ಮಾರಕಾಸ್ತ್ರ ಹಿಡಿದು ತಿರುಗುತ್ತಿದ್ದ ಐವರ ಬಂಧನ

ಕ್ರೈಮ್
ಕ್ರೈಮ್
Published on
ಮೈಸೂರು: ನಗರದ ಜಯಲಕ್ಷ್ಮೀಪುರಂನಲ್ಲಿ ಮಾರಕಾಸ್ತ್ರ ಹಿಡಿದು ಓಡಾಡುತ್ತಿದ್ದ ಐವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ವಿನಾಯಕನಗರ ನಿವಾಸಿಗಳಾದ ಪಿ.ಎಸ್.ಕೃಷ್ಣ, ಅಮರ್‌ನಾಥ್, ಎಸ್.ಹರೀಶ್, ಸಚಿನ್, ಮದನ್ ಬಂಧಿತ ಆರೋಪಿಗಳು. ನರಸಿಂಹರಾಜ ಉಪವಿಭಾಗದ ಎಸಿಪಿ ಮಾಥ್ಯೂ ಥಾಮಸ್ ಅವರು ಭಾನುವಾರ ರಾತ್ರಿ ತಮ್ಮ ತಂಡದೊಂದಿಗೆ ಗಸ್ತಿಗೆ ತೆರಳಿದ್ದು, ಮುಂಜಾನೆ 3.30ಕ್ಕೆ ಮೆಟ್ರೊ ಪೊಲೀಸ್ ಅಪಾರ್ಟ್‌ಮೆಂಟ್ ಬಳಿ ಐವರು ಓಡಾಡುತ್ತಿರುವುದು ಕಂಡುಬಂದಿತ್ತು.
ಅವರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ದರೋಡೆ ಮಾಡುವ ಉದ್ದೇಶದಿಂದ ಮಾರಕಾಸ್ತ್ರ ಹಿಡಿದು ಓಡಾಡುತ್ತಿರುವುದಾಗಿ ತಿಳಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಜಯಲಕ್ಷ್ಮೀಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net