ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಯಲ್ಲಿ ಆನಂದ್ ಸ್ವೀಟ್ಸ್ & ಸೇವರೀಸ್ ಪ್ರವೇಶ
1988ರಲ್ಲಿ ಸ್ಥಾಪನೆಯಾದ ಬೆಂಗಳೂರಿನ ಹೆಸರಾಂತ ಸಿಹಿತಿಂಡಿ ಸಂಸ್ಥೆ ಆನಂದ್ ಸ್ವೀಟ್ಸ್ & ಸೇವರೀಸ್ ತನ್ನ ಮೊದಲ ಮೈಸೂರಿನ ಮಳಿಗೆಯನ್ನು ವಿಜಯನಗರದ ಕಾಳಿದಾಸ ರಸ್ತೆಯಲ್ಲಿ ಇಂದು ಉದ್ಘಾಟಿಸಿದೆ. ಕರ್ನಾಟಕದಲ್ಲಿ ಬೆಂಗಳೂರಿನ ಹೊರಗೆ ಆರಂಭವಾಗಿರುವ ಸಂಸ್ಥೆಯ ಮೊದಲ ಮಳಿಗೆ ಇದಾಗಿದೆ. ಬೆಂಗಳೂರಿನ ಹೊರತಾಗಿ ಸಂಸ್ಥೆಯು ಬೆಂಗಳೂರು, ಅಹಮದಾಬಾದ್ ಹಾಗೂ ಕೊಚ್ಚಿ ವಿಮಾನ ನಿಲ್ದಾಣಗಳಲ್ಲಿ ತನ್ನ ಮಳಿಗೆಗಳನ್ನು ಹೊಂದಿದೆ.
"ಕರ್ನಾಟಕದಲ್ಲಿ ಬೆಂಗಳೂರಿನ ಹೊರಗೆ ನಾವು ಮೊದಲ ಮಳಿಗೆಯನ್ನು ತೆರೆಯಬೇಕೆಂದರೆ ಅದು ಮೈಸೂರಿನಲ್ಲೇ ಆಗಬೇಕು ಎಂಬುದು ನಮ್ಮ ನಿರ್ಧಾರವಾಗಿತ್ತು. ಇಲ್ಲಿ ಈಗಾಗಲೇ ನಮ್ಮ ಉತ್ಪನ್ನಗಳಿಗೆ ಉತ್ತಮ ಬೇಡಿಕೆಯಿದೆ. ಪರಂಪರೆ ಮತ್ತು ಗುಣಮಟ್ಟಕ್ಕೆ ಮಹತ್ವ ನೀಡುವ ಈ ನಗರ ನಮ್ಮ ಮೌಲ್ಯಗಳಿಗೆ ಅತ್ಯಂತ ಹತ್ತಿರವಾಗಿದೆ," ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅರವಿಂದ್ ದಾಡು ತಿಳಿಸಿದ್ದಾರೆ.
ಮೈಸೂರಿನ ಹೊಸ ಮಳಿಗೆಯಲ್ಲಿ ಆನಂದ್‌ನ ಜನಪ್ರಿಯ ಉತ್ಪನ್ನಗಳಾದ ಬಾದಾಮಿಕಾ, ಪಿಸ್ತಾಮಿಕಾ, ಚೋಕೋಮಿಕಾ, ಮೀತಾಝ್ ಹಾಗೂ ಮೋತಿಚೂರ್ ಲಡ್ಡುಗಳ ಜೊತೆಗೆ ಕಾಜು ಕಟ್ಲಿ, ರಸಮಲೈ ಸೇರಿದಂತೆ ಹಲವು ಸಿಹಿತಿಂಡಿಗಳು ಲಭ್ಯವಿವೆ. ಜೊತೆಗೆ ಬಕ್ಲಾವಾ, ಕುನಾಫಾ ಮೊದಲಾದ ಮಧ್ಯಪ್ರಾಚ್ಯ ವಿಶೇಷ ಸಿಹಿತಿಂಡಿಗಳು ಹಾಗೂ ಉಡುಗೊರೆ ಹ್ಯಾಂಪರ್‌ಗಳೂ ದೊರೆಯಲಿವೆ.
