ವೈದ್ಯಕೀಯ ವಿದ್ಯಾರ್ಥಿಗಳು ರೋಗಿಗಳನ್ನು ಕೇವಲ ಪ್ರಕರಣಗಳಾಗಿ ನೋಡದೆ, ಕುಟುಂಬದ ಸದಸ್ಯರಂತೆ ಕಾಳಜಿ ಮತ್ತು ಸಹಾನುಭೂತಿಯಿಂದ ಚಿಕಿತ್ಸೆ ನೀಡಬೇಕು. ವೈದ್ಯಕೀಯ ವೃತ್ತಿ ಮಾನವೀಯ ಸೇವೆಯಾಗಿದ್ದು, ಜ್ಞಾನ ಮತ್ತು ಕೌಶಲದ ಜತೆಗೆ ಕರುಣೆ, ಪ್ರಾಮಾಣಿಕತೆ ಹಾಗೂ ವಿನಯ ಅಗತ್ಯ. ಜೆಎಸ್‌ಎಸ್ ಪರಂಪರೆಯು ಶಿಕ್ಷಣ, ಶಿಸ್ತು, ಶ್ರೇಷ್ಠತೆ ಮತ್ತು ಸಮಾಜ ಸೇವೆಗೆ ಆದ್ಯತೆ ನೀಡಿದೆ ಎಂದರು.