ಒಳಮೀಸಲಾತಿಯಲ್ಲಿ ಅನ್ಯಾಯ ಖಂಡಿಸಿ ಹೋರಾಟ

ಒಳ ಮೀಸಲಾತಿಯಲ್ಲಿ ಅನ್ಯಾಯ ಖಂಡಿಸಿ ಸರಗೂರು ತಾಲೂಕಿನ ಪಟ್ಟಣದ ತಹಸೀಲ್ದಾರ್ ಕಚೇರಿ ಮುಂಭಾಗ ಬಲಗೈ ಸಮುದಾಯ ಬೃಹತ್ ಪ್ರತಿಭಟನೆ ನಡೆಸಿತು. ಇಟ್ನ ರಾಜಣ್ಣ, ಅನುಷಾ ಕೋಟೆ, ಸರಗೂರು ಶಿವಣ್ಣ, ಗೋಪಾಲಸ್ವಾಮಿ, ಅಂಬೇಡ್ಕರ್ ಭವನ ಟ್ರಸ್ಟ್ ಸಣ್ಣಸ್ವಾಮಿ, ಟ್ರಸ್ಟ್ ಅಧ್ಯಕ್ಷ ನಾಗರಾಜು, ಮಹಾಸಭಾ ಉಪಾಧ್ಯಕ್ಷರಾದ ಬಿ.ಸಿ.ಶಿವಣ್ಣ, ಚಿನ್ನಣ್ಣ ಇತರರು ಇದ್ದರು.
ಒಳ ಮೀಸಲಾತಿಯಲ್ಲಿ ಅನ್ಯಾಯ ಖಂಡಿಸಿ ಸರಗೂರು ತಾಲೂಕಿನ ಪಟ್ಟಣದ ತಹಸೀಲ್ದಾರ್ ಕಚೇರಿ ಮುಂಭಾಗ ಬಲಗೈ ಸಮುದಾಯ ಬೃಹತ್ ಪ್ರತಿಭಟನೆ ನಡೆಸಿತು. ಇಟ್ನ ರಾಜಣ್ಣ, ಅನುಷಾ ಕೋಟೆ, ಸರಗೂರು ಶಿವಣ್ಣ, ಗೋಪಾಲಸ್ವಾಮಿ, ಅಂಬೇಡ್ಕರ್ ಭವನ ಟ್ರಸ್ಟ್ ಸಣ್ಣಸ್ವಾಮಿ, ಟ್ರಸ್ಟ್ ಅಧ್ಯಕ್ಷ ನಾಗರಾಜು, ಮಹಾಸಭಾ ಉಪಾಧ್ಯಕ್ಷರಾದ ಬಿ.ಸಿ.ಶಿವಣ್ಣ, ಚಿನ್ನಣ್ಣ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬಲಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ
  • ಅವೈಜ್ಞಾನಿಕ ವರದಿ ಕೈ ಬಿಡುವಂತೆ ಒತ್ತಾಯ
ಸರಗೂರು: ಪರಿಶಿಷ್ಟ ಜಾತಿಯ ಒಳಮೀಸಲಾತಿಯಲ್ಲಿ ಬಲಗೈ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿ ಮಂಗಳವಾರ ಬಲಗೈ ಸಮುದಾಯ ಪ್ರತಿಭಟನೆ ನಡೆಸಿತು.
ಪ್ರಗತಿಪರ ಸಂಘಟನೆಗಳ ಜತೆಗೂಡಿ ಬಲಗೈ ಸಮುದಾಯದ ಮುಖಂಡರು ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ನ್ಯಾ.ನಾಗಮೋಹನದಾಸ್ ಮಂಡಿಸಿರುವ ಒಳ ಮೀಸಲಾತಿ ವರದಿ ಅವೈಜ್ಞಾನಿಕವಾಗಿದ್ದು, ಇದರಿಂದ ಬಲಗೈ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ. ಈ ಮಸೂದೆಯನ್ನು ಅಂಗೀಕರಿಸದೆ ಸರ್ಕಾರ ತಿರಸ್ಕರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಬಲಗೈ ಸಮುದಾಯದ ಮಹಾಸಭಾ ಅಧ್ಯಕ್ಷ ಇಟ್ನ ರಾಜಣ್ಣ ಮಾತನಾಡಿ, ರಾಜ್ಯ ಸರ್ಕಾರ ಒಳ ಮೀಸಲಾತಿಯಲ್ಲಿ ರಾಜ್ಯದ ಬಲಗೈ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದೆ. ಇಲ್ಲಿ ಪ್ರವರ್ಗ ಎ, ಬಿ, ಸಿ ಎಂದು ವಿಂಗಡಿಸಿ ಬಲಗೈ ಸಮುದಾಯವನ್ನು ಕಡೆಗಣಿಸಲಾಗಿದೆ. ಇದರಿಂದ ಬಲಗೈ ಸಮುದಾಯದ ವಿದ್ಯಾವಂತ ಮಕ್ಕಳಿಗೆ ಅನ್ಯಾಯವಾಗಲಿದೆ. ನಾಗಮೋಹನ್‌ದಾಸ್ ವರದಿಯನ್ನು ಕೈಬಿಟ್ಟು ಸಮುದಾಯಕ್ಕೆ ನ್ಯಾಯ ಒದಗಿಸಿ ಕೊಡಬೇಕು. ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬಲಗೈ ಸಮುದಾಯದ ಮಾಜಿ ಅಧ್ಯಕ್ಷ ಸರಗೂರು ಶಿವಣ್ಣ ಮಾತನಾಡಿ, ನಾಗಮೋಹನ್ ದಾಸ್ ಅವರು ಸರ್ಕಾರಕ್ಕೆ ಏಕಪಕ್ಷೀಯವಾಗಿ ವರದಿ ಕೊಟ್ಟಿರುವುದೆ ಇದಕ್ಕೆಲ್ಲ ಕಾರಣ. ಸರ್ಕಾರ ಒಡೆದಾಳುವ ನೀತಿ ಅನುಸರಿಸುತ್ತಿದೆ ಎನ್ನುವುದು ಸ್ಪಷ್ಟವಾಗಿ ಕಾಣುತ್ತಿದೆ. ಮಕ್ಕಳ ಮುಂದಿನ ಭವಿಷ್ಯದ ದೃಷ್ಟಿಯಿಂದ ವರದಿ ಜಾರಿಗೆ ತಾರದೆ ಬಲಗೈ ಸಮಾಜಕ್ಕೆ ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿದರು.
