ಕೃಷಿ ಭೂಮಿಯಲ್ಲಿ ಶಾಲಾ ಮಕ್ಕಳಿಗೆ ಕೃಷಿ ಪಾಠ

ನಂಜನಗೂಡು ಪಟ್ಟಣದ ಹಳ್ಳದಕೇರಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಕೃಷಿ ಭೂಮಿಗೆ ಭೇಟಿ ನೀಡಿ ಭತ್ತದ ಬೆಳೆಯುವ ವಿಧಾನ ಕುರಿತು ತಿಳಿದುಕೊಂಡರು.
ನಂಜನಗೂಡು ಪಟ್ಟಣದ ಹಳ್ಳದಕೇರಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಕೃಷಿ ಭೂಮಿಗೆ ಭೇಟಿ ನೀಡಿ ಭತ್ತದ ಬೆಳೆಯುವ ವಿಧಾನ ಕುರಿತು ತಿಳಿದುಕೊಂಡರು.
Published on

ನಂಜನಗೂಡು:

ಪಟ್ಟಣದ ಹಳ್ಳದಕೇರಿ ಸರ್ಕಾರಿ ಪ್ರಾಥಮಿಕ ಶಾಲೆ ಮಕ್ಕಳು ಮಂಗಳವಾರ ಶಾಲೆ ಬಿಟ್ಟು ಕೃಷಿ ಜಮೀನಿಗೆ ಇಳಿದು ಭತ್ತದ ನಾಟಿ ಮಾಡುವ ವಿಧಾನಗಳನ್ನು ತಿಳಿದುಕೊಂಡರು. ಅಲ್ಲದೆ, ಶಿಕ್ಷಕರು, ರೈತರಿಂದ ಕೃಷಿಯ ಬಗ್ಗೆ ಜ್ಞಾನ ಪಡೆದುಕೊಂಡರು.

ಕೃಷಿಗೆ ಸಂಬಂಧಿಸಿದಂತೆ 7ನೇ ತರಗತಿಗೆ ‘ಸೀನಾ ಶೆಟ್ಟರು ನಮ್ಮ ಟೀಚರು’ ಪಾಠವಿದೆ. ಈ ಪಾಠದ ಮೂಲಕ ಮಕ್ಕಳಿಗೆ ಕೃಷಿಯ ನೈಜ ಚಿತ್ರಣವನ್ನು ಕಟ್ಟಿಕೊಡಬೇಕು ಎಂಬ ಉದ್ದೇಶದಿಂದ ಶಾಲೆಯ 5,6,7ನೇ ತರಗತಿ ವಿದ್ಯಾರ್ಥಿಗಳನ್ನು ಸಮೀಪದಲ್ಲಿದ್ದ ಜಮೀನಿಗೆ ಕರೆದೊಯ್ದು ಭತ್ತದ ಬೆಳೆ, ಕೃಷಿಯ ಮಾಹಿತಿ ನೀಡಲಾಯಿತು.
ಈ ವೇಳೆ ಗದ್ದೆ, ಜಮೀನು, ಹೊಲಗಳ ನಡುವಿನ ವ್ಯತ್ಯಾಸ, ಕುಂಟೆ, ಎಕರೆ, ಬದು ಸೇರಿದಂತೆ ಕೃಷಿಗೆ ಸಂಬಂಧಿಸಿದ ಪದಗಳನ್ನು ಪರಿಚಯ ಮಾಡಿಕೊಟ್ಟರು. ಭತ್ತದ ನಾಟಿ ಮಾಡುವ ವಿಧಾನ, ಭತ್ತದ ಪೈರು ಬೆಳವಣಿಗೆ ಹಾಗೂ ಉಳುಮೆ ಮಾಡುವ ಪದ್ಧತಿ ಕುರಿತು ತಿಳಿದುಕೊಂಡರು. ರೈತರ ಬದುಕು, ಪರಿಶ್ರಮ, ಸಮಾಜಕ್ಕೆ ಅನ್ನದಾತರು ನೀಡುತ್ತಿರುವ ಕೊಡುಗೆಯನ್ನು ಅರಿತರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net