ರಸ್ತೆಯಲ್ಲಿ ಸಿಕ್ಕಿದ ಚಿನ್ನದ ಸರವನ್ನು ಪೊಲೀಸರಿಗೆ ಒಪ್ಪಿಸಿದ ರೈತ

ರಸ್ತೆಯಲ್ಲಿ ಸಿಕ್ಕ ಚಿನ್ನದ ಸರವನ್ನು ರೈತ ಮರಳೂರು ನಾಯಕ ಅವರು ಎಚ್.ಡಿ.ಕೋಟೆ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಗಂಗಾಧರ್ ಅವರಿಗೆ ನೀಡಿದರು.
ರಸ್ತೆಯಲ್ಲಿ ಸಿಕ್ಕ ಚಿನ್ನದ ಸರವನ್ನು ರೈತ ಮರಳೂರು ನಾಯಕ ಅವರು ಎಚ್.ಡಿ.ಕೋಟೆ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಗಂಗಾಧರ್ ಅವರಿಗೆ ನೀಡಿದರು.
Published on

ಪ್ರಮುಖ ಮುಖ್ಯಾಂಶಗಳು

  • gold chain
ಎಚ್.ಡಿ.ಕೋಟೆ: ದಾರಿಯಲ್ಲಿ ಸಿಕ್ಕಿದ ಹನ್ನೆರಡು ಗ್ರಾಂ ತೂಕದ ಚಿನ್ನದ ಸರವನ್ನು ರೈತ ಮುಖಂಡರೊಬ್ಬರು ಪೊಲೀಸ್ ಠಾಣೆಗೆ ತಲುಪಿಸಿ ಸರ ಕಳೆದುಕೊಂಡ ಮಾಲೀಕರ ಪತ್ತೆಗೆ ಮನವಿ ಮಾಡಿದ್ದಾರೆ.
ಜ.14 ರಂದು ತಾಲೂಕಿನ ಜಿನ್ನಹಳ್ಳಿ ಗ್ರಾಮದ ಮರಳೂರು ನಾಯಕ ಅವರು ಹಂಪಾಪುರ ಗ್ರಾಮದ ಉಪ ಪೊಲೀಸ್ ಠಾಣೆ ಸಮೀಪದ ಬೇಕರಿ ಹತ್ತಿರ ನಡೆದುಕೊಂಡು ಹೋಗುತ್ತಿದ್ದಾಗ ಚಿನ್ನದ ಸರ ಸಿಕ್ಕಿದೆ. ಅದನ್ನು ಪಕ್ಕದಲ್ಲಿ ಇದ್ದ ಪೊಲೀಸ್ ಠಾಣೆಗೆ ತಲುಪಿಸಿ ಮಾಲೀಕರ ಪತ್ತೆಗಾಗಿ ಮನವಿ ಮಾಡಿದರು.
ಎಚ್.ಕೋಟೆ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಗಂಗಾಧರ್ ರೈತ ಮುಖಂಡನ ಪ್ರಾಮಾಣಿಕತೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಚಿನ್ನದ ಸರ ಕಳೆದುಕೊಂಡ ವಾರಸುದಾರರು ಎಚ್.ಡಿ.ಕೋಟೆ ಪೊಲೀಸ್ ಠಾಣೆ ಸಂಪರ್ಕಿಸಿ ಚಿನ್ನದ ಸರವನ್ನು ಪಡೆಯಲು ಇನ್‌ಸ್ಪೆಕ್ಟರ್ ಮನವಿ ಮಾಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net