಕಾವೇರಿ ನದಿಯಿಂದ ನೀರನ್ನು ತಂದು ಸ್ವಚ್ಛಗೊಳಿಸಿ ಹಾಲು, ಜೇನುತುಪ್ಪ, ಎಳನೀರು ಹಾಗೂ ಎಡೆ ನೈವೇದ್ಯ ಮಾಡಿ ಹೊಸ ಸೀರೆ ಕುಪ್ಪಸ, ಒಡವೆಗಳನ್ನು ಧರಿಸಿ ವಿವಿಧ ಹೂಗಳಿಂದ ಅಲಂಕರಿಸಿ ಮಹಾ ಮಂಗಳಾರತಿ ನೆರೆವೇರಿಸಿದರು. ಬಾರವಿ ಕಾವೇರಿ ಕನ್ನಡ ಸಂಘದ ಪದಾಧಿಕಾರಿಗಳಾದ ರವೀಂದ್ರ ಪ್ರಸಾದ್, ವಿಜಯೇಂದ್ರ ಪ್ರಸಾದ್, ಚಂದ್ರು, ರುದ್ರೇಶ್, ಮುಖಂಡ ಅವರ್ತಿ ಸೋಮಶೇಖರ್, ಮಹಿಳೆಯರು ಸೇರಿದಂತೆ ತರರು ಇದ್ದರು. ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.