ಬಲಗೈ ಸಮುದಾಯದ ಮಹಾಸಭಾ ತಾಲೂಕು ಅಧ್ಯಕ್ಷ ಹೈರಿಗೆ ಶಿವರಾಜು ಮಾತನಾಡಿ, ರಾಜ್ಯ ಸರ್ಕಾರ ಬಲಗೈ ಸಮುದಾಯಕ್ಕೆ ಇಷ್ಟೊಂದು ಅನ್ಯಾಯ ಮಾಡಿದರೂ ಸಂಪುಟದಲ್ಲಿರುವ ಬಲಗೈ ಸಮುದಾಯದ ಸಚಿವರು ಮಲಗಿದ್ದಾರಾ ಎಂದು ಪ್ರಶ್ನೆ ಮಾಡಿದರು.
ದಸಂಸ ಜಿಲ್ಲಾ ಸಂಚಾಲಕಿ ಅನುಷಾ ಕೋಟೆ ಮಾತನಾಡಿ, ಬಲಗೈ ಸಮುದಾಯದ ಚುನಾಯಿತ ಪ್ರತಿನಿಧಿಗಳಾದ ಮಲ್ಲಿಕಾರ್ಜುನ ಖರ್ಗೆ, ಸಚಿವ ಡಾ.ಎಚ್.ಸಿ.ಮಹದೇವಪ್ಪ, ಡಾ.ಜಿ.ಪರಮೇಶ್ವರ್, ಪ್ರಿಯಾಂಕ್ ಖರ್ಗೆ ಸೇರಿದಂತೆ ಇತರರ ಮನೆ ಮುಂದೆ ಸಮುದಾಯದವರು ಧರಣಿ ಮಾಡಬೇಕಾಗುತ್ತದೆ. ನಾವುಗಳು ಒಂದು ಉದ್ಯೋಗ ಪಡೆಯಲು ಮೂವತ್ತು ವರ್ಷಗಳ ಕಾಲ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ನಿಮ್ಮ ಕುಟುಂಬ ಇಂದು ಸಮೃದ್ಧಿ ಜೀವನ ನಡೆಸುತ್ತಿದ್ದಾರೆ. ಆದರೆ ನಿಮ್ಮ ಸಮುದಾಯಕ್ಕೆ ಸೇರಿದ ಬಡವರು ಒಳಮೀಸಲಾತಿ ಅನ್ಯಾಯದಿಂದ ಪ್ರಾಣ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗೋಪಾಲಸ್ವಾಮಿ, ಅಂಬೇಡ್ಕರ್ ಭವನ ಟ್ರಸ್ಟ್ ಸಣ್ಣಸ್ವಾಮಿ, ಟ್ರಸ್ಟ್ ಅಧ್ಯಕ್ಷ ನಾಗರಾಜು, ಮಹಾಸಭಾ ಉಪಾಧ್ಯಕ್ಷರಾದ ಬಿ.ಸಿ.ಶಿವಣ್ಣ, ಚಿನ್ನಣ್ಣ, ಕಾಮಿಸ್ವಾಮಿ, ಪ್ರಧಾನ ಕಾರ್ಯದರ್ಶಿ ಪ್ರಕಾಶ್, ಗ್ರಾಮೀಣ ಮಹೇಶ್, ಸೂರ್ಯ ಕುಮಾರ್, ಲಂಕೆ ಶ್ರೀನಿವಾಸ, ವಿಷಕಂಠ, ಅಣ್ಣಯ್ಯ ಸ್ವಾಮಿ, ಗೋವಿಂದರಾಜು, ರಮೇಶ್, ಮಹೇಶ್, ಗೋವಿಂದರಾಜು, ಕರ್ನಾಟಕ ಭೀಮಾ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಪಿ.ಬಸವಯ್ಯ, ತಾಲೂಕು ಅಧ್ಯಕ್ಷ ಎಚ್.ಕೆ. ಸಿದ್ದರಾಜು, ಸರಗೂರು ಕೃಷ್ಣ, ಸೋಮಣ್ಣ, ನಾಗಣ್ಣ, ಬಿಡಗಲು ಶಿವಣ್ಣ, ಮಲ್ಲೇಶ್, ಲೋಕೇಶ್, ಪುಟ್ಟಸ್ವಾಮಿ, ಮಹದೇವಸ್ವಾಮಿ, ರವಿಕುಮಾರ್, ಮಹೇಂದ್ರ, ಶಿವಮೂರ್ತಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net