ಯಾದವಗಿರಿ ಬಡಾವಣೆಯ ಬಳಿ ಹಾದು ಹೋಗಿರುವ ರೈಲ್ವೆ ಹಳಿ ಬಳಿ ಗಿಡಗಂಟಿಗಳಿಗೆ ಬೆಂಕಿ ಬಿದ್ದಿದ್ದು, ಹೊಗೆ ಆವರಿಸಿ ಬೆಂಕಿ ಜ್ವಾಲೆ ಆವರಿಸಿತು. ಅದೇ ಮಾರ್ಗದಲ್ಲಿ ಹಾದು ಹೋಗುತ್ತಿದ್ದ ಪ್ರಜ್ವಲ್ ಬೆಂಕಿ ಜ್ವಾಲೆ ಆವರಿಸುತ್ತಿದ್ದನ್ನು ಕಂಡು ನೀರಿನ ಕ್ಯಾನ್ ಮೂಲಕ ಬೆಂಕಿ ಆರಿಸುವ ಪ್ರಯತ್ನ ಮಾಡಿದ್ದಾನೆ. ಅಷ್ಟರಲ್ಲಿ ಸ್ಥಳಕ್ಕಾಗಮಿಸಿದ ಆರ್‌ಪಿಎಫ್ ಸಿಬ್ಬಂದಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿದರು.