ಅಧ್ಯಕ್ಷತೆ ವಹಿಸಿದ್ದ ಜೆಎಸ್‌ಎಸ್ ಸಂಸ್ಥೆಗಳ ಅಧ್ಯಕ್ಷೆ ಹಾಗೂ ಸ್ನೇಹ ಸ್ತ್ರೀ ಸಮಾಜ ಅಧ್ಯಕ್ಷೆ ಸುಧಾ ಮೃತ್ಯುಂಜಯಪ್ಪ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ರಂಗಭೂಮಿ ಪೂರಕವಾಗಿದ್ದು, ಬೋಧನೆ ಮಾಡುವ ಜತೆಗೆ ಅಭಿನಯ ಮಾಡುವ ಸಾಮರ್ಥ್ಯ ಲಭ್ಯವಾಗಲಿದೆ. ಕಲೆಗಳನ್ನು ಅಳವಡಿಸಿಕೊಂಡರೆ ಜೀವನದಲ್ಲಿ ಪರಿಪೂರ್ಣತೆ ತುಂಬಿ, ವ್ಯಕ್ತಿತ್ವವನ್ನು ರೂಪಿಸುತ್ತವೆ. ಒಮ್ಮೆ ರಂಗಭೂಮಿಗೆ ಕಾಲಿಟ್ಟರೆ ಅದು ಆತ್ಮಸ್ಥೈರ್ಯವನ್ನು ತುಂಬಿ, ಕೌಶಲ ಕಲಿಸುತ್ತದೆ. ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ಪ್ರತಿಭೆ ಇದ್ದೇ ಇರುತ್ತದೆ. ಅದನ್ನು ಹೊರತೆಗೆಯಲು ಇಂತಹ ವೇದಿಕೆಗಳು ಅತ್ಯಗತ್ಯ ಎಂದರು.