ಸುತ್ತೂರುಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಉಪ್ಪಿನಬೆಟಗೇರಿಯ ಮೂರು ಸಾವಿರ ವಿರಕ್ತಮಠದ ಶ್ರೀ ಕುಮಾರ ವಿರುಪಾಕ್ಷ ಸ್ವಾಮೀಜಿ, ಅಮೀನಗಡದ ಪ್ರಭುಶಂಕರಮಠದ ಶ್ರೀ ಶಂಕರರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕರಾದ ಬೇಲೂರಿನ ಎಚ್.ಕೆ.ಸುರೇಶ್, ಚಿಕ್ಕಮಗಳೂರಿನ ಎಚ್.ಡಿ.ತಮ್ಮಯ್ಯ, ತಮಿಳುನಾಡಿನ ಭವಾನಸಾಗರದ ಶಾಸಕ ಎ.ಬಣ್ಣಾರಿ, ಎಂಎಲ್‌ಸಿ ಕೆ.ಶಿವಕುಮಾರ್, ಜಿಪಂ ಸಿಇಒ ಎಸ್.ಯಕೇಶ್ ಕುಮಾರ್ ಇತರರಿದ್ದರು.