ಮೈಸೂರಿನಲ್ಲಿ ಬೀದಿಬದಿ ವ್ಯಾಪಾರಿಗಳ ವಲಯ ಸ್ಥಾಪಿಸಿ : ಸಂಸದ ಯದುವೀರ್
ಮೈಸೂರು ನಗರ ಪಾಲಿಕೆಯ ಸಭಾಂಗಣದಲ್ಲಿ ಶುಕ್ರವಾರ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಧಿಕಾರಿಗಳ ಸಭೆ ನಡೆಸಿದರು. ಶೇಖ್ ತನ್ವೀರ್ ಆಸಿಫ್, ಕುಸುಮ ಕುಮಾರಿ, ದಾಸೇಗೌಡ, ಸೋಮಶೇಖರ್ ಜಿಗಣಿ ಹಾಗೂ ಇತರರು ಇದ್ದರು.
Published on:
Copied
Follow Us
ಮೈಸೂರು: ಬೀದಿ ವ್ಯಾಪಾರ ವ್ಯವಸ್ಥಿತ ರೀತಿಯಲ್ಲಿ ನಡೆಯುವಂತೆ ಮಾಡಲು ಬೀದಿಬದಿ ವ್ಯಾಪಾರಿಗಳ ವಲಯ ಸ್ಥಾಪಿಸಬೇಕು ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನಗರ ಪಾಲಿಕೆಯ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಬೀದಿಬದಿ ವ್ಯಾಪಾರಿ ಗಳಿಗೆ ಪೂರಕವಾಗಿ ಕೆಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಅವಶ್ಯಕತೆ ಇದೆ. ಬೀದಿಬದಿ ವ್ಯಾಪಾರಿಗಳಿಗೆ ಎಲ್ಲ ರೀತಿಯ ಸೌಲಭ್ಯಗಳು ದೊರೆತರೆ ನಗರದ ಸ್ವಚ್ಛತೆಯ ದೃಷ್ಟಿಯಲ್ಲೂ ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಬೀದಿಬದಿ ವ್ಯಾಪಾರಿಗಳು ಸ್ವಚ್ಛತೆ ಕಾಪಾಡಿಕೊಳ್ಳುವ ಜತೆಗೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ವ್ಯಾಪಾರ ಮಾಡಬೇಕು. ಫುಟ್‌ಪಾತ್ ಮೇಲೆ ವ್ಯಾಪಾರ ವಹಿವಾಟು ನಡೆಸುವ ಸಂದರ್ಭ ಪಾದಚಾರಿಗಳಿಗೆ ಅನಾನುಕೂಲವಾಗದಂತೆ ಎಚ್ಚರ ವಹಿಸಬೇಕು. ಮೈಸೂರು ಸ್ವಚ್ಛ ಮತ್ತು ಪಾರಂಪರಿಕ ನಗರವಾಗಿದೆ. ಈ ಗರಿಮೆಯನ್ನು ಉಳಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.
ದಸರಾ, ಜಾತ್ರೆ, ಉತ್ಸವ ಅಥವಾ ಹೆಚ್ಚು ಜನರು ಸೇರುವಂತಹ ಕಾರ್ಯಕ್ರಮಗಳ ಸಂದರ್ಭದಲ್ಲಿ ವಿಶೇಷ ಹಾಕಿಂಗ್‌ವಲಯಗಳನ್ನು ರಚಿಸಬಹುದು. ಇದರಿಂದ ಜನರಿಗೆ ಹಾಗೂ ಬೀದಿಬದಿ ವ್ಯಾಪಾರಿಗಳಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.
ಸಭೆಯಲ್ಲಿ ನಗರಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್, ಹೆಚ್ಚುವರಿ ಆಯುಕ್ತೆ ಕುಸುಮ ಕುಮಾರಿ, ಉಪ ಆಯುಕ್ತರಾದ ದಾಸೇಗೌಡ, ಸೋಮಶೇಖರ್ ಜಿಗಣಿ ಹಾಗೂ ಇತರರು ಇದ್ದರು.