ದಸಂಸ ಎಲ್ಲ ಬಣಗಳ ಒಗ್ಗೂಡಿಸಿ ಒಕ್ಕೂಟ ರಚನೆ

ಸರಗೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ದಲಿತ ಸಂಘರ್ಷ ಸಮಿತಿ ಎಲ್ಲ ಬಣಗಳ ಕಾರ್ಯಕರ್ತರು ಒಕ್ಕೂಟ ರಚಿಸುವ ಸಲುವಾಗಿ ಗುರುವಾರ ಪೂರ್ವಭಾವಿ ಸಭೆ ನಡೆಸಿದರು. ಸಣ್ಣಸ್ವಾಮಿ, ಮಲ್ಲಿಕಾರ್ಜುನ, ಲಕ್ಷ್ಮಣ್, ನಾಗಣ್ಣ, ಗೋವಿಂದ ಇತರರಿದ್ದರು.
ಸರಗೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ದಲಿತ ಸಂಘರ್ಷ ಸಮಿತಿ ಎಲ್ಲ ಬಣಗಳ ಕಾರ್ಯಕರ್ತರು ಒಕ್ಕೂಟ ರಚಿಸುವ ಸಲುವಾಗಿ ಗುರುವಾರ ಪೂರ್ವಭಾವಿ ಸಭೆ ನಡೆಸಿದರು. ಸಣ್ಣಸ್ವಾಮಿ, ಮಲ್ಲಿಕಾರ್ಜುನ, ಲಕ್ಷ್ಮಣ್, ನಾಗಣ್ಣ, ಗೋವಿಂದ ಇತರರಿದ್ದರು.
Published on
ಸರಗೂರು: ತಾಲೂಕಿನ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ದಂದು ದಲಿತ ಸಂಘರ್ಷ ಸಮಿತಿ ಎಲ್ಲ ಬಣಗಳನ್ನು ಒಗ್ಗೂಡಿಸಿ ಒಕ್ಕೂಟ ರಚನೆ ಮಾಡಲು ಪೂರ್ವಭಾವಿ ಸಭೆ ನಡೆಸಿ ವಿವಿಧ ಇಲಾಖೆಗಳ ಅಧಿಕಾರಿಗಳಿಂದ ದಿನ ದಲಿತರಿಗೆ ಹಾಗೂ ರೈತರಿಗೆ ಅನ್ಯಾಯವಾಗುತ್ತಿದೆ. ಅಧಿಕಾರಿಗಳ ವಿರುದ್ಧ ಧ್ವನಿ ಎತ್ತಿ ಬೃಹತ್ ಪ್ರತಿಭಟನೆ ಮಾಡಲು ತೀರ್ಮಾನಿಸಲಾಯಿತು.
ಸಭೆಯನ್ನು ಮಾತನಾಡಿದ ಪದಾಧಿಕಾರಿಗಳು ರಾಜ್ಯದಲ್ಲಿ ಎಚ್.ಡಿ.ಕೋಟೆ ಮತ್ತು ಸರಗೂರು ಒಂದೇ ತಾಲೂಕು ಆಗಿದ್ದಾಗ ಹಲವಾರು ಚಳವಳಿಗಾರರನ್ನು ಹುಟ್ಟುಹಾಕಿದ ಹೆಮ್ಮೆ ದಸಂಸಕ್ಕೆ ಇದೆ. 70ರ ದಸಕದಿಂದಲೂ ಎಲ್ಲಿ ಅನ್ಯಾಯ, ಭ್ರಷ್ಟಾಚಾರ, ಅತ್ಯಾಚಾರ, ದೌರ್ಜನ್ಯ ನಡೆದ ಸಂದರ್ಭದಲ್ಲಿ ಅನ್ಯಾಯವನ್ನು ಖಂಡಿಸಿ ಹೋರಾಟ ಮಾಡುತ್ತಾ ನ್ಯಾಯವನ್ನು ದೊರಕಿಸಿಕೊಡಲು ಯಶಸ್ವಿಯಾದ ಸಂಘಟನೆ. ಸಂಘಟನೆ ಕೂಗಿದ ಘೋಷಣೆಗಳು ಕಾನೂನಾಗಿ ಜನಸಾಮಾನ್ಯರು, ನೊಂದವರು, ದೀನ-ದಲಿತರಿಗೆ ನೇರವಾಗಿ ದೊರಕುವಂತಾಗಿದೆ. ಅಧಿಕಾರಿ ವರ್ಗಗಳು ಅನ್ಯಾಯ, ಭ್ರಷ್ಟಾಚಾರ ಮಾಡಲು ಹೆದರುತ್ತಿದ್ದರು. ಸರ್ಕಾರಗಳು ದಲಿತ ಸಂಘರ್ಷ ಸಮಿತಿ ಚಳವಳಿಯನ್ನು ಹಮ್ಮಿಕೊಂಡಿದೆ ಎಂದರೆ ನಡುಗುತ್ತಿದ್ದವು, ಆದರೆ ಪ್ರಸ್ತುತ ವಿವಿಧ ಬಣಗಳಾಗಿರಬಹುದು. ಆದರೆ ಎಲ್ಲರ ಉದ್ದೇಶ ಬಾಬಾ ಸಾಹೇಬರ ತತ್ವ ಸಿದ್ಧಾಂತಗಳ ಅನುಸರಿಸಿಕೊಂಡು ಹೋಗುವುದಾಗಿದೆ.
