ಆಧುನಿಕ ತಂತ್ರಜ್ಞಾನ ಅಳಡಿಸಿಕೊಂಡು ಹೈನುಗಾರಿಕೆಯಲ್ಲಿ ಆದಾಯ ಗಳಿಸಿ

ತಿ.ನರಸೀಪುರ ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಹಾಲು ಉತ್ಪಾದಕರ ಸಹಕಾರ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಗುಣಮಟ್ಟದ ಹಾಲನ್ನು ಅಧಿಕ ಪ್ರಮಾಣದಲ್ಲಿ ಸರಬರಾಜು ಮಾಡಿದ ರೈತರನ್ನು ಸನ್ಮಾನಿಸಲಾಯಿತು. ಆರ್.ಚಲುವರಾಜು, ಸಿ.ಓಂಪ್ರಕಾಶ್, ಬಿ.ಎಂ.ಬಸವಣ್ಣ, ಸಿ ಮರಿಸ್ವಾಮಿ, ಆರ್.ಪ್ರಮೋದ್, ಕೆ.ಎನ್.ಶ್ರುತಿ, ಮಾದಪ್ಪ ಇತರರು ಇದ್ದರು.
ತಿ.ನರಸೀಪುರ ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಹಾಲು ಉತ್ಪಾದಕರ ಸಹಕಾರ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಗುಣಮಟ್ಟದ ಹಾಲನ್ನು ಅಧಿಕ ಪ್ರಮಾಣದಲ್ಲಿ ಸರಬರಾಜು ಮಾಡಿದ ರೈತರನ್ನು ಸನ್ಮಾನಿಸಲಾಯಿತು. ಆರ್.ಚಲುವರಾಜು, ಸಿ.ಓಂಪ್ರಕಾಶ್, ಬಿ.ಎಂ.ಬಸವಣ್ಣ, ಸಿ ಮರಿಸ್ವಾಮಿ, ಆರ್.ಪ್ರಮೋದ್, ಕೆ.ಎನ್.ಶ್ರುತಿ, ಮಾದಪ್ಪ ಇತರರು ಇದ್ದರು.
Published on
ಮುಲ್ ಮಾಜಿ ಅಧ್ಯಕ್ಷ ಆರ್.ಚೆಲುವರಾಜು ಕರೆ
ತಿ.ನರಸೀಪುರ: ಹೈನುಗಾರಿಕೆಯಲ್ಲಿ ಆಧುನಿಕ ತಂತ್ರಜ್ಞಾನ ವಿಧಾನಗಳನ್ನು ಅಳವಡಿಸಿಕೊಂಡು ಉದ್ಯಮದಲ್ಲಿ ಆದಾಯ ಹೆಚ್ಚಿಸಿಕೊಳ್ಳುವಂತೆ ಮೈಮುಲ್ ಮಾಜಿ ಅಧ್ಯಕ್ಷ ಆರ್.ಚೆಲುವರಾಜು ಹಾಲು ಉತ್ಪಾದಕ ರೈತರಿಗೆ ಕರೆ ನೀಡಿದರು.
ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಹಾಲು ಉತ್ಪಾದಕರ ಸಹಕಾರ ಸಂಘದ 2025-26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರೈತರು ಸಾಂಪ್ರದಾಯಿಕದ ಜತೆಯಲ್ಲಿ ಆಧುನಿಕ ತಂತ್ರಜ್ಞಾನದ ಜ್ಞಾನ ಪಡೆಯಬೇಕು. ಇದನ್ನು ಬಳಸಿ ಹಾಲಿನ ಉತ್ಪಾದನಾ ಪ್ರಮಾಣ ಹೆಚ್ಚಿಸಿಕೊಂಡಾಗ ಹೆಚ್ಚು ಆದಾಯ ಕಾಣಬಹುದು.
ಮೈಮುಲ್‌ನಿಂದ ದೊರೆಯುವ ಎಲ್ಲ ಸವಲತ್ತುಗಳನ್ನು ಪಡೆಯುವಂತೆ ತಿಳಿಸಿದ ಅವರು, ಉದ್ಯೋಗಕ್ಕಾಗಿ ಗುಳೆ ಹೋಗುವುದನ್ನು ಹೈನುಗಾರಿಕೆಯಿಂದ ತಪ್ಪಿಸಬಹುದು ಎಂದು ಅಭಿಪ್ರಾಯಪಟ್ಟರು.
