ಜ.11ರಂದು ಮಾನಸಗಂಗೋತ್ರಿ ಬಯಲು ರಂಗಮಂದಿರದಿಂದ ವಾಕಥಾನ್ ಆರಂಭಗೊಳ್ಳಲಿದೆ. ಅಂದು ಬೆಳಗ್ಗೆ 5.30ರಿಂದ 6ರವರೆಗೆ ನೋಂದಣಿ, 6ರಿಂದ 6.15ರವರೆಗೆ ವ್ಯಾಯಾಮ, 6.15 ರಿಂದ 6.30ರವರೆಗೆ ನಾಡಗೀತೆ ಹಾಗೂ ವಂದೇ ಮಾತರಂ ಗೀತೆಗಳ ಗಾಯನ ನಡೆಯಲಿದ್ದು, 6.30ಕ್ಕೆ ವಾಕಥಾನ್‌ಗೆ ವಿದ್ಯುಕ್ತ ಚಾಲನೆ ದೊರೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಐರನ್ ಲೇಡಿ ಖ್ಯಾತಿಯ ಉಷಾ ಹೆಗಡೆ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. 5 ಕಿ.ಮೀ ಸಂಚರಿಸಲಿರುವ ವಾಕಥಾನ್, ಬಯಲ ರಂಗಮಂದಿರಿಂದ ಆರಂಭಗೊಂಡು, ಮಾನಸಗಂಗೋತ್ರಿ ಸೆನೆಟ್ ಭವನದ ಆವರಣದಲ್ಲಿ ಅಂತ್ಯವಾಗಲಿದೆ ಎಂದರು.