ಆದರೆ ನಾವು ಚಿದ್ರವಾಗುವುದು ಬೇಡ. ಸರಗೂರು ತಾಲೂಕಿನಲ್ಲಿ ಎಲ್ಲರೂ ಸೇರಿ ಒಂದು ಒಕ್ಕೂಟವನ್ನು ರಚಿಸಿ ನಮಗೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ಜನಸಾಮಾನ್ಯರು, ದೀನ-ದಲಿತರಿಗೆ ನೊಂದವರಿಗೆ ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದ ಸರಗೂರು ತಾಲೂಕಿನಲ್ಲಿ ಒಕ್ಕೂಟವನ್ನು ರಚಿಸಬೇಕೆಂದು ತೀರ್ಮಾನಿಸಲಾಯಿತು. ಮುಂದೆ ಚಳವಳಿಯ ಮೂಲಕ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳೋಣ ಎಂದು ಎಲ್ಲ ಪದಾಧಿಕಾರಿಗಳು ಒಮ್ಮತ ಅಭಿಪ್ರಾಯ ವ್ಯಕ್ತಪಡಿಸಿದರು.
4 ದಶಕಗಳಿಗೂ ಹೆಚ್ಚು ಕಾಲ ನಾಡಿನ ದಿಕ್ಕು-ದೆಸೆಯಂತಿದ್ದ ‘ದಲಿತ ಸಂಘರ್ಷ ಸಮಿತಿ (ದಸಂಸ) ಈಗ ಮತ್ತೆ ಧ್ವನಿ ಎತ್ತಬೇಕಿದೆ. ರಚನಾತ್ಮಕ ಕಾರ್ಯಗಳ ಮೂಲಕ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬಯಸಿದ ಪ್ರಜಾಪ್ರಭುತ್ವ ಸಮಾಜವನ್ನು ಕಟ್ಟಬೇಕಿದೆ ಎಂದರು.
ಒಕ್ಕೂಟ ಮಾಡುವ ಉದ್ದೇಶವೆಂದರೆ ತಾಲೂಕಿನ ಎಲ್ಲ ಸಮಾಜದ, ಸಮುದಾಯದ ಜನರಿಗೆ ಹಾಗೂ ರೈತರಿಗೆ ತಹಸೀಲ್ದಾರ್ ಕಚೇರಿ ಹಾಗೂ ವಿವಿಧ ಇಲಾಖೆಯಲ್ಲಿ ಬರುವ ಸಾರ್ವಜನಿಕರಿಗೆ ಕೆಲಸ ಕಾರ್ಯಗಳು ಮಾಡಿಕೊಡದೆ ಜನರನ್ನು ಅಲೆದಾಡುಸುತ್ತಿರುವ ವಿರುದ್ಧ ಧ್ವನಿ ಎತ್ತುವ ಕೆಲಸ ಮಾಡಬೇಕಾಗಿದೆ ಎಂದರು.
ದಲಿತ ಸಂಘರ್ಷ ಸಮಿತಿ ಒಕ್ಕೂಟ ರಚನೆ ರೂಪುಗೊಳ್ಳಬೇಕಾಗಿದೆ. ಈ ಒಕ್ಕೂಟವು ತಾಲೂಕಿನಲ್ಲಿ ಪ್ರಾಯೋಗಿಕವಾಗಿ ಕೆಲವೊಂದು ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ. ಆ ಮೂಲಕ ಒಕ್ಕೂಟದಡಿ ಎಲ್ಲ ಬಣಗಳು ಸಾಗುವಂತೆ ಮಾಡುವುದು ಇದರ ಉದ್ದೇಶವಾಗಿದೆ ಎಂದರು.
ಸಭೆಯಲ್ಲಿ ದಸಂಸ ಮುಖಂಡರಾದ ಮಲ್ಲಿಕಾರ್ಜುನ, ಎಸ್.ಡಿ,ಸಣ್ಣಸ್ವಾಮಿ, ಗೋಪಾಲ್, ಲಂಕೆ ಲಕ್ಷ್ಮಣ್, ಕೂಡಗಿ ಗೋವಿಂದರಾಜು, ಚಂದ್ರ, ಅಣ್ಣಯ್ಯಸ್ವಾಮಿ, ಲಂಕೆ ಶ್ರೀನಿವಾಸ, ಹುನಗಹಳ್ಳಿ ಗೋವಿಂದ, ದೇವಲಾಪುರ ಮಹೇಶ್, ಪುಟ್ಟು, ಹಳಿಯೂರು ನಾಗಣ್ಣ, ಕಲೇಶ್, ಹುಚ್ಚಯ್ಯ (ಸೇಟು), ಚಿಕ್ಕಣ್ಣ, ಕಾರಯ್ಯ, ಶಿವಕುಮಾರ್,ರಾಮಣ್ಣ, ಸೋಮೇಶ್,ಚಿನ್ನಯ್ಯ, ಶಿವಮಲ್ಲು, ಹಾಲಯ್ಯ ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net