'ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ರಂಗ ಶಿಬಿರಗಳು ಅಗತ್ಯ'

ಆಯಾಮ ಅಕಾಡೆಮಿ ಆಫ್ ಫೈನ್ ಆರ್ಟ್ಸ್‌ನಿಂದ ಆಯೋಜಿಸಿದ್ದ ಬೇಸಿಗೆ ರಂಗ ಶಿಬಿರದ ಸಮಾರೋಪದಲ್ಲಿ ಲಕ್ಷ್ಮಮ್ಮ , ಸಾ.ವೆ.ರ. ಸ್ವಾಮಿ, ಡಾ.ಶಾಂಭವಿಸ್ವಾಮಿ,ದೀಪಕ್ ಮೈಸೂರು, ಶೀಲಾ ದೀಪಕ್ ಇತರರು ಇದ್ದರು.
ಆಯಾಮ ಅಕಾಡೆಮಿ ಆಫ್ ಫೈನ್ ಆರ್ಟ್ಸ್‌ನಿಂದ ಆಯೋಜಿಸಿದ್ದ ಬೇಸಿಗೆ ರಂಗ ಶಿಬಿರದ ಸಮಾರೋಪದಲ್ಲಿ ಲಕ್ಷ್ಮಮ್ಮ , ಸಾ.ವೆ.ರ. ಸ್ವಾಮಿ, ಡಾ.ಶಾಂಭವಿಸ್ವಾಮಿ,ದೀಪಕ್ ಮೈಸೂರು, ಶೀಲಾ ದೀಪಕ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ರಂಗ ಶಿಬಿರಗಳು ಅಗತ್ಯ
  • ಮಕ್ಕಳಲ್ಲಿ ಆತ್ಮವಿಶ್ವಾಸ, ಕಲ್ಪನಾ ಶಕ್ತಿ ಮತ್ತು ಸಾಮಾಜಿಕ ಮನೋಭಾವ ಬೆಳೆಯುತ್ತದೆ
ಮೈಸೂರು:ಆಯಾಮ ಅಕಾಡೆಮಿ ಆಫ್ ಫೈನ್ ಆರ್ಟ್ಸ್‌ನಿಂದ ಒಂದು ತಿಂಗಳ ಕಾಲ ಆಯೋಜಿಸಿದ್ದ ಮಕ್ಕಳ ರಂಗ ಬೇಸಿಗೆ ಶಿಬಿರ ‘ಸಂಕ್ಷಿಪ್ತ-2026’ ಸಮಾರೋಪ ಸಮಾರಂಭ ಆಯೋಜಿಸಲಾಗಿತ್ತು.
ರಂಗಕರ್ಮಿ ದೀಪಕ್ ಮೈಸೂರು ಮಾತನಾಡಿ, ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ರಂಗ ಶಿಬಿರಗಳು ಅಗತ್ಯ. ನಾಟಕ, ಸಂಗೀತ, ನೃತ್ಯ, ಕ್ರಾಫ್ಟ್ ವರ್ಕ್ ಸೇರಿದಂತೆ ವಿವಿಧ ಕಲಾ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಆತ್ಮವಿಶ್ವಾಸ, ಕಲ್ಪನಾ ಶಕ್ತಿ ಮತ್ತು ಸಾಮಾಜಿಕ ಮನೋಭಾವ ಬೆಳೆಯುತ್ತದೆ ಎಂದು ತಿಳಿಸಿದರು.
ಇಂದಿನ ಪಾಲಕರು ಕೇವಲ ಅಂಕಗಳ ಹಿಂದೆ ಓಡದೆ ಮಕ್ಕಳ ವ್ಯಕ್ತಿತ್ವ ವಿಕಾಸಕ್ಕೆ ಪೂರಕವಾಗುವ ಇಂತಹ ಶಿಬಿರಗಳಲ್ಲಿ ಭಾಗವಹಿಸಲು ಉತ್ತೇಜಿಸಬೇಕು. ಅಲ್ಲದೆ ಮಕ್ಕಳನ್ನು ಮೊಬೈಲ್, ಟಿವಿಗೆ ಅಂಟಿಕೊಳ್ಳದಂತೆ ಎಚ್ಚರವಹಿಸಿ ಗ್ರಂಥಾಲಯಗಳು, ಉದ್ಯಾನ, ಸಾಂಸ್ಕೃತಿಕ ಚಟುವಟಿಕೆಗಳತ್ತ ಕರೆದೊಯ್ಯಬೇಕು ಎಂದು ಕೋರಿದರು.
ಅಧ್ಯಕ್ಷತೆ ವಹಿಸಿದ್ದ ಆಯಾಮ ಟ್ರಸ್ಟ್‌ನ ಟ್ರಸ್ಟಿ, ನಿವೃತ್ತ ಮುಖ್ಯಶಿಕ್ಷಕಿ ಲಕ್ಷ್ಮಮ್ಮ ಮಾತನಾಡಿ, ಜೀವನದಲ್ಲಿ ಶಿಸ್ತು, ಸೌಜನ್ಯ ಮತ್ತು ಕಲೆಯ ಮಹತ್ವದ್ದಾಗಿದೆ. ನೈತಿಕ ಮೌಲ್ಯಗಳನ್ನು ಹೆಚ್ಚಿಸುವ ನೀತಿಕತೆಗಳು ಅಗತ್ಯ ಎಂದು ಅಭಿಪ್ರಾಯಪಟ್ಟರು.
ಆಯಾಮ ಅಕಾಡೆಮಿ ಕಾರ್ಯದರ್ಶಿ ಡಾ.ಶಾಂಭವಿಸ್ವಾಮಿ, ಆಧ್ಯಕ್ಷ ಸಾ.ವೆ.ರ.ಸ್ವಾಮಿ, ಚಲನಚಿತ್ರ ಕಲಾವಿದ ಬಲರಾಜವಾಡಿ, ನಿರಂತರ ಸಂಸ್ಥೆಯ ನಿರ್ದೇಶಕ ಶ್ರೀನಿವಾಸ್ ಪಾಲಹಳ್ಳಿ ಇತರರಿದ್ದರು.
ದೀಪಕ್ ಮೈಸೂರು, ರಂಗ ಕಲಾವಿದೆ ಶೀಲಾ ದೀಪಕ್ ಅವರನ್ನು ಸನ್ಮಾನಿಸಲಾಯಿತು. ಮಕ್ಕಳಿಂದ ಮನರಂಜನೀಯ ಸಂಗೀತ ಹಾಗೂ ನೃತ್ಯ ಪ್ರದರ್ಶನಗಳು ಜರುಗಿದವು. ಅಲ್ಲದೆ ದೀಪಕ್ ಮೈಸೂರು ಅವರ ನಿರ್ದೇಶನದಲ್ಲಿ ನಾಟಕಕಾರ ಸಫ್ದರ್ ಹಶ್ಮಿ ರಚಿಸಿದ ಹಾಗೂ ನಟರಾಜ್ ಹೊನ್ನವಳ್ಳಿ ಅವರು ಕನ್ನಡಕ್ಕೆ ಅನುವಾದಿಸಿದ ‘ಕೆಂಪು ಹೂವು’ ನಾಟಕದ ಪ್ರದರ್ಶನ ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net