ಲಲಿತಾದ್ರಿನಗರ ಉತ್ತರ ಬಡಾವಣೆಯು 825 ನಿವೇಶನಗಳನ್ನು ಒಳಗೊಂಡಿದ್ದು, ಬಡಾವಣೆಯಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಸಿ ವಿದ್ಯುತ್ ವಾಹಕಗಳು, ಪರಿವರ್ತಕ ಕೇಂದ್ರಗಳನ್ನು ಅಳವಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸಲು ವ್ಯವಸ್ಥೆ ಮಾಡಲಾಗಿತ್ತು. ಜು.9 ರಂದು ಬಡಾವಣೆಯ ವಾಟರ್ ಟ್ಯಾಂಕ್ ಹತ್ತಿರದ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಪರಿವರ್ತಕಗಳನ್ನು ಚಾಲನೆಗೊಳಿಸುವ ಸಂಬಂಧ ಸ್ಥಳ ಪರಿಶೀಲಿಸುವ ಸಂದರ್ಭದಲ್ಲಿ ಬಡಾವಣೆಯಲ್ಲಿ ವಿದ್ಯುತ್ ಕಂಬಗಳಿಗೆ ಅಳವಡಿಸಿಸಿದ 3.5 ಕಿ.ಮೀ. ಉದ್ದದ ವಿದ್ಯುತ್ ವಾಹಕಗಳು, 10 ಕ್ರಾಸ್ ಆ್ಯಂಗಲ್, 10 ಟ್ರಾನ್ಸ್‌ಫಾರ್ಮರ್ ಹಾಗೂ ಇನ್ನು ಮುಂತಾದ ವಿದ್ಯುತ್ ಉಪಕರಣಗಳನ್ನು ಕಳವು ಮಾಡಲಾಗಿದೆ. ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.