ಅಂಗವಿಕಲರಿಗೆ 2.5 ಲಕ್ಷ ರೂ ಮೌಲ್ಯದ ಸಲಕರಣೆ ಕೊಡುಗೆ

ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಸಮರ್ಥ ಯೋಜನೆ ಅಡಿಯಲ್ಲಿ ಅಂಗವಿಕಲರಿಗೆ ವಿವಿಧ ಸಹಾಯಕ ಸಾಧನಗಳನ್ನು ವಿತರಿಸಲಾಯಿತು. ಭೀಮಪ್ಪ ಕೆ.ಲಾಳಿ, ಕೆ.ಎಸ್.ರಾಘವೇಂದ್ರ, ಡಾ.ಕೆ.ಮೋಹನ್, ನಿಲೋವನ್ ಘೋಷ್, ಸವಿತಾ ಸುಳಗೋಡು, ಕೆ.ಆರ್.ಶಂಕರ್ ಇದ್ದರು.
ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಸಮರ್ಥ ಯೋಜನೆ ಅಡಿಯಲ್ಲಿ ಅಂಗವಿಕಲರಿಗೆ ವಿವಿಧ ಸಹಾಯಕ ಸಾಧನಗಳನ್ನು ವಿತರಿಸಲಾಯಿತು. ಭೀಮಪ್ಪ ಕೆ.ಲಾಳಿ, ಕೆ.ಎಸ್.ರಾಘವೇಂದ್ರ, ಡಾ.ಕೆ.ಮೋಹನ್, ನಿಲೋವನ್ ಘೋಷ್, ಸವಿತಾ ಸುಳಗೋಡು, ಕೆ.ಆರ್.ಶಂಕರ್ ಇದ್ದರು.
Published on
ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಸಮರ್ಥ ಯೋಜನೆಯಡಿ 40 ಜನ ಅಂಗವಿಕಲರಿಗೆ 2.5 ಲಕ್ಷ ರೂ. ಮೌಲ್ಯದ ವಿವಿಧ ಸಹಾಯಕ ಸಾಧನಗಳನ್ನು ವಿತರಿಸಲಾಯಿತು.
ನಗರದ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಆವರಣದಲ್ಲಿರುವ ವೈದ್ಯರ ಭವನದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಯರಾ ಎನರ್ಜಿ ಲಿಮಿಟೆಡ್‌ನ ಸಿಎಸ್‌ಆರ್ ಅನುದಾನದಡಿ ಕೃತಕ ಕಾಲು, ವೀಲ್‌ಚೇರ್, ವಾಕಿಂಗ್ ಸ್ಟಿಕ್, ಕಮೋಡ್ ಚೇರ್, ಏರ್ ಬೆಡ್ ಸೇರಿದಂತೆ ವಿವಿಧ ಸಹಾಯಕ ಸಾಧನಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಜಿಪಂ ಉಪಕಾರ್ಯದರ್ಶಿ (ಅಭಿವೃದ್ಧಿ) ಭೀಮಪ್ಪ ಕೆ.ಲಾಳಿ ಮಾತನಾಡಿ, ಅಂಗವಿಕಲರ ಸ್ವಾವಲಂಬನೆಗಾಗಿ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಹಲವು ಯೋಜನೆಗಳನ್ನು ರೂಪಿಸಿ ನೆರವಾಗುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕೆ.ಎಸ್.ರಾಘವೇಂದ್ರ ಮಾತನಾಡಿ, ಅಂಗವಿಕಲರು ಸಮಾಜದಲ್ಲಿ ಸ್ವತಂತ್ರವಾಗಿ ಬದುಕಲು ಅಗತ್ಯವಾದ ನೆರವನ್ನು ನೀಡುವ ಮೂಲಕ ಅವರನ್ನು ಮುಖ್ಯವಾಹಿನಿಗೆ ತರುವ ಕಾರ್ಯವನ್ನು ಸಂಸ್ಥೆ ಯಶಸ್ವಿಯಾಗಿ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಡಿಎಚ್‌ಒ ಡಾ.ಕೆ.ಮೋಹನ್, ನಯರಾ ಎನರ್ಜಿ ಲಿಮಿಟೆಡ್‌ನ ಸಿಎಸ್‌ಆರ್ ವಿಭಾಗದ ಮುಖ್ಯಸ್ಥ ನಿಲೋವನ್ ಘೋಷ್, ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಸಿಇಒ ಸವಿತಾ ಸುಳಗೋಡು, ಸಿಸಿಆರ್‌ಟಿ ಯೋಜನಾ ನಿರ್ದೇಶಕ ಕೆ.ಆರ್.ಶಂಕರ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net