ನಾಡಕಚೇರಿ ಎದುರು ರೈತ ಆತ್ಮಹತ್ಯೆ ಯತ್ನ

ಆಸ್ಪತ್ರೆಯಲ್ಲಿ ರೈತ ರಂಗೇಗೌಡ
ಆಸ್ಪತ್ರೆಯಲ್ಲಿ ರೈತ ರಂಗೇಗೌಡ
Published on
ಸಾಲಿಗ್ರಾಮ: ಐದು ವರ್ಷದಿಂದ ತನ್ನ ಸ್ವಂತ ಜಮೀನಿನ ಖಾತೆ ಮತ್ತು ವಿಸ್ತೀರ್ಣ ಆರ್‌ಟಿಸಿ ಪಡೆಯಲೆಂದು ಇಲ್ಲಿನ ನಾಡಕಚೇರಿಗೆ ಅಲೆದು ಬೇಸತ್ತ ರೈತರೊಬ್ಬರು ಮಂಗಳವಾರ ನಾಡಕಚೇರಿ ಮುಂಭಾಗವೇ ವಿಷ ಕುಡಿದು ಅಸ್ವಸ್ಥಗೊಂಡಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಮೀಪದ ಚಿಕ್ಕನಾಯಕನಹಳ್ಳಿ ಗ್ರಾಮದ ರಂಗೇಗೌಡ (70) ಆತ್ಮಹತ್ಯೆಗೆ ಯತ್ನಿಸಿ ಅಸ್ವಸ್ಥಗೊಂಡಿದ್ದು, ಮೈಸೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರಂಗೇಗೌಡ ತಮಗಿರುವ 24 ಗುಂಟೆ ಜಮೀನಿನ ಸೂಕ್ತ ದಾಖಲೆ ಬೇಕೆಂದು ಹಲವು ವರ್ಷಗಳಿಂದ ನಾಡಕಚೇರಿಗೆ ಅಲೆಯುತ್ತಿದ್ದರು. ಸ್ಥಳೀಯ ಅಧಿಕಾರಿಗಳಿಗೂ ಸಾಕಷ್ಟು ಮನವಿ ಮಾಡಿದ್ದರೂ ಕೆಲಸ ಮಾತ್ರ ಆಗಲಿಲ್ಲ. ಇದರಿಂದ ಮನನೊಂದಿದ್ದ ರಂಗೇಗೌಡ ಮಂಗಳವಾರ ನಾಡಕಚೇರಿ ಆವರಣದಲ್ಲಿ ವಿಷ ಕುಡಿದು ನರಳಾಡುತ್ತಿದ್ದರು. ತಕ್ಷಣ ಸ್ಥಳದಲ್ಲಿದ್ದವರು ಪೊಲೀಸರಿಗೆ ಮಾಹಿತಿ ನೀಡಿ, ಸಾಲಿಗ್ರಾಮ ಸರ್ಕಾರಿ ಅಸ್ಪತ್ರೆಗೆ ದಾಖಲಿಸಿದ್ದರು. ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಐಸಿಯೂನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ತಮ್ಮ ತಂದೆ ಸಾಲ ತೀರಿಸಲೆಂದು ಆಸ್ತಿ ಮಾರಾಟ ಮಾಡಲು ನಿರ್ಧರಿಸಿ ಐದಾರು ವರ್ಷದಿಂದ ಪೋಡಿ ಮಾಡಿಸಿ, ಸ್ಕೆಚ್ ಪಡೆಯಲೆಂದು ಅರ್ಜಿ ಹಾಕಿ ನಿತ್ಯ ಅಲೆದಾಡುತ್ತಿದ್ದರು. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮ ಲೆಕ್ಕಾಧಿಕಾರಿ ಮತ್ತು ರಾಜಸ್ವ ನಿರೀಕ್ಷಕರ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರಂಗೇಗೌಡ ಅವರ ಪುತ್ರ ವೆಂಕಟೇಶ್ ಆಗ್ರಹಿಸಿದ್ದಾರೆ.
ಶಾಸಕ ಡಿ.ರವಿಶಂಕರ್, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ಸಾಲಿಗ್ರಾಮ ತಹಸೀಲ್ದಾರ್ ರುಕೀಯ ಬೇಗಂ, ಇನ್‌ಸ್ಪೆೆಕ್ಟರ್ ಶಶಿಕುಮಾರ್ ಆಸ್ಪತ್ರೆಗೆ ಭೇಟಿ ನೀಡಿ, ರಂಗೇಗೌಡರ ಆರೋಗ್ಯ ವಿಚಾರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net