ಮಾನವನ ದುರಾಸೆಯಿಂದ ಪರಿಸರ ನಾಶ

  ಬನ್ನೂರು ರಸ್ತೆಯ ವಿದ್ಯಾಜ್ಯೋತಿ ಸಮಾಜ ಕಲ್ಯಾಣ ಕೇಂದ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ಪರಿಸರ ದಿನವನ್ನು ಗಿಡ ನೆಡುವ ಮೂಲಕ ಆಚರಿಸಲಾಯಿತು. ಕವೀಶ್ ಗೌಡ,  ಸಿಸ್ಟರ್ ತೆರೇಸಾ ಇತರರಿದ್ದರು.
ಬನ್ನೂರು ರಸ್ತೆಯ ವಿದ್ಯಾಜ್ಯೋತಿ ಸಮಾಜ ಕಲ್ಯಾಣ ಕೇಂದ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ಪರಿಸರ ದಿನವನ್ನು ಗಿಡ ನೆಡುವ ಮೂಲಕ ಆಚರಿಸಲಾಯಿತು. ಕವೀಶ್ ಗೌಡ, ಸಿಸ್ಟರ್ ತೆರೇಸಾ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಾಮಾಜಿಕ ಹೋರಾಟಗಾರ ಅಹಿಂದ ಜವರಪ್ಪ ಕಳವಳ
  • ಸಮೂಹವೇ ಒಂದಾಗಿ ಪರಿಸರ ಸಂರಕ್ಷಣೆಗೆ ಮುಂದಾಗದಿದ್ದರೆ ಅಪಾರ ಹಾನಿ
ಮೈಸೂರು: ಮಾನವನ ದುರಾಸೆಯಿಂದ ಪರಿಸರ ನಾಶವಾಗುತ್ತಿದೆ. ಜಾಗತಿಕ ತಾಪಮಾನ ಏರಿಕೆಯೂ ಪ್ರಾಕೃತಿಕ ಸಮಸ್ಯೆ ಸೃಷ್ಟಿಸುತ್ತಿದೆ ಎಂದು ಸಾಮಾಜಿಕ ಹೋರಾಟಗಾರ ಅಹಿಂದ ಜವರಪ್ಪ ಕಳವಳ ವ್ಯಕ್ತಪಡಿಸಿದರು.
ಗ್ರಾಮೀಣಾ ಮಹಿಳಾ ಸ್ವಸಹಾಯ ಸಂಘ ವತಿಯಿಂದ ಬನ್ನೂರು ರಸ್ತೆಯ ವಿದ್ಯಾಜ್ಯೋತಿ ಸಮಾಜ ಕಲ್ಯಾಣ ಕೇಂದ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ಪರಿಸರ ದಿನಾಚರಣೆಯಲ್ಲಿ ಮಾತನಾಡಿದರು.
ಕಾಲಕಾಲಕ್ಕೆ ಮಳೆಯಾಗುತ್ತಿಲ್ಲ. ಸಾಂಕ್ರಾಮಿಕ ರೋಗಗಳು, ಕುಡಿಯುವ ನೀರಿಗೆ ಕೊರತೆ ಹೆಚ್ಚುತ್ತಿದೆ. ಇವೆಲ್ಲ ಪರಿಸರ ನಾಶದ ಕೊಡುಗೆಗಳಾಗಿವೆ ಎಂದರು.
ಜಲಮೂಲಗಳು ಬತ್ತುತ್ತಿದ್ದು, ಕುಡಿಯುತ್ತಿರುವ ನೀರು ಯೋಗ್ಯವಾಗಿಲ್ಲ. ಗ್ರಾಮಾಂತರ ಪ್ರದೇಶಗಳಲ್ಲಿ ಕೆರೆಕಟ್ಟೆಗಳು ಬರಿದಾಗುತ್ತಿವೆ. ಹಳ್ಳಿಯಲ್ಲೂ ಫಿಲ್ಟರ್ ನೀರು ಕುಡಿಯುವಂತಾಗಿದೆ. ನದಿ, ಕೆರೆಗಳಲ್ಲಿ ತ್ಯಾಜ್ಯ ಮತ್ತು ಕಲುಷಿತ ನೀರು ಎಗ್ಗಿಲ್ಲದೇ ಸೇರ್ಪಡೆಯಾಗುತ್ತಿದೆ. ಮನುಷ್ಯರು ಮಾತ್ರವಲ್ಲದೇ ವನ್ಯಜೀವಿಗಳು ವಿವಿಧ ಕಾಯಿಲೆಗೆ ತುತ್ತಾಗುತ್ತಿವೆ ಎಂದರು.
