ಎಲ್ಲ ಸಾಹಿತ್ಯದ ಮೂಲಬೇರು ಜನಪದ : ಡಾ.ಎಂ. ಮಹೇಶ್ ಚಿಕ್ಕಲ್ಲೂರು ಅಭಿಮತ

ಬಡಗಲಹುಂಡಿಯಲ್ಲಿ ಗುರುವಾರ ಕುವೆಂಪುನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆಯೋಜಿಸಿದ್ದ  ಎನ್‌ಎಸ್‌ಎಸ್ ಶಿಬಿರದಲ್ಲಿ ‘ಜನಪದದಲ್ಲಿ ವೈಚಾರಿಕತೆ’ ಕುರಿತು ಜನಪರ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ.ಎಂ. ಮಹೇಶ್ ಚಿಕ್ಕಲ್ಲೂರು ಉಪನ್ಯಾಸ ನೀಡಿದರು. ಅಂಶಿ ಪ್ರಸನ್ನಕುಮಾರ್, ಡಾ.ಆರ್. ಗುರುಸ್ವಾಮಿ, ಡಾ.ವಿಷಕಂಠ, ನಾಗೇಂದ್ರಕುಮಾರ್, ರಾಮಚಂದ್ರೇಗೌಡ ಇದ್ದರು.

Published on
ಮೈಸೂರು: ಜನಪದ ಸಂಸ್ಕೃತಿ ಮರೆತರೆ ದುರಂತದೆಡೆಗೆ ಸಾಗಬೇಕಾಗುತ್ತದೆ ಎಂದು ಜನಪರ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ.ಎಂ. ಮಹೇಶ್ ಚಿಕ್ಕಲ್ಲೂರು ಆತಂಕ ವ್ಯಕ್ತಪಡಿಸಿದರು.
ಕುವೆಂಪುನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಬಡಗಲಹುಂಡಿಯಲ್ಲಿ ಗುರುವಾರ ಆಯೋಜಿಸಿದ್ದ ಎನ್‌ಎಸ್‌ಎಸ್ ಶಿಬಿರದಲ್ಲಿ ‘ಜನಪದದಲ್ಲಿ ವೈಚಾರಿಕತೆ’ ಕುರಿತು ಉಪನ್ಯಾಸ ನೀಡಿದ ಅವರು, ಎಲ್ಲ ಸಾಹಿತ್ಯದ ಮೂಲಬೇರು ಜನಪದ. ಆದ್ದರಿಂದ ಯಾರೂ ಕೂಡ ಜನಪದ ಸಂಸ್ಕೃತಿ ಮರೆಯಬಾರದು ಎಂದರು.
ಜನಪದದಲ್ಲಿ ಸಂಸ್ಕಾರ, ಸಂಸ್ಕೃತಿ ಇದೆ. ಜನಪದರು ಬಾಯಿಂದ ಬಾಯಿಗೆ ಹರಡುತ್ತಾ ಈ ಸಂಸ್ಕಾರ, ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿದ್ದಾರೆ. ಜನಪದ ಸಾಹಿತ್ಯವನ್ನು ಗಮನಿಸಿದರೆ ಹಲವಾರು ವೈಚಾರಿಕ ಹಾಗೂ ಸತ್ಯದ ವಿಷಯಗಳು ಅಡಕವಾಗಿರುವುದು ಗೊತ್ತಾಗುತ್ತದೆ ಎಂದರು.
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಆರ್. ಗುರುಸ್ವಾಮಿ, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿಗಳಾದ ಡಾ.ವಿಷಕಂಠ, ನಾಗೇಂದ್ರಕುಮಾರ್, ಗ್ರಾಮದ ಮುಖಂಡ ರಾಮಚಂದ್ರೇಗೌಡ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net