ಮೈಸೂರಿನ ಗ್ರಾಹಕರ ಅಭಿರುಚಿಗೆ ತಕ್ಕಂತೆ ಮದ್ದೂರು ವಡೆ, ಅಕ್ಕಿ ಮತ್ತು ತೆಂಗಿನ ಕೊಡಬಳೆ, ಬೆಣ್ಣೆ ಮುರುಕ್ಕು, ಅಡ್ಯಾರ್ ಮುರುಕ್ಕು ಹಾಗೂ ವಿವಿಧ ಮಿಶ್ರಣಗಳು ಕೂಡ ಲಭ್ಯವಿವೆ. ಎಲ್ಲಾ ಸಿಹಿತಿಂಡಿಗಳನ್ನು ಶುದ್ಧ ತುಪ್ಪ ಮತ್ತು ಸಾವಯವ ಹಾಲಿನಿಂದ ತಯಾರಿಸಲಾಗಿದ್ದು, ಖಾರದ ಪದಾರ್ಥಗಳಲ್ಲಿ ಪಾಮ್ ಎಣ್ಣೆಯನ್ನು ಬಳಸಿಲ್ಲ.
ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಗ್ರಾಹಕರಿಗಾಗಿ ಸಕ್ಕರೆ ರಹಿತ ಕಾಜು ಕಟ್ಲಿ, ಬೇಸನ್ ಲಡ್ಡು, ಸೋಹನ್ ಪಾಪ್ಡಿ, ಜೊತೆಗೆ ರಾಗಿ, ಸಿರಿಧಾನ್ಯ, ಅಗಸೆ ಬೀಜ ಹಾಗೂ ಗೊಂಡ್ ಲಡ್ಡುಗಳು, ಬೇಯಿಸಿದ ಮತ್ತು ಹುರಿದ ತಿಂಡಿಗಳು ಹಾಗೂ ಮಖಾನಾ ಉತ್ಪನ್ನಗಳನ್ನೂ ಪರಿಚಯಿಸಲಾಗಿದೆ.
ಮಳಿಗೆಯ ಪ್ರಮುಖ ಆಕರ್ಷಣೆಯಾಗಿ ಲೈವ್ ಹಾಟ್ ಮೈಸೂರು ಪಾಕ್ ಟೇಸ್ಟಿಂಗ್ ಸ್ಟೇಷನ್ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಸಾಂಪ್ರದಾಯಿಕ ಮೈಸೂರು ಪಾಕ್ ಜೊತೆಗೆ ಮಾಲ್ಟ್ ಮೈಸೂರು ಪಾಕ್, ಡ್ರೈ ಫ್ರೂಟ್ ಮೈಸೂರು ಪಾಕ್, ಬೆಲ್ಲದ ಮೈಸೂರು ಪಾಕ್ ಹಾಗೂ ಕಾಜು ಮೈಸೂರು ಪಾಕ್ಗಳನ್ನು ಬಿಸಿ ಬಿಸಿಯಾಗಿ ಸವಿಯಬಹುದು.
ಇದಲ್ಲದೆ, ಉದ್ಘಾಟನಾ ವಾರಾಂತ್ಯದಲ್ಲಿ ಛೋಲೆ ಭಟೂರೆ, ದೆಹಲಿ ಶೈಲಿಯ ಚಾಟ್, ಗೋಲ್ ಗಪ್ಪೆ ಹಾಗೂ ತಂದೂರಿ ಖಾದ್ಯಗಳು ತಾಜಾವಾಗಿ ತಯಾರಿಸಿ ಗ್ರಾಹಕರಿಗೆ ನೀಡಲಾಗುತ್ತಿದೆ.
ಉದ್ಘಾಟನಾ ಸಮಾರಂಭದಲ್ಲಿ ಖ್ಯಾತ ಹಿನ್ನೆಲೆ ಗಾಯಕ ವಿಜಯ್ ಪ್ರಕಾಶ್ ಹಾಗೂ "ಹಿಸ್ಟರಿ ಅಂಕಲ್" ಎಂದೇ ಪ್ರಸಿದ್ಧರಾಗಿರುವ ಮೈಸೂರು ಇತಿಹಾಸ ತಜ್ಞ ಧರ್ಮೇಂದ್ರ ಕುಮಾರ್ ವಿಶೇಷ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು.
ಬೆಂಗಳೂರಿನಲ್ಲಿ ಅತ್ಯಧಿಕ ಪ್ರಶಸ್ತಿಗಳನ್ನು ಪಡೆದಿರುವ ಸಿಹಿತಿಂಡಿ ಸಂಸ್ಥೆಯಾದ ಆನಂದ್ ಸ್ವೀಟ್ಸ್ & ಸೇವರೀಸ್, ಸಾಂಪ್ರದಾಯಿಕ ಭಾರತೀಯ ಸಿಹಿತಿಂಡಿಗಳನ್ನು ಆಧುನಿಕ ಶೈಲಿಯಲ್ಲಿ ಗ್ರಾಹಕರಿಗೆ ಪರಿಚಯಿಸುವ ಮೂಲಕ ವಿಶಿಷ್ಟ ಗುರುತನ್ನು ಪಡೆದುಕೊಂಡಿದೆ.