ಪ್ರಕೃತಿ 365 ದಿನಕ್ಕೂ ಬೇಕಾಗುವಷ್ಟು ಸೊಪ್ಪು ನೀಡಿದೆ. ಅದು ಕೂಡ ಆಯಾಯ ಕಾಲಕ್ಕೆ ತಕ್ಕಂತೆ ಸೊಪ್ಪು ನೀಡಿದೆ. ಬೇಸಿಗೆ, ಚಳಿ ಹಾಗೂ ಮಳೆಗಾಲದ ಅಗತ್ಯಗಳಿಗೆ ತಕ್ಕಂತೆ ಸೊಪ್ಪು ನೀಡಿದೆ. ಜತೆಗೆ ಪ್ರದೇಶವಾರು ವಿವಿಧ ಬಗೆಯ ಸೊಪ್ಪುಗಳನ್ನು ಪ್ರಕೃತಿ ಕರುಣಿಸಿದೆ. ಮಲೆನಾಡಿನಲ್ಲಿ, ಬಯಲುಸೀಮೆಯಲ್ಲಿ, ಕರಾವಳಿಯಲ್ಲಿ ವಿವಿಧ ಬಗೆಯ ಸೊಪ್ಪು ಸಿಗುತ್ತದೆ. ಎಲ್ಲವನ್ನು ನೋಡಿದರೆ ಬಯಲುಸೀಮೆಯಲ್ಲಿ ಸಾಕಷ್ಟು ಆಹಾರಕ್ಕೆ ಯೋಗ್ಯವಾದ ಸೊಪ್ಪು ಹೆಚ್ಚಾಗಿದೆ. ಬಯಲುಸೀಮೆಯಲ್ಲಿ ಹೆಚ್ಚು ಮಳೆ ಬರುವುದಿಲ್ಲ. ಮಳೆ ಬಾರದಿದ್ದರೂ ಹೆಚ್ಚು ಬೆಳೆ ಬೆಳೆಯುವ ಗುಣ ಈ ಭಾಗದ ಮಣ್ಣಿಗೆ ಇದೆ ಎಂದರು.