ಗಜಲ್‌ಗಳಿಗೆ ಭಾವನೆಗಳು ಮುಖ್ಯ : ಸಾಹಿತಿ ಡಿ.ಬಿ. ರಾಘವೇಂದ್ರರಾವ್

ಪಿ. ಕಾತ್ಯಾಯಿನಿ ರಚನೆಯ ‘ಬಚ್ಚಿಟ್ಟ ಭಾವಗಳು’ ಹಾಗೂ ‘ಚಿಕ್ಕಕಥೆಗಳ ಚುಕ್ಕಿ ರಂಗೋಲಿ’ ಕೃತಿಗಳನ್ನು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಬಿಡುಗಡೆ ಮಾಡಿದರು. ಬಾಳಗುಣಸೆ ಮಂಜುನಾಥ್, ಡಿ.ಬಿ. ರಾಘವೇಂದ್ರರಾವ್, ಮಡ್ಡೀಕೆರೆ ಗೋಪಾಲ್, ಗಣೇಶ್  ಪ್ರಸಾದ್ ಪಾಂಡೇಲು ಹಾಗೂ ಇತರರು ಇದ್ದರು.
ಪಿ. ಕಾತ್ಯಾಯಿನಿ ರಚನೆಯ ‘ಬಚ್ಚಿಟ್ಟ ಭಾವಗಳು’ ಹಾಗೂ ‘ಚಿಕ್ಕಕಥೆಗಳ ಚುಕ್ಕಿ ರಂಗೋಲಿ’ ಕೃತಿಗಳನ್ನು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಬಿಡುಗಡೆ ಮಾಡಿದರು. ಬಾಳಗುಣಸೆ ಮಂಜುನಾಥ್, ಡಿ.ಬಿ. ರಾಘವೇಂದ್ರರಾವ್, ಮಡ್ಡೀಕೆರೆ ಗೋಪಾಲ್, ಗಣೇಶ್ ಪ್ರಸಾದ್ ಪಾಂಡೇಲು ಹಾಗೂ ಇತರರು ಇದ್ದರು.
Published on
ಮೈಸೂರು: ಹೊಯ್ಸಳ ಕನ್ನಡ ಸಂಘ, ಸವಿಗನ್ನಡ ಬಳಗವು ಜಿಲ್ಲಾ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಭಾನುವಾರ ವಿಜಯನಗರದ ಕನ್ನಡ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಿ. ಕಾತ್ಯಾಯಿನಿ ರಚನೆಯ ‘ಬಚ್ಚಿಟ್ಟ ಭಾವಗಳು’ ಹಾಗೂ ‘ಚಿಕ್ಕಕಥೆಗಳ ಚುಕ್ಕಿ ರಂಗೋಲಿ’ ಕೃತಿ ಲೋಕಾರ್ಪಣೆಗೊಂಡಿತು.
ಸಾಹಿತಿ ಡಿ.ಬಿ. ರಾಘವೇಂದ್ರರಾವ್ ಮಾತನಾಡಿ, ಗಜಲ್‌ಗಳಿಗೆ ಭಾವನೆಗಳು ಮುಖ್ಯ. ಗಜಲ್‌ಗಳದು ಉತ್ತಮ ಲೋಕ. ನಿರಂತರವಾಗಿ ಬರೆಯುತ್ತಿದ್ದರೆ ಗಜಲ್ ಸಿದ್ಧಿಸುತ್ತದೆ ಎಂದರು.
‘ಬಚ್ಚಿಟ್ಟ ಭಾವಗಳು’ ಗಜಲ್ ಸಂಕಲನ ಕುರಿತು ಹಿರಿಯ ಪತ್ರಕರ್ತ ಗಣೇಶ್ ಪ್ರಸಾದ್ ಪಾಂಡೇಲು ಮಾತನಾಡಿ, ಕನ್ನಡದಲ್ಲಿ ಮೊದಲು ಶಾಂತರಸ ಅವರು ಗಜಲ್‌ಗಳನ್ನು ಬರೆದರು. ನಂತರ ಈ ಪ್ರಕಾರ ಬೆಳೆಯುತ್ತಾ ಬರುತ್ತಿದೆ. ಗಜಲ್‌ಗಳ ರಚನೆಗೆ ಅಧ್ಯಯನಶೀಲತೆ ಹಾಗೂ ಶೆಕ್ಷಣಿಕ ಶಿಸ್ತು ಮುಖ್ಯ ಎಂದರು.
‘ಚಿಕ್ಕಕಥೆಗಳ ಚುಕ್ಕಿ ರಂಗೋಲಿ’ ಕೃತಿ ಕುರಿತು ಹೊಯ್ಸಳ ಕನ್ನಡ ಸಂಘದ ಕಾರ್ಯದರ್ಶಿ ರಂಗನಾಥ್ ಮೈಸೂರು ಮಾತನಾಡಿ, ನೀಳ್ಗತೆಗಳನ್ನು ಓದಲು ಯಾರಿಗೂ ಸಮಯವಿಲ್ಲ. ಹೀಗಾಗಿ ಪುಟ್ಟ ಕತೆಗಳನ್ನು ಓದುತ್ತಾರೆ. ಪತ್ರಿಕೆಗಳ ವಿಶೇಷಾಂಕಗಳಲ್ಲೂ ಕೂಡ ನ್ಯಾನೋ ಕತೆಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಮಾತನಾಡಿ, ಉರ್ದುವಿನಲ್ಲಿ ಗಜಲ್‌ಗಳು ಬಹು ಜನಪ್ರಿಯವಾಗಿವೆ. ಇತ್ತೀಚೆಗೆ ಕನ್ನಡದಲ್ಲಿಯೂ ಗಜಲ್‌ಗಳ ರಚನೆ ಹೆಚ್ಚಿದೆ ಎಂದು ಹೇಳಿದರು.
ಕೊಳ್ಳೇಗಾಲ ಸಾಹಿತ್ಯ ಮಿತ್ರಕೂಟದ ಅಧ್ಯಕ್ಷ ಬಾಳಗುಣಸೆ ಮಂಜುನಾಥ್ ಮಾತನಾಡಿ, ಕೃತಿಗಳ ಸಂಖ್ಯೆಗಿಂತ ಗಟ್ಟಿ ಸಾಹಿತ್ಯ ನೀಡುವತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದರು.
ಕೃತಿಗಳನ್ನು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಬಿಡುಗಡೆ ಮಾಡಿದರು. ಸಿರಿಗನ್ನಡ ವೇದಿಕೆ ರಾಜ್ಯ ಉಪಾಧ್ಯಕ್ಷೆ ಸೌಗಂಧಿಕಾ ಜೋಯ್ಸ, ಲೇಖಕಿ ಬಿ.ಕೆ. ಮೀನಾಕ್ಷಿ, ಕೊ.ಸು. ನರಸಿಂಹಮೂರ್ತಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net