ಮಳೆ-ಗಾಳಿಯಿಂದ ಹಾನಿಗೀಡಾದ ಸಂತ್ರಸ್ತರಿಗೆ ಧನಸಹಾಯ

ಹನಗೋಡು ಹೋಬಳಿಯ ದಾಸನಪುರ ಗ್ರಾಮಕ್ಕೆ ಬುಧವಾರ ಭೇಟಿ ನೀಡಿದ ವರ್ಷಾ ಜಿ.ಡಿ.ಹರೀಶ್‌ಗೌಡ ಬಿರುಗಾಳಿ ಮಳೆಗೆ ಸಿಲುಕಿ ಮನೆ ಹಾನಿಗೀಡಾದ ನೊಂದ ಕುಟುಂಬಸ್ಥರಿಗೆ ವೈಯಕ್ತಿಕವಾಗಿ ಧನಸಹಾಯ ನೀಡಿದರು. ಸುರೇಂದ್ರ, ಸುಭಾಷ್, ಬಸವರಾಜ್, ಮಹೇಶ್, ಬೀರಪ್ಪ ಇತರರು ಇದ್ದರು.
ಹನಗೋಡು ಹೋಬಳಿಯ ದಾಸನಪುರ ಗ್ರಾಮಕ್ಕೆ ಬುಧವಾರ ಭೇಟಿ ನೀಡಿದ ವರ್ಷಾ ಜಿ.ಡಿ.ಹರೀಶ್‌ಗೌಡ ಬಿರುಗಾಳಿ ಮಳೆಗೆ ಸಿಲುಕಿ ಮನೆ ಹಾನಿಗೀಡಾದ ನೊಂದ ಕುಟುಂಬಸ್ಥರಿಗೆ ವೈಯಕ್ತಿಕವಾಗಿ ಧನಸಹಾಯ ನೀಡಿದರು. ಸುರೇಂದ್ರ, ಸುಭಾಷ್, ಬಸವರಾಜ್, ಮಹೇಶ್, ಬೀರಪ್ಪ ಇತರರು ಇದ್ದರು.
Published on
ಹನಗೋಡು: ಬಿರುಗಾಳಿ ಮಳೆಯಿಂದ ಹಾನಿಗೀಡಾಗಿರುವ ಮನೆಗಳಿಗೆ ಶಾಸಕ ಜಿ.ಡಿ.ಹರೀಶ್ ಗೌಡ ಅವರ ಪತ್ನಿ ವರ್ಷಾ ಹರೀಶ್ ಗೌಡ ಬುಧವಾರ ಭೇಟಿ ನೀಡಿ ವೈಯಕ್ತಿಕವಾಗಿ ಧನ ಸಹಾಯ ನೀಡಿ ನೊಂದ ಕುಟುಂಬಗಳಿಗೆ ಧೈರ್ಯ ತುಂಬಿದರು.
ಹನಗೋಡು ಭಾಗದಲ್ಲಿ ಕಳೆದ ವಾರ ಬೀಸಿದ ಬಿರುಗಾಳಿ ಮಳೆಯಿಂದ ದಾಸನಪುರ ಗ್ರಾಮದಲ್ಲಿ 22 ಮನೆಗಳು ಹಾನಿಯಾಗಿರುವುದನ್ನು ಪರಿಶೀಲಿಸಿ ಮಾತನಾಡಿದ ಅವರು, ಈಗಾಗಲೇ ತಾಲೂಕಿನ ಶಾಸಕ ಜಿ.ಡಿ.ಹರೀಶ್ ಗೌಡ ಅವರು ಗ್ರಾಮಕ್ಕೆ ಭೇಟಿ ಗಾಳಿ -ಮಳೆಯಿಂದ ಹಾನಿಯಾಗಿರುವ ಹಾಗೂ ಪರಿಹಾರ ಕ್ರಮಗಳ ಕುರಿತು ತಾಲೂಕು ಮಟ್ಟದ ಅಧಿಕಾರಿಗಳ ಜತೆ ಸಭೆ ಮಾಡಿದ್ದು ಶೀಘ್ರದಲ್ಲೇ ಪರಿಹಾರ ನೀಡುವ ಕ್ರಮ ಕೈಗೊಂಡಿದ್ದಾರೆ. ಇದಲ್ಲದೆ ವಸತಿ ಯೋಜನೆಗಳಡಿ 22 ಮನೆಗಳನ್ನು ಮಂಜೂರು ಮಾಡಿಸಲಿದ್ದಾರೆ. ಬೆಳೆ ಹಾನಿ ಬಗ್ಗೆ ಜಂಟಿ ಸಮೀಕ್ಷೆ ಕಾರ್ಯ ನಡೆಯುತ್ತಿದ್ದು, ಆದಷ್ಟು ಬೇಗ ಈ ಸಮೀಕ್ಷೆ ಪೂರ್ಣಗೊಳಿಸಲು ಶಾಸಕರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆಂದು ತಿಳಿಸಿದರು.
ಜೆಡಿಎಸ್ ಅಧ್ಯಕ್ಷ ಎಂ.ಬಿ ಸುರೇಂದ್ರ, ಎಪಿಎಂಸಿ ಮಾಜಿ ಅಧ್ಯಕ್ಷ ಮುದಗನೂರು ಸುಭಾಷ್, ಕಿರಂಗೂರು ಬಸವರಾಜ್, ಗ್ರಾಪಂ ಮಾಜಿ ಅಧ್ಯಕ್ಷ ದಾ.ರಾ.ಮಹೇಶ್, ಸೊಸೈಟಿ ಬೀರಪ್ಪ, ಗ್ರಾಮ ಲೆಕ್ಕಿಗ ಕುಮಾರ್, ಹರೀಶ್ ಸೇರಿದಂತೆ ಅನೇಕ ಗ್ರಾಮಸ್ಥರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net