ದುರಾಸೆ ನಿಯಂತ್ರದಿಂದ ಪರಿಸರ ಸಮತೋಲನ

 ಹುಣಸೂರು ತಾಲೂಕು ಸಿಂಗರಮಾರನಹಳ್ಳಿ ಗ್ರಾಮದ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಸಂಭ್ರಮದಿಂದ ಭಾಗವಹಿಸಿದ್ದರು. ಯೋಜನಾಕಾರಿ ಶುಭದೇವಿ, ಮುಖ್ಯಶಿಕ್ಷಕ ಸುಂದರ್, ಸುರೇಶ್, ಎಚ್.ಎನ್.ಮಹೇಶ್, ಕೆಂಡಗಣ್ಣೇಗೌಡ, ಶಶಿ ಇತರರಿದ್ದಾರೆ.
ಹುಣಸೂರು ತಾಲೂಕು ಸಿಂಗರಮಾರನಹಳ್ಳಿ ಗ್ರಾಮದ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಸಂಭ್ರಮದಿಂದ ಭಾಗವಹಿಸಿದ್ದರು. ಯೋಜನಾಕಾರಿ ಶುಭದೇವಿ, ಮುಖ್ಯಶಿಕ್ಷಕ ಸುಂದರ್, ಸುರೇಶ್, ಎಚ್.ಎನ್.ಮಹೇಶ್, ಕೆಂಡಗಣ್ಣೇಗೌಡ, ಶಶಿ ಇತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಯೋಜನಾಕಾರಿ ಶುಭದೇವಿ ಅಭಿಪ್ರಾಯ
ಹುಣಸೂರು: ಮನುಷ್ಯನ ದುರಾಸೆ ನಿಯಂತ್ರಣದಿಂದ ಮಾತ್ರ ಪರಿಸರ ಸಮತೋಲನ ಸಾಧ್ಯವೆಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಕಾರಿ ಶುಭದೇವಿ ಅಭಿಪ್ರಾಯಪಟ್ಟರು.
ತಾಲೂಕಿನ ಸಿಂಗಾರಮಾರನಹಳ್ಳಿ ಪ್ರೌಢಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಶಾಲಾಸಮಿತಿ ಸಹಕಾರದೊಂದಿಗೆ ಆಯೋಜಿಸಿದ್ದ ವಿಶ್ವ ಪರಿಸರ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪರಮಪೂಜ್ಯರು ಹಾಗೂ ಮಾತೃಶ್ರೀ ಹೇಮಾವತಿ ಅಮ್ಮನವರು ದೂರದೃಷ್ಟಿತ್ವದ ಕಾರ್ಯಕ್ರಮಗಳಲ್ಲಿ ಪರಿಸರ ಸಂರಕ್ಷಣ ಕಾರ್ಯಕ್ರಮಗಳು ಪ್ರಮುಖವಾಗಿದ್ದು, ನಮ್ಮೂರು ನಮ್ಮ ಕೆರೆ, ಕೆರೆ ಅಂಗಳದಲ್ಲಿ ಗಿಡ ನಾಟಿ ಮುಂತಾದವುಗಳನ್ನು ಜಾರಿಗೊಳಿಸಿದ್ದಾರೆ. ಇತ್ತೀಚಿನ ದಿನಮಾನಗಳಲ್ಲಿ ನೀರು ಅತ್ಯಮೂಲ್ಯ ದ್ರವರೂಪದ ಬಂಗಾರವಾಗಿದೆ. ಅದನ್ನು ಸರಿಯಾಗಿ ಸಂರಕ್ಷಣೆ ಮಾಡಿ ಮುಂದಿನ ಪೀಳಿಗೆಗೆ ವರ್ಗಾಯಿಸಬೇಕು. ನಾವೆಲ್ಲರೂ ನಮ್ಮ ಹುಟ್ಟು ಹಬ್ಬದ ದಿನದಂದು ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ನಮ್ಮ ಜಮೀನುಗಳಲ್ಲಿ, ತಾಯಿಗೊಂದು ಗಿಡ ನೆಡಿ ಕಾರ್ಯಕ್ರಮದಂತೆ ತಲಾ ಒಂದೊಂದು ಗಿಡಗಳನ್ನು ನೆಟ್ಟು ಪೋಷಿಸಬೇಕು. ಕಾಡು ಇದ್ದರೆ ನಾಡು, ಇಲ್ಲದಿದ್ದರೆ ಬರನಾಡಾಗಾಲಿದೆ. ಮಹಾತ್ಮ ಗಾಂೀಜಿ ಹೇಳಿದಂತೆ ಪರಿಸರ ಮಾನವನ ಆಸೆಗಳನ್ನು ಪೂರೈಸುತ್ತದೆ ಹೊರತು ದುರಾಸೆಗಳನ್ನಲ್ಲ ಎಂಬ ಮಾತನ್ನು ಅರಿಯಬೇಕೆಂದರು.
ಮುಖ್ಯ ಶಿಕ್ಷಕ ಸುಂದರ್ ಮಾತನಾಡಿ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ನಾವು ಋತುಮಾನಗಳಿಗೆ ತಕ್ಕಂತೆ ಪ್ರಕೃತಿ ನೀಡುವ ಹಣ್ಣು ಹಂಪಲುಗಳನ್ನು ಸೇವಿಸುವ ಮೂಲಕ ಆರೋಗ್ಯದಾಯಕ, ರೋಗಮುಕ್ತ ಜೀವನವನ್ನು ನಡೆಸಬೇಕು. ಪ್ರಕೃತಿಯನ್ನು ನಾವು ರಕ್ಷಣೆ ಮಾಡಿದರೆ, ಪ್ರಕೃತಿ ನಮ್ಮನ್ನು ಸಂರಕ್ಷಣೆ ಮಾಡುತ್ತದೆ ಎಂದರು.
ಯೋಜನೆ ವತಿಯಿಂದ ಶಾಲಾ ಮಕ್ಕಳಿಗೆ ಒಂದೊಂದು ಹಣ್ಣಿನ ಗಿಡಗಳನ್ನು ಉಚಿತವಾಗಿ ನೀಡಿ ಮನೆಹಿತ್ತಲಲ್ಲಿ ಮತ್ತು ಶಾಲಾ ಆವರಣದಲ್ಲಿ ನೆಟ್ಟು ಪೋಷಿಸಲು ಕೋರಲಾಯಿತು.
ವಲಯ ಮೇಲ್ವಿಚಾರಕ ಸುರೇಶ್ , ಕೃಷಿ ಮೇಲ್ವಿಚಾರಕ ಎಚ್.ಎನ್.ಮಹೇಶ್, ಸೇವಾ ಪ್ರತಿನಿ ವಿನುತಾ, , ಸಹ ಶಿಕ್ಷಕರು, ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಈಶ್ವರೆಗೌಡ, ಎಸ್‌ಡಿಎಂಸಿ ಸದಸ್ಯರಾದ ಕೆಂಡಗಣ್ಣೇಗೌಡ, ಶಶಿ, ಶಾಲಾ ಮಕ್ಕಳು ಹಾಗೂ ಪೋಷಕರು ಹಾಜರಿದ್ದರು,
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net