ಶ್ರೀ ನಟರಾಜ ಮಹಿಳಾ ಕಾಲೇಜಿನಲ್ಲಿ ಫ್ಯಾಷನ್ ಶೋ ಆಯೋಜನೆ

ನಗರದ ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ‘ಕಲಾ ಉತ್ಸವ- 2026’ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪ್ರೊ.ಎಸ್. ಶಿವರಾಜಪ್ಪ, ಶಿವಕುಮಾರ್, ಅಶ್ವಿನಿ, ಡಾ. ಎಂ.ಶಾರದಾ, ಡಾ. ಜಿ. ಪ್ರಸಾದಮೂರ್ತಿ, ರಮ್ಯಾ, ಎನ್.ಆರ್. ಸಿಂಧು ಇತರರಿದ್ದರು.
ನಗರದ ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ‘ಕಲಾ ಉತ್ಸವ- 2026’ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪ್ರೊ.ಎಸ್. ಶಿವರಾಜಪ್ಪ, ಶಿವಕುಮಾರ್, ಅಶ್ವಿನಿ, ಡಾ. ಎಂ.ಶಾರದಾ, ಡಾ. ಜಿ. ಪ್ರಸಾದಮೂರ್ತಿ, ರಮ್ಯಾ, ಎನ್.ಆರ್. ಸಿಂಧು ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಗ್ರಾಮೀಣ ಭಾಗದ ಆಚಾರ-ವಿಚಾರ, ಕಲೆ, ನಾಟಕ, ಸಾಂಸ್ಕೃತಿಕ ಒತ್ತು ನೀಡಬೇಕು
  • ಭಾರತ ದೇಶದ ಸಾಂಪ್ರದಾಯಿಕ ಉಡುಗೆ-ತೊಡುಗೆ ಧರಿಸುವುದರ ಮೂಲಕ ಮೆರುಗನ್ನು ಹೆಚ್ಚಿಸಿದ್ದಾರೆ
ಮೈಸೂರು:ನಗರದ ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ‘ಕಲಾ ಉತ್ಸವ- 2026’ ಕಾರ್ಯಕ್ರಮದ ಅವಳಿ ದಿನ (ಟ್ವಿನ್ಸ್ ಡೇ) ಅಂಗವಾಗಿ ಮಿಸ್ ನಟರಾಜ (ಫ್ಯಾಷನ್ ಶೋ) ಆಯೋಜಿಸಲಾಗಿತ್ತು.
ಶ್ರೀ ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್.ಶಿವರಾಜಪ್ಪ ಮಾತನಾಡಿ, ನಟರಾಜ ಕಾಲೇಜು 30 ವರ್ಷಗಳಿಂದಲೂ ಗ್ರಾಮೀಣ ಭಾಗದ ಆಚಾರ-ವಿಚಾರ, ಕಲೆ, ನಾಟಕ, ಸಾಂಸ್ಕೃತಿಕ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆಯನ್ನು ವಿದ್ಯಾರ್ಥಿಗಳ ಮುಖಾಂತರ ನೀಡುತ್ತಾ ಬಂದಿದೆ ಎಂದರು.
ಇಂದಿನ ಫ್ಯಾಷನ್ ಶೋ ಮುಖಾಂತರ ಭಾರತ ದೇಶದ ಸಾಂಪ್ರದಾಯಿಕ ಉಡುಗೆ-ತೊಡುಗೆ ಧರಿಸುವುದರ ಮೂಲಕ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದ್ದಾರೆ ಎಂದು ಹೇಳಿದರು.
ಫ್ಯಾಷನ್ ಶೋ ಕಾರ್ಯಕ್ರಮದ ತೀರ್ಪುಗಾರರಾಗಿ ಚಾಮರಾಜ ಜೋಡಿ ರಸ್ತೆಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಶಿವಕುಮಾರ್, ಅಶ್ವಿನಿ ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ತೃತೀಯ ಬಿಕಾಂ ವಿದ್ಯಾರ್ಥಿನಿ ಬಿ.ಹರ್ಷಿತಾ (ಪ್ರಥಮ), ಪ್ರಥಮ ಬಿಕಾಂ ವಿದ್ಯಾರ್ಥಿನಿ ಸುನೀತಾ (ದ್ವಿತೀಯ), ದ್ವಿತೀಯ ಬಿಕಾಂ ವಿದ್ಯಾರ್ಥಿನಿ ಎಸ್.ಮಹಾಲಕ್ಷ್ಮೀ (ತೃತೀಯ) ಬಹುಮಾನ ಪಡೆದರು.
ಕಾಲೇಜಿನ ಪ್ರಾಂಶುಪಾಲೆ ಡಾ. ಎಂ.ಶಾರದಾ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಜಿ. ಪ್ರಸಾದಮೂರ್ತಿ, ವಾಣಿಜ್ಯಶಾಸ್ತ್ರ ವಿಭಾಗದ ರಮ್ಯಾ, ಅರ್ಥಶಾಸ್ತ್ರ ವಿಭಾಗದ ಎನ್.ಆರ್. ಸಿಂಧು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net