ಮಹಿಳೆಯರು ಪರಿಸರ ಉಳಿಸುವ ಜವಾಬ್ದಾರಿ ತೆಗೆದುಕೊಳ್ಳಬೇಕು. ವಿದ್ಯಾರ್ಥಿಗಳು ತಮ್ಮ ಭವಿಷ್ಯಕ್ಕಾಗಿ ಜಾಗೃತರಾಗಿ ಪರಿಸರ ಹಾಳು ಮಾಡದಂತೆ ಹಿರಿಯರಿಗೆ ಎಚ್ಚರಿಕೆ ಮೂಡಿಸಬೇಕು. ಸಮೂಹವೇ ಒಂದಾಗಿ ಪರಿಸರ ಸಂರಕ್ಷಣೆಗೆ ಮುಂದಾಗದಿದ್ದರೆ ಅಪಾರ ಹಾನಿಗೆ ಒಳಗಾಗಬೇಕಾಗುತ್ತದೆ. ಪ್ರತಿಯೊಬ್ಬರೂ ಸಸಿ ನೆಟ್ಟು ಪರಿಸರ ಸಮತೋಲನಕ್ಕೆ ಕೊಡುಗೆ ನೀಡಬೇಕು ಎಂದು ತಿಳಿಸಿದರು.
ವಿದ್ಯಾವಿಕಾಸ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಕವೀಶ್ ಗೌಡ ಮಾತನಾಡಿ, ಎಲ್ಲರ ಬಳಿ ಎರಡೆರಡು ಮೊಬೈಲ್‌ಗಳಿವೆ. ವಾಹನಗಳು, ಫ್ರಿಡ್ಜ್ ಸೇರಿದಂತೆ ಅತ್ಯಾಧುನಿಕ ಯಂತ್ರಗಳ ದಾಸರಾಗಿದ್ದಾರೆ. ತಾಂತ್ರಿಕತೆಯ ಅಪರಿಮಿತವಾದ ಸಾಧ್ಯತೆಯನ್ನು ಎಗ್ಗಿಲ್ಲದೇ ಬಳಸಿಕೊಂಡು ನೈಸರ್ಗಿಕ ಸಂಪನ್ಮೂಲವನ್ನು ಭವಿಷ್ಯದ ಪೀಳಿಗೆಗೆ ಉಳಿಸಬೇಕೆಂಬ ವಿವೇಕ ತೋರದೇ ಪರಿಸರ ಹಾಳು ಮಾಡಲಾಗುತ್ತಿದೆ ಎಂದರು.
ವಿದ್ಯಾಜ್ಯೋತಿ ಸಮಾಜ ಕಲ್ಯಾಣ ಕೇಂದ್ರದಲ್ಲಿ ಮಹಿಳೆಯರಿಗೆ ವಿವಿಧ ತರಬೇತಿ ಜತೆಗೆ ಶಿಕ್ಷಣ ಕೊಡಲಾಗುತ್ತಿದೆ. ಇಲ್ಲಿ ತಯಾರಾಗುವ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸಲಾಗುವುದು. ಕೇಂದ್ರದ ಎಲ್ಲ ಚಟುವಟಿಕೆಗೆ ಅಗತ್ಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಹೆಚ್ಚುವರಿ ಪ್ರಾದೇಶಿಕ ಆಯುಕ್ತ ಡಾ.ಶಿವರಾಜು ಮತ್ತು ಕವೀಶ್ ಗೌಡ ಅವರನ್ನು ಸನ್ಮಾನಿಸಲಾಯಿತು. ಶಾಂತಿ, ಸಿಸ್ಟರ್ ತೆರೇಸಾ, ಸಿಸ್ಟರ್ ಗ್ರೇಟಾ, ಖಜಾನೆ ಅಧಿಕಾರಿ ನಾಗರಾಜು, ಹರೀಶ್ ಬಾಬು, ಕರಾಟೆ ಶಿವು, ವರಕೋಡು ಸುರೇಶ್ ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net