ಕೆ.ಆರ್.ನಗರದ ಶಿವಾನುಭವ ಕಲ್ಯಾಣ ಮಂಟಪದಲ್ಲಿ ಕೆ.ಆರ್.ನಗರ ಮತ್ತು ಸಾಲಿಗ್ರಾಮ ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ನಿವೃತ್ತ ನೌಕರರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಸಿ.ಆರ್.ಉಮಾಶಂಕರ್ ಉದ್ಘಾಟಿಸಿದರು. ಅರಕರೆಯ ವಿರಕ್ತ ಮಠದ ಶ್ರೀಸಿದ್ದೇಶ್ವರ ಸ್ವಾಮೀಜಿ, ಜಿಪಂ ಮಾಜಿ ಉಪಾಧ್ಯಕ್ಷ ಅಡಗೂರು ಚನ್ನಬಸಪ್ಪ, ಅ.ವೀ.ಶೈ.ಲಿಂ.ಮ.ಸಭಾದ ಅಧ್ಯಕ್ಷ ಕೆಂಪರಾಜು, ತಾಪಂ ಮಾಜಿ ಅಧ್ಯಕ್ಷ ಹಾಡ್ಯ ಮಹಾದೇವಸ್ವಾಮಿ ಇನ್ನಿತರರು ಇದ್ದರು.
ಕೆ.ಆರ್.ನಗರ:ಶಿಕ್ಷಣವಿಲ್ಲದಿದ್ದರೆ ಸ್ವಾಭಿಮಾನಿಗಳಾಗಿ ಬದಕಲು ಸಾಧ್ಯವಿಲ್ಲ, ಬದಲಾವಣೆ ತರಬೇಕಾದರೆ ಮಕ್ಕಳು ವಿದ್ಯಾವಂತರನ್ನಾಗಿ ಮಾಡಲೇಬೇಕು ಎಂದು ಉದ್ಯಮಿ ಹಾಗೂ ಸಮಾಜ ಸೇವಕರಾದ ಸಿ.ಆರ್.ಉಮಾಶಂಕರ್ ಹೇಳಿದರು.
ಪಟ್ಟಣದ ಬಸವೇಶ್ವರ ಬಡಾವಣೆಯಲ್ಲಿರುವ ಶಿವಾನುಭವ ಕಲ್ಯಾಣ ಮಂಟಪದಲ್ಲಿ ಕೆ.ಆರ್.ನಗರ ಮತ್ತು ಸಾಲಿಗ್ರಾಮ ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಇತ್ತೀಚಿಗೆ ಆಯೋಜಿಸಿದ್ದ ನಿವೃತ್ತ ನೌಕರರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಜ್ಞಾನದ ಬೆಳಕು, ನಡೆದಾಡುವ ದೇವರು ಪರಮಪೂಜ್ಯ ಡಾ.ಶಿವಕುಮಾರಸ್ವಾಮಿಗಳ ಜೀವನದ ಆದರ್ಶ ಮತ್ತು ತತ್ವಗಳನ್ನು ನಮ್ಮ ನೌಕರರ ವರ್ಗದವರು ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಅರಕೆರೆಯ ವಿರಕ್ತಮಠದ ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಮನೆಯ ಹಿರಿಯರು ಸಂಸ್ಕಾರವಂತರಾಗಿದ್ದರೇ ಮಕ್ಕಳು ಕೂಡ ಅದೇ ದಾರಿಯಲ್ಲಿ ಸಾಗುತ್ತಾರೆ. ತಾವು ಗಳಿಸಿದ ಹಣದಲ್ಲಿ ಸ್ವಲ್ಪ ಭಾಗವನ್ನು ಶಿಕ್ಷಣ, ಆರೋಗ್ಯ ಸಮಾಜದ ನೊಂದವರಿಗೆ ದಾನ ಮಾಡಿದರೆ ಮುಕ್ತಿ ಪಡೆಯಬಹುದು ಎಂದು ತಿಳಿಸಿದರು.
ತಾಲೂಕು ಶರಣು ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಪಿ.ರಮೇಶ್ ಕುಮಾರ್ ಮಾತನಾಡಿ, ಮಕ್ಕಳು ಶಿಕ್ಷಣ ಪಡೆದರೆ ಸಮುದಾಯ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ಬೆಳೆಯಲಿದೆ. ವಿದ್ಯೆ ಯಾರ ಸ್ವತ್ತೂ ಅಲ್ಲ ಪಟ್ಟಭದ್ರ ಹಿತಾಸಕ್ತಿಯನ್ನು ಬಿಟ್ಟು ಬದಲಾವಣೆ ತರಬೇಕಾದರೆ ಎಲ್ಲರೂ ಶಿಕ್ಷಣ ಪಡೆಯಬೇಕು ಎಂದರು.
ಜಿಪಂ ಮಾಜಿ ಉಪಾಧ್ಯಕ್ಷ ಅಡಗೂರು ಚನ್ನಬಸಪ್ಪ, ಅ.ವೀ.ಶೈ.ಲಿಂ.ಮ.ಸಭಾದ ಅಧ್ಯಕ್ಷ ಕೆಂಪರಾಜು, ತಾಪಂ ಮಾಜಿ ಅಧ್ಯಕ್ಷ ಹಾಡ್ಯ ಮಹಾದೇವಸ್ವಾಮಿ ಮಾತನಾಡಿದರು.
ಮಹದೇವಪ್ರಸಾದ್, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್.ಮಹೆಶ್, ಸಂಘದ ಅಧ್ಯಕ್ಷ ಕೊಡಿಯಾಲ ಚಂದ್ರಶೇಖರ್, ಗೌರವ ಸಲಹೆಗಾರ ಪಶುವೈದ್ಯ ಡಾ.ಹರೀಶ್, ಪ್ರಧಾನ ಕಾರ್ಯದರ್ಶಿ ಗಂಗಾಧರ. ಅರುಣ್.ಬಿ.ನರಗುಂದ್, ಮುಖಂಡರಾದ ಕೆ.ಎಸ್.ಮಲ್ಲಪ್ಪ, ಕೆಡಗನಟರಾಜು,
ಗಾಯನಹಳ್ಳಿಕುಮಾರಸ್ವಾಮಿ, ಜಗದೀಶ್, ಕೆ.ವಿ.ಮಹೇಶ್, ಗೌರವ ಅಧ್ಯಕ್ಷ ರಾಜಶೇಖರ್ ಹಾಗೂ ಪದಾಧಿಕಾರಿಗಳಾದ ಪುಟ್ಟರಾಜು, ಎಸ್.ಹರೀಶ್, ಸೋಮಶೇಖರ್, ಶಿವಕುಮಾರ್,ಅನಿತಾ, ಮುತ್ತಕ್ಕ, ಪ್ರದೀಪ್, ರಾಜೇಶ್ ಮತ್ತು ಸಮಾಜ ಬಂಧುಗಳು ಇನ್ನಿತರರು ಇದ್ದರು.