ಚಪ್ಪರದಹಳ್ಳಿ ಗ್ರಾಪಂ ಸದಸ್ಯರಿಗೆ ಬೀಳ್ಕೊಡುಗೆ

ಚಪ್ಪರದಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಆಯೋಜಿಸಿದ್ದ ಗ್ರಾಮ ಪಂಚಾಯಿತಿ ಕೊನೇ ಸಭೆ ಹಾಗೂ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವಧಿ ಪೂರ್ಣಗೊಂಡ ಸದಸ್ಯರನ್ನು ಸನ್ಮಾನಿಸಲಾಯಿತು. ಶ್ರೀದೇವಿ, ಸುನೀತಾ, ಎ.ಸಿ ಧರಣೇಶ್, ಸಿ.ಕೆ ವೆಂಕಟೇಶ್, ಸಿ.ಪಿ ಸುರೇಶ್, ಎಚ್.ಎಸ್.ದೇವೇಗೌಡ, ಸಿ.ಎಸ್.ಗಣೇಶ್, ಪ್ರೇಮಮ್ಮ, ಸರಸ್ಪತಿ ಇದ್ದರು.
ಚಪ್ಪರದಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಆಯೋಜಿಸಿದ್ದ ಗ್ರಾಮ ಪಂಚಾಯಿತಿ ಕೊನೇ ಸಭೆ ಹಾಗೂ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವಧಿ ಪೂರ್ಣಗೊಂಡ ಸದಸ್ಯರನ್ನು ಸನ್ಮಾನಿಸಲಾಯಿತು. ಶ್ರೀದೇವಿ, ಸುನೀತಾ, ಎ.ಸಿ ಧರಣೇಶ್, ಸಿ.ಕೆ ವೆಂಕಟೇಶ್, ಸಿ.ಪಿ ಸುರೇಶ್, ಎಚ್.ಎಸ್.ದೇವೇಗೌಡ, ಸಿ.ಎಸ್.ಗಣೇಶ್, ಪ್ರೇಮಮ್ಮ, ಸರಸ್ಪತಿ ಇದ್ದರು.
Published on

ಕೊನೇ ಸಭೆಯಲ್ಲಿ ಬೀಳ್ಕೊಡುಗೆ, ಅಭಿನಂದನೆ

ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಚಪ್ಪರದಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಕೊನೆಯ ಸಭಾ ಕಾರ್ಯಕ್ರಮದಲ್ಲಿ ಅವಧಿ ಪೂರ್ಣಗೊಂಡ ಸದಸ್ಯರಿಗೆ ಸನ್ಮಾನಿಸಿ, ಅಭಿನಂದನೆ ಸಲ್ಲಿಸಿ ಬೀಳ್ಕೊಡಲಾಯಿತು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ಕೆ.ಶ್ರೀದೇವಿ ಮಾತನಾಡಿ, ಯಾವುದೇ ಒಂದು ಕುಟುಂಬ ಯಶಸ್ವಿಯಾಗಿ ಮುನ್ನಡೆಯಲು ಎಲ್ಲ ಸದಸ್ಯರ ಸಹಕಾರ ಹೇಗೆ ಮುಖ್ಯವೋ ಹಾಗೆಯೇ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿ ವಿಚಾರದಲ್ಲಿ ಎಲ್ಲ ಸದಸ್ಯರ ಹಾಗೂ ಗ್ರಾಮಸ್ಥರ ಸಹಕಾರವೂ ಪ್ರಮುಖವಾಗಿದೆ. ಈ ನಿಟ್ಟಿನಲ್ಲಿ ಇಲ್ಲಿನ ಸರ್ವ ಸದಸ್ಯರು ಮತ್ತು ಗ್ರಾಮಸ್ಥರ ಸಹಕಾರದಿಂದ ಪ್ರಾಮಾಣಿಕವಾಗಿ ಸವಲತ್ತುಗಳನ್ನು ಜನರಿಗೆ ತಲುಪಿಸಲಾಗಿದೆ ಎಂದರು.
ಐದು ವರ್ಷ ಸೇವೆ ಸಲ್ಲಿಸಿ ಆಡಳಿತ ಅವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಎಲ್ಲ ಸದಸ್ಯರಿಗೆ ಸಭೆಯಲ್ಲಿ ಸನ್ಮಾನಿಸಿ, ಅಭಿನಂದಿಸಿ ಬೀಳ್ಕೊಡುಗೆ ನೀಡಲಾಯಿತು. ಸದಸ್ಯರು ತಮ್ಮ ಅಭಿಪ್ರಾಯ ಹಂಚಿಕೊಂಡರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಶ್ರೀಸ್ವಾಮಿ, ಉಪಾಧ್ಯಕ್ಷೆ ಸುನೀತಾಮಂಜು, ಸದಸ್ಯರಾದ ಎ.ಸಿ ಧರಣೇಶ್, ಸಿ.ಕೆ ವೆಂಕಟೇಶ್, ಸಿ.ಪಿ ಸುರೇಶ್, ಹೆಚ್.ಎಸ್ ದೇವೇಗೌಡ, ಸಿ.ಎಸ್ ಗಣೇಶ್, ಪ್ರೇಮಮ್ಮ ಮಲ್ಲೇಶಚಾರಿ, ಸರಸ್ಪತಿ ಅರುಣ್, ಶಶಿಕಲಾಕುಮಾರ, ಮೀನಾಕ್ಷಿ ಯೋಗೇಶ್, ಮಂಜುಳಾ ಶಿವಣ್ಣ, ಶೋಭಾ ರಾಜನಾಯಕ, ಬಸವರಾಜು, ಕಾರ್ಯದರ್ಶಿ ಹೆಚ್.ಪಿ ಕುಮಾರ, ಬಿಲ್ ಕಲೆಕ್ಟರ್ ರಮಣಯ್ಯ, ಕ್ಲರ್ಕ್ ಜಿ.ಕೆ ಮಹೇಂದ್ರ, ಸಿಬ್ಬಂದಿ ಪವಿತ್ರ ಸೇರಿದಂತೆ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net