ಪೈಪ್ ಒಡೆದು ಕುಡಿಯುವ ನೀರು ಪೋಲು

ಒಂದನೇ ಕ್ಯಾಂಪ್ ಹೋಗುವ ಮುಖ್ಯರಸ್ತೆ ಸರ್ಕಲ್ಲಿನ ಮಧ್ಯೆ ರಸ್ತೆಯಲ್ಲೇ ಪೈಪ್ ಲೈನ್ ಹೊಡೆದು ಪೋಲಾಗುತ್ತಿದೆ ಕುಡಿಯುವ ನೀರು.
ಒಂದನೇ ಕ್ಯಾಂಪ್ ಹೋಗುವ ಮುಖ್ಯರಸ್ತೆ ಸರ್ಕಲ್ಲಿನ ಮಧ್ಯೆ ರಸ್ತೆಯಲ್ಲೇ ಪೈಪ್ ಲೈನ್ ಹೊಡೆದು ಪೋಲಾಗುತ್ತಿದೆ ಕುಡಿಯುವ ನೀರು.
Published on
ಬೈಲುಕುಪ್ಪೆ: ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಂದನೇ ಕ್ಯಾಂಪ್ ಹೋಗುವ ಮುಖ್ಯ ರಸ್ತೆ ವೃತ್ತದ ಬಳಿಕ ಪೈಪ್ ಒಡೆದು ಕುಡಿಯುವ ನೀರು ಪೋಲಾಗುತ್ತಿದೆ.
ಹಲವಾರು ದಿನಗಳಿಂದ ಪೋಲಾಗುತ್ತಿರುವ ನೀರು, ಬಿಎಂ ರಸ್ತೆವರೆಗೂ ಹರಿಯುತ್ತಿದ್ದು, ಇಲ್ಲಿ ಓಡಾಡುವ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಬೈಲುಕುಪ್ಪೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಕೂಡಲೇ ಪರಿಶೀಲಿಸಿ, ನೀರು ಪೋಲಾಗುವುದನ್ನು ತಡೆಯಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪೈಪ್‌ಲೈನ್ ಒಡೆದು ರಸ್ತೆಗೆ ನೀರು ಹರಿಯುತ್ತಿರುವ ಬಗ್ಗೆ ಗ್ರಾಮ ಪಂಚಾಯಿತಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಒಡೆದ ಪೈಪನ್ನು ದುರಸ್ತಿ ಮಾಡಬೇಕೆಂದು ಒಂದನೇ ಕ್ಯಾಂಪ್ ನಿವಾಸಿ, ನಿವೃತ್ತಿ ಶಿಕ್ಷಕ ಬಸವರಾಜ್ ಒತಾಯಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬೈಲುಕುಪ್ಪೆ ಪಿಡಿಒ ಬೋರೇಗೌಡ, ಪೈಪ್‌ಲೈನ್ ಒಡೆದು ನೀರು ಪೋಲಾಗುತ್ತಿರುವುದು ನನ್ನ ಗಮನಕ್ಕೆ ಬಂದಿಲ್ಲ. ಕೂಡಲೇ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net