ನಗರದ ನಾರಾಯಣ ಶಾಸ್ತ್ರಿರಸ್ತೆಯ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನದಲ್ಲಿ ಕಾರ್ಗಿಲ್ ವಿಜಯೋತ್ಸವ ಆಚರಿಸಲಾಯಿತು. ಪಿ.ಪ್ರಶಾಂತ್ ಗೌಡ, ವಿ.ಮಹೇಶ್, ಪ್ರಮೀಳಾ ಭರತ್, ಜಿ.ರಾಘವೇಂದ್ರ, ಹರೀಶ್, ಶ್ರೀನಿವಾಸ್, ಪುರುಷೋತ್ತಮ, ಅನಂತ್ ಕುಮಾರ್, ಮಹದೇವ್, ಪ್ರಸನ್ನ, ಮಂದಣ್ಣ, ನಾಗೇಶ್, ರಾಮಣ್ಣ, ನಿತಿನ್, ಬಾಲಕೃಷ್ಣ, ಅನಿಲ್ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ನಗರ ಪಾಲಿಕೆಯ ಮಾಜಿ ಸದಸ್ಯ ಪಿ. ಪ್ರಶಾಂತ್ ಗೌಡ ಅಭಿಮತ
ಮುಂದಿನ ವರ್ಷ ಕಾರ್ಗಿಲ್ ವಿಜಯೋತ್ಸವವನ್ನು ಇನ್ನಷ್ಟು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ನಗರ ಪಾಲಿಕೆಯ ಮಾಜಿ ಸದಸ್ಯ ಪಿ. ಪ್ರಶಾಂತ್ ಗೌಡ ಹೇಳಿದರು.
ನಗರದ ನಾರಾಯಣ ಶಾಸ್ತ್ರಿ ರಸ್ತೆಯ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನದಲ್ಲಿ (ಸುಬ್ಬರಾಯನಕೆರೆ)ಸತ್ಯ ಮೇವ ಜಯತೇ ತಂಡದ ವತಿಯಿಂದ ಭಾನುವಾರ ಆಯೋಜಿಸಿದ್ದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಕಾರ್ಗಿಲ್ ಯುದ್ಧದ ಅಮರ ವೀರಯೋಧರ ತ್ಯಾಗ ಮತ್ತು ಶೌರ್ಯವನ್ನು ಪ್ರತಿಯೊಬ್ಬ ಭಾರತೀಯರೂ ಸದಾ ಸ್ಮರಿಸಬೇಕು. ಇಂತಹ ದೇಶಭಕ್ತಿ ಕಾರ್ಯಕ್ರಮಗಳಲ್ಲಿ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ವೀರ ಯೋಧರಿಗೆ ಗೌರವ ಸಲ್ಲಿಸಬೇಕು ಎಂದು ಕರೆ ನೀಡಿದರು.
ಕಾರ್ಗಿಲ್ ಯುದ್ಧದ ಅಮರ ವೀರಯೋಧರಾದ ಕ್ಯಾಪ್ಟನ್ ವಿಕ್ರಂ ಭತ್ರ, ಕ್ಯಾಪ್ಟನ್ ಸೌರಭ್ ಕಾಲಿಯಾ ಹಾಗೂ ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ ಅವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿ ಗೌರವ ಅರ್ಪಿಸಲಾಯಿತು.
ಮಾಜಿ ಸೈನಿಕ ವಿ. ಮಹೇಶ್, ನಗರ ಪಾಲಿಕೆ ಮಾಜಿ ಸದಸ್ಯೆ ಪ್ರಮೀಳಾ ಭರತ್, ಯುವ ಮುಖಂಡ ಜಿ. ರಾಘವೇಂದ್ರ, ಸೈನಿಕ ಹರೀಶ್, ಸತ್ಯ ಮೇವ ಜಯತೇ ತಂಡದ ಸದಸ್ಯರಾದ ಶ್ರೀನಿವಾಸ್, ಪುರುಷೋತ್ತಮ, ಅನಂತ್ ಕುಮಾರ್, ಮಹದೇವ್, ಪ್ರಸನ್ನ, ಮಂದಣ್ಣ, ನಾಗೇಶ್, ರಾಮಣ್ಣ, ನಿತಿನ್, ಬಾಲಕೃಷ್ಣ, ಅನಿಲ್ ಇತರರಿದ್ದರು.