ಇತರರ ಮೇಲೆ ಉದ್ಯೋಗಕ್ಕೆ ಅವಲಂಬಿತರಾಗದೆ ತಾವೇ ಸ್ವಯಂ ಉದ್ಯೋಗ ಮಾಡುವ ಮೂಲಕ ಇತರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಹೈನುಗಾರಿಕೆಯಲ್ಲಿ ಯಶಸ್ವಿಯಾಗಿದ್ದಾರೆ. ಉದ್ಯೋಗಕ್ಕಾಗಿ ನಗರ ಪ್ರದೇಶಗಳತ್ತ ಧಾವಿಸುತ್ತಿದ್ದ ಗ್ರಾಮೀಣ ಪ್ರದೇಶದ ವಿದ್ಯಾವಂತ ಯುವಕರು ಹೈನುಗಾರಿಕೆಯತ್ತ ಧಾವಿಸುತ್ತಿರುವುದು ಗ್ರಾಮೀಣ ಪ್ರದೇಶ ಸುಧಾರಣೆಯತ್ತ ಸಾಗುತ್ತಿರುವುದಕ್ಕೆ ಸಾಕ್ಷಿ ಎಂದರು.
ಬೆನಕನಹಳ್ಳಿ ಹಾಲು ಒಕ್ಕೂಟದ ಮುಖ್ಯ ಕಾರ್ಯನಿರ್ವಾಹಕ ಜಿ.ಮಾದಪ್ಪ ಮಾತನಾಡಿ, ತಾಲೂಕಿಗೆ ಉತ್ತಮ ಸಹಕಾರ ಸಂಘ ಎಂಬ ಪ್ರಶಸ್ತಿ ಲಭಿಸಿದೆ. ಹಾಲು ಉತ್ಪಾದಕರ ಕಾರ್ಯನಿರ್ವಹಣೆಯಿಂದ ಪ್ರತಿ ವರ್ಷ ಲಾಭ ಬರುತ್ತಿದೆ ಎಂದು ಹೇಳಿದರು.
ಮೈಮುಲ್‌ನ ಮಾಜಿ ಅಧ್ಯಕ್ಷ ಸಿ.ಓಂ.ಪ್ರಕಾಶ್ ಮಾತನಾಡಿದರು. ಸಂಘದ ಅಧ್ಯಕ್ಷ ಬಿ.ಎಂ.ಬಸವಣ್ಣ, ಉಪಾಧ್ಯಕ್ಷ ಸಿ.ಮರಿಸ್ವಾಮಿ, ಜಿಲ್ಲಾ ಒಕ್ಕೂಟದ ಸಹಾಯಕ ವ್ಯವಸ್ಥಾಪಕ ಆರ್.ಪ್ರಮೋದ್, ಮಾರ್ಗ ವಿಸ್ತರಣಾಧಿಕಾರಿ ಕೆ.ಎನ್.ಶ್ರುತಿ, ನಿರ್ದೇಶಕರಾದ ನಾಗೇಂದ್ರ, ಎಂ.ಗಿರೀಶ್, ಬಿ.ಎಂ.ಮಹೇಶ್, ಬಿ.ಎಂ.ಶಿವಕುಮಾರ್ ಸ್ವಾಮಿ, ಮಹದೇವಸ್ವಾಮಿ, ರಾಜ ಬುದ್ಧಿ, ಬಿ ಎನ್.ಪ್ರಕಾಶ್, ಶಿವಮ್ಮ ಗವಿಸಿದ್ದಯ್ಯ, ಸಿ.ಎಂ.ಇಂದ್ರಮ್ಮ, ಶಿವಮ್ಮ, ಹಾಲು ಪರೀಕ್ಷಕ ಬಿ.ಪಿ.ಮಹೇಶ್, ಪೂವಮ್ಮ, ಬಿ ಎನ್.ಮಹೇಶ್, ಮುಖಂಡರಾದ ಬಿ.ಎಂ. ವಿಜಯ್‌ಕುಮಾರ್, ಬಸಪ್ಪ, ಗೌಡ್ರು ರಾಜಶೇಖರ್, ಪ್ರಭುಸ್ವಾಮಿ, ಹಾಲು ಉತ್ಪಾದಕ ರೈತರು ಹಾಗೂ ಗ್ರಾಮಸ್ಥರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net