ಅಗ್ನಿ ಅವಘಡದಲ್ಲಿ ಗಾಯಗೊಂಡವರ ಪೈಕಿ ಒಬ್ಬರ ಪರಿಸ್ಥಿತಿ ಗಂಭೀರವಾಗಿದೆ. ಅವರ ಶ್ವಾಸಕೋಶಕ್ಕೂ ತೊಂದರೆಯಾಗಿದ್ದು, ಕಾರ್ಬನ್ ಡೈ ಆಕ್ಸೈಡ್ ಇನ್ಹೇಲ್ ಮಾಡಿರುವುದರಿಂದ ಕನಿಷ್ಠ ಎರಡು ದಿನಗಳ ಕಾಲ ವೈದ್ಯರ ನಿಗಾದಲ್ಲಿ ಇಡಲಾಗಿದೆ. ರೆಸ್ಟೋರೆಂಟ್ ಮ್ಯಾನೇಜರ್ ಪರಿಸ್ಥಿತಿಯೂ ಗಂಭೀರವಾಗಿದೆ. ಇನ್ನುಳಿದ ಆರು ಜನರಿಗೆ ತೀವ್ರವಾದ ಗಾಯಗಳಾಗಿಲ್ಲ ಎಂದು ಡಾ.ಯತೀಂದ್ರ ಮಾಹಿತಿ ನೀಡಿದರು.