ಸಂಘದ ಆಡಳಿತ ಮಂಡಳಿಯ ಕಾರ್ಯಕಾರಿ ಸಮಿತಿಗೆ 12 ಜನ ನಿರ್ದೇಶಕರು ಆಯ್ಕೆಗೊಳ್ಳಬೇಕಿದ್ದು, ಸಾಮಾನ್ಯ ಕ್ಷೇತ್ರದ 8 ಹಾಗೂ ಮಹಿಳಾ ಮೀಸಲಿನಡಿ ನಾಲ್ವರು ಆಯ್ಕೆಗೊಳ್ಳಬೇಕಿದೆ. ಈ ಹಿನ್ನೆಲೆಯಲ್ಲಿ ಪಟ್ಟಣದ ಗುರುಭವನದಲ್ಲಿರುವ ಸಂಘದ ಕಚೇರಿಯಲ್ಲಿ ಒಟ್ಟು 17 ಜನ ಅಭ್ಯರ್ಥಿಗಳು ಚುನಾವಣಾಧಿಕಾರಿ ಎಂ.ಎಸ್. ಪ್ರಕಾಶ್‌ಗೆ ನಾಮಪತ್ರ ಸಲ್ಲಿಸಿದರು. ಸಾಮಾನ್ಯ ಕ್ಷೇತ್ರದಿಂದ ಸಿ.ಮಹದೇವಸ್ವಾಮಿ, ಜಿ.ಸಿದ್ಧಮಲ್ಲಪ್ಪ, ಎನ್.ರೇವಣ್ಣ, ಎ.ಗಜೇಂದ್ರ, ಎನ್.ಮಹದೇವ ಸ್ವಾಮಿ, ಸುಬ್ರಹ್ಮಣ್ಯ, ಸಿ.ಸುರೇಶ, ಬಿ.ಕೇಶವ್, ಪುಟ್ಟಸ್ವಾಮಿ, ಟಿ.ಎನ್.ನಾಗೇಂದ್ರ, ಎಂ.ಮಲ್ಲಣ್ಣ, ಸಿ.ಕಿಕ್ಕೇರಿಶೆಟ್ಟಿ, ಮಹಿಳಾ ಮೀಸಲಿನಡಿ ಎಸ್.ನಂದಿನಿ, ಎಂ.ವೈ.ಜೀನತ್, ಅಕ್ಕಮಹಾದೇವಿ, ಕೆ.ಆರ್. ಚಂದ್ರಕಲಾ ಹಾಗೂ ಎಸ್.ಸಲೀನಾ ಉಮೇದುವಾರಿಕೆ ಸಲ್ಲಿಸಿ ಕಣದಲ್ಲಿದ್ದಾರೆ.