_1785925840728.webp?w=480&auto=format%2Ccompress&fit=max)
_1785925840728.webp?w=480&auto=format%2Ccompress&fit=max)
ಹುಣಸೂರು :
ತಾಲೂಕಿನಲ್ಲಿ 658 ಜನ ಆನ್‌ಲೈನ್ ಮೂಲಕ ಎನ್ಯುಮರೇಷನ್ ಫಾರಂ(ಮತದಾರರ ಗಣತಿ ನಮೂನೆ) ಸಲ್ಲಿಸಿದ್ದು, ಈ ಎಲ್ಲ ಅರ್ಜಿಗಳನ್ನು ಡಿಜಿಟಲೀಕರಣ ಮಾಡಲಾಗಿದೆ ಎಂದು ಸಹಾಯಕ ನೋಂದಣಾಧಿಕಾರಿ, ತಹಸೀಲ್ದಾರ್ ಜೆ.ಮಂಜುನಾಥ್ ತಿಳಿಸಿದರು.
ಸದ್ಯ ಎಲ್ಲ ರಾಜಕೀಯ ಪಕ್ಷಗಳಿಗೂ ಎಎಸ್‌ಡಿಡಿಒ ಪಟ್ಟಿಯನ್ನು ಒದಗಿಸಲಾಗಿದೆ. ಆ.8ರೊಳಗೆ ಪಟ್ಟಿಯಲ್ಲಿರುವ ವರ್ಗಾವಣೆಯಾದ ಮತದಾರ ಇಲ್ಲೇ ಇದ್ದಲ್ಲಿ, ಬಿಎಲ್‌ಒಗಳು ಮೂರು ಬಾರಿ ಮನೆಗೆ ಬಂದಾಗಲೂ ಗೈರಾದವರು ಇರುವ ಸ್ಥಳದ ಮಾಹಿತಿ ಮುಂತಾದ ವಿಷಯಗಳನ್ನು ಬಿಎಲ್‌ಒಗಳಿಗೆ ನೀಡಿದಲ್ಲಿ ಅಂತಹ ಮತದಾರರನ್ನು ಪಟ್ಟಿಯಲ್ಲಿ ಸೇರಿಸಲಾಗುವುದು. ಅರ್ಹರನ್ನು ಪಟ್ಟಿಯಲ್ಲಿ ಉಳಿಸಿಕೊಳ್ಳಲು ಎಲ್ಲರೂ ಕಾರ್ಯ ನಿರ್ವಹಿಸೋಣ ಎಂದರು.