ಕಣ್ಣಿನ ಸುರಕ್ಷತೆ ಮುಖ್ಯ

 ಸಾಲಿಗ್ರಾಮದಲ್ಲಿ ಕಣ್ಣಿನ ತಪಾಸಣೆ ಕಾರ್ಯಕ್ರಮದಲ್ಲಿ ಡಾ.ಕೀರ್ತಿ ಮಾತನಾಡಿದರು. ಕೆ.ಟಿ.ಮೋಹನ್ ಕುಮಾರ್, ಕೆ.ಆರ್.ಶ್ಯಾಮಸುಂದರ್, ವಾಸು,  ನಟರಾಜ್ ಇತರರು ಇದ್ದರು.
ಸಾಲಿಗ್ರಾಮದಲ್ಲಿ ಕಣ್ಣಿನ ತಪಾಸಣೆ ಕಾರ್ಯಕ್ರಮದಲ್ಲಿ ಡಾ.ಕೀರ್ತಿ ಮಾತನಾಡಿದರು. ಕೆ.ಟಿ.ಮೋಹನ್ ಕುಮಾರ್, ಕೆ.ಆರ್.ಶ್ಯಾಮಸುಂದರ್, ವಾಸು, ನಟರಾಜ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಆರೋಗ್ಯ ಕೇಂದ್ರದ ವೈದ್ಯ ಡಾ.ಕೀರ್ತಿ ಸಲಹೆ
ಸಾಲಿಗ್ರಾಮ: ಪ್ರತಿಯೊಬ್ಬ ಮನುಷ್ಯನಿಗೂ ಕಣ್ಣು ಪ್ರಮುಖವಾದ ಅಂಗವಾಗಿದ್ದು ಅದರ ಸುರಕ್ಷತೆ ಬಹುಮುಖ್ಯ ಎಂದು ಸಮುದಾಯ ಆರೋಗ್ಯ ಕೇಂದ್ರದ ವೈದ್ಯ ಡಾ.ಕೀರ್ತಿ ಹೇಳಿದರು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕರುನಾಡ ದೀಪ ಸೇವಾ ಟ್ರಸ್ಟ್, ಗ್ರಾಮೀಣ ನಿಧಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ, ಬೆಂಗಳೂರಿನ ಶಂಕರ ಕಣ್ಣಿನ ಆಸ್ಪತ್ರೆ, ಜಿಲ್ಲಾ ಅಂಧತ್ವ ನಿಯಂತ್ರಣ ಇವರು ಜಂಟಿಯಾಗಿ,ನಡೆಸಿದ ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.
ಸಂಘ ಸಂಸ್ಥೆಗಳು ಆರೋಗ್ಯಕ್ಕೆ ಸಂಬಂಧಿಸಿದಂತಹ ವಿವಿಧ ಉಚಿತ ಶಿಬಿರಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಮಟ್ಟದಲ್ಲಿ ನಡೆಸುವ ಮೂಲಕ ಗ್ರಾಮಾಂತರ ಪ್ರದೇಶದ ಜನರಿಗೆ ಉತ್ತಮ ಆರೋಗ್ಯ ಸೇವೆಯು ಸಿಗುವಂತೆ ಮಾಡಬೇಕು ಎಂದು ಸಲಹೆ ನೀಡಿದರು.
ಕರುನಾಡ ದೀಪ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ಟಿ.ಮೋಹನ್ ಕುಮಾರ್, ಗ್ರಾ.ಪಂ. ಮಾಜಿ ಉಪಾಧ್ಯಕ್ಷ ವಾಸು, ವೀರಶೈವ ಲಿಂಗಾಯತ ಮಹಾಸಭಾದ, ನಟರಾಜ್, ಕಾಂಗ್ರೆಸ್ ಮುಖಂಡ ಮಂಜೇಗೌಡ, ದಿನೇಶ್, ಎಂ.ಎಸ್.ನರಸಿಂಹ, ಮಂಜುನಾಥ, ಸಿಇಒ ಸಿಂಧೂ ಮಂಜುನಾಥ್, ಮಮತಾ, ಶಂಕರ ಕಣ್ಣಿನ ಆಸ್ಪತ್ರೆಯ ನೇತ್ರಾಧಿಕಾರಿ ಕೆ.ಎಸ್.ಶೇಖರ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net