ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ವಿತರಣೆ

ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರ ಜನ್ಮ ದಿನಾಚರಣೆ ಅಂಗವಾಗಿ ತಿ.ನರಸೀಪುರ ಪಟ್ಟಣದ ಸಾರ್ವಜನಿಕ ಆಸ್ವತ್ರೆಯಲ್ಲಿ ಮಂಗಳವಾರ ರೋಗಿಗಳಿಗೆ ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರು ಹಣ್ಣು ಹಂಪಲು ವಿತರಿಸಿದರು. ಸಿ.ಬಿ ಹುಂಡಿ ಚಿನ್ನಸ್ವಾಮಿ, ಕೆ.ಎನ್.ಪ್ರಭುಸ್ವಾಮಿ, ಗಣೇಶಸ್ವಾಮಿ, ಬಿ.ಎಂ.ಶಿವಕುಮಾರ್, ಮಣಿಕಂಠ, ಕುಮಾರ್ ಇದ್ದರು.
ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರ ಜನ್ಮ ದಿನಾಚರಣೆ ಅಂಗವಾಗಿ ತಿ.ನರಸೀಪುರ ಪಟ್ಟಣದ ಸಾರ್ವಜನಿಕ ಆಸ್ವತ್ರೆಯಲ್ಲಿ ಮಂಗಳವಾರ ರೋಗಿಗಳಿಗೆ ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರು ಹಣ್ಣು ಹಂಪಲು ವಿತರಿಸಿದರು. ಸಿ.ಬಿ ಹುಂಡಿ ಚಿನ್ನಸ್ವಾಮಿ, ಕೆ.ಎನ್.ಪ್ರಭುಸ್ವಾಮಿ, ಗಣೇಶಸ್ವಾಮಿ, ಬಿ.ಎಂ.ಶಿವಕುಮಾರ್, ಮಣಿಕಂಠ, ಕುಮಾರ್ ಇದ್ದರು.
Published on
ತಿ.ನರಸೀಪುರ: ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಕೆಕ್ ಕತ್ತರಿಸಿ, ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ವಿತರಿಸುವ ಮೂಲಕ ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರ 66ನೇ ವರ್ಷದ ಹುಟ್ಟುಹಬ್ಬವನ್ನು ಮಂಗಳವಾರ ಆಚರಿಸಿದರು.
ಜೆಡಿಎಸ್ ಕ್ಷೇತ್ರಾಧ್ಯಕ್ಷ ಸಿ.ಬಿ.ಹುಂಡಿ ಚಿನ್ನಸ್ವಾಮಿ ಮಾತನಾಡಿ, ನಮ್ಮೆಲ್ಲರ ನಾಯಕರಾಗಿರುವ ಕುಮಾರಸ್ವಾಮಿ ಅವರಿಗೆ ಆರೋಗ್ಯ, ಆಯುಷ್ಯ ಹಾಗೂ ರಾಜಕೀಯ ಜೀವನದಲ್ಲಿ ಇನ್ನಷ್ಟು ಯಶಸ್ಸು ದೊರಕಲಿ. ರಾಜ್ಯದ ರೈತರಿಗೆ ಸಾಲಮನ್ನಾ, ನೀರಾವರಿ ಸೌಲಭ್ಯ, ದೀನ ದಲಿತರು, ಶೋಷಿತರು ಹಾಗೂ ಹಿಂದುಳಿದ ವರ್ಗಗಳ ಪರವಾಗಿ ಸದ ಧ್ವನಿ ಎತ್ತಿ, ಅನೇಕ ಜನಪರ ಕೆಲಸಗಳನ್ನು ಮಾಡಿದ್ದಾರೆ ಎಂದು ತಿಳಿಸಿದರು.
ಜಿಪಂ ಮಾಜಿ ಸದಸ್ಯ ಎಸ್.ವಿ.ಜಯಪಾಲ ಭರಣಿ, ಮುಖಂಡರಾದ ಕೆ.ಎನ್.ಪ್ರಭುಸ್ವಾಮಿ, ಗಣೇಶಸ್ವಾಮಿ, ಹೊನ್ನನಾಯಕ, ಅಡಿಗೆ ಸುರೇಶ್, ಮಣಿಕಂಠ, ಕಟ್ಟೇಪುರ ಸಿದ್ದಪ್ಪ, ಸೋಮಣ್ಣ, ಕನಹಳ್ಳಿ ಮಹದೇವ, ರಮೇಶ್, ಸ್ವಾಮಿ, ದೊಡ್ಡಮಾದನಾಯಕ, ಕೆ.ಎಂ.ಕುಮಾರ್, ಸೋಸಲೆ ರಾಜಣ್ಣ, ಮಹದೇವಪ್ಪ, ತಿರುಮಕೂಡಲು ಜಯರಾಂ ಹಾಗೂ ಜೆಡಿಎಸ್ ಕಾರ್ಯಕರ್ತರು ಇದ್ದರು.
ಪಟ್ಟಣದ ಶ್ರೀ ಗುಂಜಾ ನರಸಿಂಹ ಸ್ವಾಮಿ ದೇವಾಲಯದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ 66ನೇ ಜನ್ಮದಿನದ ಪ್ರಯುಕ್ತ ಜೆಡಿಎಸ್ ಮಾಧ್ಯಮ ವಕ್ತಾರ ತಾಯೂರು ಪ್ರಕಾಶ್ ಅವರು ವಿಶೇಷ ಪೂಜೆ ಸಲ್ಲಿಸಿ, ಕಾರ್ಯಕರ್ತರು ಹಾಗೂ ಅಭಿಮಾನಿಗಳೊಂದಿಗೆ ಸಿಹಿ ಹಂಚಿದರು.
ಗ್ರಾಪಂ ಮಾಜಿ ಉಪಾಧ್ಯಕ್ಷ ನಾಗರಾಜಮೂರ್ತಿ, ನಿಲಸೋಗೆ ಮಹೇಶ್, ಆಲಗೂಡು ರಮೇಶ್, ಟೈಲರ್ ಸ್ವಾಮಿ, ದೊಡ್ಡ ಮಾದನಾಯಕ, ಗ್ರಾಪಂ ಸದಸ್ಯ ಕುಮಾರ್, ಮಹದೇವಪ್ಪ, ಜೆಡಿಎಸ್ ಕಾರ್ಯಕರ್ತರು, ಅಭಿಮಾನಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net