ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ಪಟ್ಟಣದ ಚಂದ್ರಮೌಳೇಶ್ವರ ಶಾಲೆಯಲ್ಲಿ ಗಿಡ ನೆಡುವುದರ ಮೂಲಕ ಪರಿಸರ ದಿನ ಆಚರಿಸಲಾಯಿತು.ವೇಣುಗೋಪಾಲ್, ಗುರುಸ್ವಾಮಿ, ತಿರುಮಲ್ಲೇಶ್, ಗುಣಶ್ರೀ ಇದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ಪಟ್ಟಣದ ಚಂದ್ರಮೌಳೇಶ್ವರ ಶಾಲೆಯಲ್ಲಿ ಗಿಡ ನೆಡುವುದರ ಮೂಲಕ ಪರಿಸರ ದಿನ ಆಚರಿಸಲಾಯಿತು.ವೇಣುಗೋಪಾಲ್, ಗುರುಸ್ವಾಮಿ, ತಿರುಮಲ್ಲೇಶ್, ಗುಣಶ್ರೀ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತಾಲೂಕು ಯೋಜನಾಧಿಕಾರಿ ವೇಣುಗೋಪಾಲ್ ಹೇಳಿಕೆ
ಎಚ್.ಡಿ.ಕೋಟೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ, ಪಟ್ಟಣದ ಚಂದ್ರಮೌಳೇಶ್ವರ ಶಾಲೆಯಲ್ಲಿ ಪರಿಸರ ದಿನವನ್ನು ಇತ್ತೀಚೆಗೆ ಗಿಡ ನೆಡುವುದರ ಮೂಲಕ ಆಚರಿಸಲಾಯಿತು.
ತಾಲೂಕು ಯೋಜನಾಧಿಕಾರಿ ವೇಣುಗೋಪಾಲ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ, ನಾವೆಲ್ಲರೂ ಪರಿಸರ ರಕ್ಷಣೆ ಮಾಡಬೇಕು. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ನಾವೆಲ್ಲರೂ ಸೇರಿ ನಮ್ಮ ಹುಟ್ಟು ಹಬ್ಬದ ದಿನ ಪಟಾಕಿ ಹೊಡೆದು ಸಂಭ್ರಮ ಮಾಡಿ ಪರಿಸರ ಹಾನಿ ಮಾಡುವ ಬದಲು ಒಂದು ಗಿಡ ನೆಟ್ಟು ಅದನ್ನು ಆರೈಕೆ ಮಾಡಿ ಎಂದು ತಿಳಿಸಿದರು.
ಜಿಲ್ಲಾ ಜನಜಾಗೃತಿ ಸದಸ್ಯ ಪ್ರಮೋದ್ ಮಾತನಾಡಿ, ಸಾಲುಮರದ ತಿಮ್ಮಕ್ಕ ಅವರನ್ನು ನಾವೆಲ್ಲರೂ ಪ್ರೇರಣೆ ಆಗಿ ತೆಗೆದುಕೊಳ್ಳಬೇಕು. ಈ ವರ್ಷ ದಲ್ಲಿ ನಾವು ಎಂದೂ ಕಾಣದಂತಹ ಬಿಸಿಲಿನ ತಾಪವನ್ನು ಅನುಭವಿಸಿದ್ದೇವೆ. ಇದೆಲ್ಲ ಪ್ರಕೃತಿಯಲ್ಲಿ ಆಗುವ ಬದಲಾವಣೆಗಳು. ನಾವು ನಮ್ಮ ಸುತ್ತ ಮುತ್ತಲಿನ ಪರಿಸರವನ್ನು ಉಳಿಸಬೇಕು ಎಂದು ತಿಳಿಸಿದರು. ಪ್ರೌಢಶಾಲಾ ಮುಖ್ಯ ಶಿಕ್ಷಕ ಮಹದೇವಪ್ಪ ಮಾತನಾಡಿ, ಹಿಂದೆ ಅವಿದ್ಯಾವಂತರಾಗಿದ್ದವರು ಅಪ್ಪಿಕೋ ಚಳವಳಿ ಮಾಡಿ ಪರಿಸರವನ್ನು ರಕ್ಷಣೆ ಮಾಡುತ್ತೀದ್ದರು. ಇನ್ನು ನಾವೆಲ್ಲ ವಿದ್ಯಾವಂತರು, ಪ್ರಕೃತಿ ಮತ್ತು ಪರಿಸರವನ್ನು ಉಳಿಸಬೇಕು ಎಂದು ತಿಳಿಸಿದರು.
ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಗುರುಸ್ವಾಮಿ, ಜಿಲ್ಲಾ ಜನಜಾಗೃತಿ ಸದಸ್ಯ ಶಿವರಾಜು, ಕೃಷಿ ಮೇಲ್ವಿಚಾರಕ ತಿರುಮಲ್ಲೇಶ್, ವಲಯದ ಮೇಲ್ವಿಚಾರಕಿ ಗುಣಶ್ರೀ, ಸೇವಾಪ್ರತಿನಿಧಿ ವಿನುತಾ, ಹಾಲಮ್ಮ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net