ಮೈಸೂರಿನಲ್ಲಿ ಆ್ಯಪಲ್ ಕಂಪನಿಯ ನಕಲಿ ಉತ್ಪನ್ನಗಳ ಮಾರಾಟ..!

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಮೈಸೂರು: ನಗರದಲ್ಲಿ ಆ್ಯಪಲ್ ಕಂಪನಿಯ ನಕಲಿ ಉತ್ಪನ್ನಗಳು ಮಾರಾಟವಾಗುತ್ತಿದೆ ಎಂದು ಕಂಪನಿಯ ಪ್ರತಿನಿಧಿ ಲಷ್ಕರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಆ್ಯಪ್ ಕಂಪನಿಯು ಐ ಪೋನ್, ಐಪ್ಯಾಡ್ ಸೇರಿದಂತೆ ಹಲವು ಉತ್ಪನ್ನಗಳನ್ನು ಉತ್ಪಾದಿಸುತ್ತಿದ್ದು, ಕಂಪನಿಯು ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಆದರೆ, ಕೆ.ಟಿ. ಸ್ಟ್ರೀಟ್‌ನಲ್ಲಿರುವ ನರೇಶ್ ಟೆಲ್ಕಾಂ, ಶ್ರೀ ಕೃಷ್ಣ ಟೆಲ್ಕಾಂ, ರಾಜ್ ಟೆಲ್ಕಾಂ, ಮಹೇಶ್ ಟೆಲ್ಕಾಂ, ಮದನ್ ಟೆಲ್ಕಾಮ್, ನೇಮಿನಾಥ್ ಟೆಲ್ಕಾಂ, ಲಲಿತ್ ಟೆಲ್ಕಾಂ, ಕೃಷ್ಣ ಟೆಲ್ಕಾಂ, ಹನುಮಾನ್ ಟೆಲ್ಕಾಂನವರು ಕಂಪನಿಯ ಕಂಪನಿಯ ನಕಲಿ ಹಾಗೂ ಮೋಸದ ಉತ್ಪನ್ನಗಳನ್ನು ಅನಧಿಕೃತ ಮತ್ತು ಕಾನೂನು ಬಾಹಿರವಾಗಿ ಮಾರಾಟ ಮಾಡುತ್ತಿದ್ದಾರೆ. ಕಂಪನಿಯ ಉತ್ಪನ್ನಗಳ ಪ್ಯಾಕೇಜಿಂಗ್‌ನ ಕಲಾತ್ಮಕ ವಿನ್ಯಾಸವನ್ನು ಬಹುಮಟ್ಟಿಗೆ ನಕಲು ಮಾಡಲಾಗಿದ್ದು, ಇದರಿಂದ ಕಂಪನಿಯ ಬೌದ್ಧಿಕ ಸ್ವತ್ತಿನ ಹಕ್ಕುಗಳಿಗೆ ಧಕ್ಕೆ ಉಂಟಾಗಿದೆ. ಸೋಮವಾರ ಪರಿಶೀಲನೆ ವೇಳೆಯಲ್ಲಿ ಈ ಅಂಶ ಕಂಡು ಬಂದಿದೆ. ಕಂಪನಿಯ ನಕಲಿ ಉತ್ಪನ್ನಗಳ ಅನಧಿಕೃತ ಮಾರಾಟ ಮತ್ತು ವಿತರಣೆಯಲ್ಲಿ ಸಕ್ರಿಯವಾಗಿ ತೊಡಗಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕಂಪನಿಯ ಪ್ರತಿನಿಧಿ ಮೊಹಮ್ಮದ್ ತೌಕೀರ್ ಮಂಗಳವಾರ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಆಟೋಗೆ ಬೆಂಕಿ: ನಗರದ ಹಳೇ ಕೆಸರೆಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಆಟೋಗೆ ಮಂಗಳವಾರ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಹಳೇ ಕೆಸರೆ ನಿವಾಸಿ ನಾಗರಾಜು ಅವರು ಎಂದಿನಂತೆ ಆಟೋ ಓಡಿಸಿ ರಾತ್ರಿ 10ಕ್ಕೆ ಮನೆಗೆ ಆಗಮಿಸಿ ಮನೆಯ ಮುಂದೆ ಆಟೋ ನಿಲ್ಲಿಸಿದ್ದರು.
ಬೆಳಗ್ಗೆ 3.30ರ ವೇಳೆಯಲ್ಲಿ ಎದುರು ಮನೆಯ ರಾಜು ಅವರು ಆಟೋ ಹೊತ್ತಿ ಉರಿಯುತ್ತಿರುವುದನ್ನು ಗಮನಿಸಿ ನಾಗರಾಜು ಅವರ ಗಮನಕ್ಕೆ ತಂದರು. ಬಳಿಕ ನಾಗರಾಜು ಹಾಗೂ ಅಕ್ಕಪಕ್ಕದ ಮನೆಯವರು ಸೇರಿ ನೀರು ಹಾಕಿ ಬೆಂಕಿಯನ್ನು ನಂದಿಸಿದ್ದಾರೆ. ಇದೇ ರೀತಿ ಗಾಂಧಿ ನಗರದಲ್ಲಿ ಇತ್ತೀಚೆಗೆ 2 ಬೈಕ್‌ಗಳಿಗೆ ದುಷ್ಕರ್ಮಿಯೊಬ್ಬ ಬೆಂಕಿ ಹಚ್ಚಿದ್ದ. ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
-----------------
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net