ಬನ್ನೂರಿನಲ್ಲಿ ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ವತಿಯಿಂದ ಸಮಾಜಸೇವಾ ಪ್ರಶಸ್ತಿ ಪುರಸ್ಕತರಾದ ತಾಲೂಕು ಒಕ್ಕಲಿಗ ಸಂಘದ ಅಧ್ಯಕ್ಷ ವೈ.ಎಸ್.ರಾಮಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ಮೇಗಳಕೊಪ್ಪಲು ಜಯರಾಮು, ರಂಗಸ್ವಾಮಿ, ಚಿಕ್ಕಿರಯ್ಯ, ಅತ್ತಳ್ಳಿ ಮೋಹನ್, ರಂಗಸ್ವಾಮಿ, ಕುಂತನಹಳ್ಳಿ ಚಲುವರಾಜು, ಕೃಷ್ಣೇಗೌಡ, ಬೀಡನಹಳ್ಳಿ ದೇವರಾಜು, ಬಾಣಗವಾಡಿ ನಾರಾಯಣಸ್ವಾಮಿ ಇತರರು ಇದ್ದರು.
ಣದಲ್ಲಿ ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ವತಿಯಿಂದ ಗುರುವಾರ ಸಮಾಜ ಸೇವಾ ಪ್ರಶಸ್ತಿ ಪುರಸ್ಕತರಾದ ತಾಲೂಕು ಒಕ್ಕಲಿಗ ಸಂಘದ ಅಧ್ಯಕ್ಷ ವೈ.ಎಸ್.ರಾಮಸ್ವಾಮಿರನ್ನು ಸನ್ಮಾನಿಸಲಾಯಿತು.
ಪಟ್ಟಣದಲ್ಲಿರುವ ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವೈ.ಎಸ್.ರಾಮಸ್ವಾಮಿ ಅವರನ್ನು ಸನ್ಮಾನಿಸಲಾಯಿತು.
ಬಳಿಕ ಮಾತನಾಡಿದ ವೈ.ಎಸ್.ರಾಮಸ್ವಾಮಿ, ಸಮಾಜದಲ್ಲಿ ಮತ್ತಷ್ಟು ಸೇವಾ ಕಾರ್ಯಗಳು ಮಾಡಲು ಪ್ರಶಸ್ತಿಗಳು ಹುರುಪು ನೀಡಲಿವೆ. ಮನುಷ್ಯನಾಗಿ ಹುಟ್ಟಿದ ಮೇಲೆ ಸಮಾಜಕ್ಕೆ ಯಾವುದಾದರೂ ಕೊಡುಗೆ ನೀಡಿದಾಗ ಮಾತ್ರ ಅವನ ಜೀವನ ಸಾರ್ಥಕವಾಗುತ್ತದೆ. ಪ್ರತಿಯೊಬ್ಬರು ಸೇವಾ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಸಲಹೆ ನೀಡಿದರು.
ಮುಖಂಡರಾದ ಮೇಗಳಕೊಪ್ಪಲು ಜಯರಾಮು, ರಂಗಸ್ವಾಮಿ, ಚಿಕ್ಕಿರಯ್ಯ, ಅತ್ತಳ್ಳಿ ಮೋಹನ್, ರಂಗಸ್ವಾಮಿ, ಕುಂತನಹಳ್ಳಿ ಚಲುವರಾಜು, ಕೃಷ್ಣೇಗೌಡ, ಬೀಡನಹಳ್ಳಿ ದೇವರಾಜು, ಬಾಣಗವಾಡಿ ನಾರಾಯಣಸ್ವಾಮಿ ಇತರರು ಇದ್ದರು.