ಪ್ರಥಮ ಚಿಕಿತ್ಸೆ ವೈದ್ಯಕೀಯಕ್ಕೆ ವೃತ್ತಿಪರರಿಗೆ ಸೀಮಿತವಲ್ಲ
ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ ಪ್ರಥಮ ಚಿಕಿತ್ಸೆ ಪ್ರಾಯೋಗಿಕ ಕಾರ್ಯಾಗಾರ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಥಮ ಚಿಕಿತ್ಸೆ ಪ್ರಾಯೋಗಿಕ ಕಾರ್ಯಾಗಾರ
ಪ್ರತಿಯೊಬ್ಬ ನಾಗರಿಕರು ಪ್ರಥಮ ಚಿಕಿತ್ಸಾ ಪ್ರಕ್ರಿಯೆ ತಿಳಿದುಕೊಳ್ಳಬೇಕು.
ಪ್ರಥಮ ಚಿಕಿತ್ಸೆಯನ್ನು ಕೊಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು
ಮೈಸೂರು: ಪ್ರಥಮ ಚಿಕಿತ್ಸೆ ನೀಡುವ ಜವಾಬ್ದಾರಿ ವೈದ್ಯಕೀಯ ವೃತ್ತಿಪರರಿಗೆ ಮಾತ್ರ ಸೀಮಿತವಲ್ಲ ಎಂದು ಜೆಎಸ್‌ಎಸ್ ನರ್ಸಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಪಿ.ರಶ್ಮಿ ಅಭಿಪ್ರಾಯಪಟ್ಟರು.
ಸರಸ್ವತಿಪುರಂನಲ್ಲಿರುವ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ ಪ್ರಥಮ ಚಿಕಿತ್ಸೆ ಪ್ರಾಯೋಗಿಕ ಕಾರ್ಯಾಗಾರದಲ್ಲಿ ಮಾತನಾಡಿದರು.
ಪ್ರಥಮ ಚಿಕಿತ್ಸೆಯ ಜವಾಬ್ದಾರಿ ವೈದ್ಯಕೀಯ ಕ್ಷೇತ್ರದವರಿಗೆ ಮಾತ್ರ ಸೀಮಿತವಲ್ಲ. ಪ್ರತಿಯೊಬ್ಬ ನಾಗರಿಕರು ಪ್ರಥಮ ಚಿಕಿತ್ಸಾ ಪ್ರಕ್ರಿಯೆ ತಿಳಿದುಕೊಳ್ಳಬೇಕು.
ಜತೆಗೆ ವಾಸಿಸುವ ಪರಿಸರದಲ್ಲಿ ಮತ್ತು ಯಾರಾದರೂ ವ್ಯಕ್ತಿಗಳು ಅಪಘಾತಕ್ಕೆ ಒಳಗಾದ ಸಂದರ್ಭದಲ್ಲಿ ಅವರಿಗೆ ಪ್ರಥಮ ಚಿಕಿತ್ಸೆಯನ್ನು ಕೊಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ತಿಳಿಸಿದರು.
ಪ್ರಾಂಶುಪಾಲ ಡಾ. ರೇಚಣ್ಣ, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿಗಳಾದ ಅನುಷಾ ಮತ್ತು ಡಾ. ಎ. ಜಿ. ಧರ್ಮೇಶ ಇನ್ನಿತರರಿದ್ದರು.