ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಆದ್ಯತ ಆಗಬೇಕು : ಎಡಿಸಿ ಡಾ.ಪಿ. ಶಿವರಾಜು
ಮೈಸೂರು ನಗರದ ಇಂಜಿನಿಯರ್‌ಗಳ ಸಂಸ್ಥೆ ಸಭಾಂಗಣದಲ್ಲಿ ಆರ್‌ಎಲ್‌ಎಚ್‌ಪಿ ಸಂಸ್ಥೆ ಶುಕ್ರವಾರ ಆಂೋಜಿಸಿದ್ದ ವಿಚಾರಸಂಕಿರಣವನ್ನು ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಉದ್ಘಾಟಿಸಿದರು. ಮಂಜುನಾಥ್ ಅಂಗಡಿ, ಬಿ.ಡಿ.ಜಯರಾಮ್, ವಿ.ಎಂ.ಪ್ರಭುಸ್ವಾಮಿ ಹಾಗೂ ಇತರರು ಇದ್ದರು.
ಮೈಸೂರು: ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರು ಶ್ರಮಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಕರೆ ನೀಡಿದರು.
ನಗರದ ಇಂಜಿನಿಯರ್‌ಗಳ ಸಂಸ್ಥೆ ಸಭಾಂಗಣದಲ್ಲಿ ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ(ಆರ್‌ಎಲ್‌ಎಚ್‌ಪಿ) ಮತ್ತು ಕರ್ನಾಟಕ ಂುೂತ್ ನೆಟ್‌ವರ್ಕ್ ಶುಕ್ರವಾರ ‘ಪರಿಸರ ಸಂರಕ್ಷಣೆಯಲ್ಲಿ ಯುವಜನರ ಪಾತ್ರ’ ವಿಷಯದ ಕುರಿತು ಆಂೋಜಿಸಿದ್ದ ವಿಚಾರಸಂಕಿರಣ ಉದ್ಘಾಟಿಸಿ ಮಾತನಾಡಿ, ಉತ್ತಮ ಪರಿಸರ ಇದ್ದರೆ ಮಾತ್ರಮ ಮಳೆ, ಬೆಳೆ ಚೆನ್ನಾಗಿ ಆಗಲು ಸಾಧ್ಯ. ಹಾಗಾಗಿ ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಆದ್ಯತೆ ಆಗಬೇಕು ಎಂದರು.
ಅರಣ್ಯ ಸಂಪತ್ತನ್ನು ಉಳಿಸಿಕೊಳ್ಳುವ ಜತೆಗೆ ಬೆಳೆಸುವ ಕಾಂರ್ು ಆಗಬೇಕು. ಪ್ರತಿಂೊಬ್ಬರೂ ಒಂದೊಂದು ಗಿಡ ನೆಟ್ಟು ಬೆಳೆಸಿದರೆ ಪರಿಸರಕ್ಕೆ ದೊಡ್ಡ ಕೊಡುಗೆ ನೀಡಿದಂತೆ ಆಗುತ್ತದೆ ಎಂದು ಹೇಳಿದರು.
ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ್ ಅಂಗಡಿ ವಾತನಾಡಿ, ಗಿಡಗಳನ್ನು ನೆಡುವುದಷ್ಟೇ ಅಲ್ಲ, ಈಗಿರುವ ಮರ ಮತ್ತು ಅರಣ್ಯಗಳನ್ನು ಕಾಪಾಡುವುದು ನಮ್ಮ ಕೆಲಸವೇ. ಂಾರೊಬ್ಬರೂ ಈ ಕೆಲಸದಿಂದ ನುಣುಚಿಕೊಳ್ಳುವಂತಿಲ್ಲ. ಅರಣ್ಯ ಸಂಪತ್ತು ದೇಶದ ಅಮೂಲ್ಯ ಸಂಪತ್ತುಗಳಲ್ಲಿ ಒಂದಾಗಿದೆ ಎಂದರು.
ಸಹಾಯಕ ಕೃಷಿ ನಿರ್ದೆಶಕ ಬಿ.ಡಿ.ಜಯರಾಮ್, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೆಶಕ ವಿ.ಎಂ.ಪ್ರಭುಸ್ವಾಮಿ, ಡಯಟ್ ಉಪನಿರ್ದೇಶಕ(ಶೈಕ್ಷಣಿಕ) ನಾಗರಾಜಯ್ಯ, ಆರ್‌ಎಲ್‌ಎಚ್‌ಪಿ ನಿರ್ದೇಶಕಿ ಸರಸ್ವತಿ, ಪರಿಸರಕ್ಕಾಗಿ ನಾವು ಸಂಘಟನೆ ಪ್ರಧಾನ ಕಾರ್ಯದರ್ಶಿ ಪರಶು ರಾಮೇಗೌಡ ಹಾಗೂ ಇತರರು ಇದ್ದರು.