ಗ್ರಾಮದ ಸಿದ್ದಯ್ಯ ಅವರ ಪುತ್ರ, ರೈತ ಸುರೇಶ್ ಗಾಯಗೊಂಡವರು. ಜಮೀನಿನಲ್ಲಿ ಪೈಪ್‌ಲೈನ್ ಜೋಡಿಸುವ ಕೆಲಸ ಮಾಡುತ್ತಿದ್ದ ಸುರೇಶ್ ಮೇಲೆ ದಾಳಿ ನಡೆಸಿ ತೊಡೆಯನ್ನು ಸೀಳಿದೆ. ದಿಢೀರ್ ದಾಳಿಯಿಂದ ಆಘಾತಕ್ಕೊಳಗಾದ ಸುರೇಶ್ ಕಿರುಚಿಕೊಂಡಾಗ ಜಮೀನು ಅಕ್ಕಪಕ್ಕದ ರೈತರು ಕೂಗಾಡಿ ಕಾಡು ಹಂದಿಯನ್ನು ಓಡಿಸಿದರು. ಗಾಯಾಳುವನ್ನು ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.