ಸಂಸ್ಕಾರ ಭಾರತಿ ಕರ್ನಾಟಕ ದಕ್ಷಿಣ ಪ್ರಾಂತ ಮೈಸೂರು ಜಿಲ್ಲಾ ಸಮಿತಿಯಿಂದ ಗುರುಪೂರ್ಣಿಮೆ ಅಂಗವಾಗಿ ಆಯೋಜಿಸಿದ್ದ ಪ್ರೊ.ಡಾ.ಕೆ. ರಾಮಮೂರ್ತಿರಾವ್ ಅವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಡಾ.ಗುಬ್ಬಿಗೂಡು ರಮೇಶ್, ಕೆ.ಎಸ್.ಗುರುರಾಜ, ರಾಮಚಂದ್ರ, ಬಾಲಕೃಷ್ಣ, ಮುಕುಂದ ಪೇಶ್ವೆ, ವೀರಣ್ಣ ಅರ್ಕಸಾಲಿ, ಶಶಿಕಲಾ ಇತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಭಾರತೀಯ ಸಂಸ್ಕೃತಿಯಲ್ಲಿ ಗುರುಶಿಷ್ಯ ಪರಂಪರೆ ಮಹತ್ವದ್ದಾಗಿದೆ
ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಸಂಸ್ಕಾರ ಭಾರತಿಯಂತಹ ಸಂಸ್ಥೆಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ
ಮೈಸೂರು:
ಸಂಸ್ಕಾರ ಭಾರತಿ ಕರ್ನಾಟಕ ದಕ್ಷಿಣ ಪ್ರಾಂತ ಮೈಸೂರು ಜಿಲ್ಲಾ ಸಮಿತಿಯಿಂದ ಗುರುಪೂರ್ಣಿಮೆ ಅಂಗವಾಗಿ ನಾಟ್ಯಾಚಾರ್ಯ ಡಾ.ಕೆ.ರಾಮಮೂರ್ತಿರಾವ್ ಅವರಿಗೆ ಗುರುವಂದನೆ ಸಲ್ಲಿಸಲಾಯಿತು.
ಶ್ರೀ ನಟರಾಜ ಪೂಜೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಡಾ.ರಾಮಮೂರ್ತಿರಾವ್ ಅವರ ಶಿಷ್ಯರಿಂದ ಮನಮೋಹಕ ನೃತ್ಯ ಪ್ರಸ್ತುತಪಡಿಸಲಾಯಿತು. ಅಲ್ಲದೆ ಭರತನಾಟ್ಯ ಕ್ಷೇತ್ರಕ್ಕೆ ಸಲ್ಲಿಸಿದ ರಾಮಮೂರ್ತಿರಾವ್ ಅವರ ಅಪೂರ್ವ ಸೇವೆ, ಗುರುಶಿಷ್ಯ ಪರಂಪರೆಯ ಸಂರಕ್ಷಣೆ ಹಾಗೂ ಭಾರತೀಯ ಕಲೆ, ಸಂಸ್ಕೃತಿ ಮತ್ತು ಸಂಸ್ಕಾರಗಳ ಪ್ರಸಾರದಲ್ಲಿ ನೀಡಿದ ಅನನ್ಯ ಕೊಡುಗೆಯನ್ನು ಗೌರವಿಸಿ ಗುರು ವಂದನಾ ಸನ್ಮಾನ ಪತ್ರ ಸಮರ್ಪಿಸಲಾಯಿತು.
ಸಂಸ್ಕಾರ ಭಾರತಿ ಕರ್ನಾಟಕ ದಕ್ಷಿಣ ಪ್ರಾಂತದ ಕಾರ್ಯಾಧ್ಯಕ್ಷ ಡಾ.ಗುಬ್ಬಿಗೂಡು ರಮೇಶ್, ಮೈಸೂರು ಜಿಲ್ಲಾ ಅಧ್ಯಕ್ಷ ಕೆ.ಎಸ್. ಗುರುರಾಜ, ರಾಜ್ಯ ಸಂಘಟನಾ ಕಾರ್ಯದರ್ಶಿ ರಾಮಚಂದ್ರ ಅವರು ಪ್ರೊ.ಡಾ.ಕೆ.ರಾಮಮೂರ್ತಿರಾವ್ ಅವರ ಕಲಾಸೇವೆ, ಗುರುಭಕ್ತಿ ಹಾಗೂ ಭಾರತೀಯ ಸಂಸ್ಕೃತಿಯ ಉಳಿವಿಗೆ ನೀಡಿದ ಮಹತ್ವದ ಕೊಡುಗೆ ಬಗ್ಗೆ ತಿಳಿಸಿಕೊಟ್ಟು, ಕಲೆ ಮತ್ತು ಸಂಸ್ಕೃತಿಯ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ಸಂಸ್ಕಾರ ಭಾರತಿಯ ಮಹತ್ತರ ಪಾತ್ರವನ್ನು ವಿವರಿಸಿದರು.
ಸನ್ಮಾನ ಸ್ವೀಕರಿಸಿದ ಪ್ರೊ.ಡಾ.ಕೆ.ರಾಮಮೂರ್ತಿರಾವ್, ಭಾರತೀಯ ಸಂಸ್ಕೃತಿಯಲ್ಲಿ ಗುರುಶಿಷ್ಯ ಪರಂಪರೆಯ ಮಹತ್ವ ಕುರಿತು ಮಾತನಾಡಿ, ಗುರು-ಶಿಷ್ಯ ಪರಂಪರೆ ಭಾರತೀಯ ಸಂಸ್ಕೃತಿಯ ಜೀವನಾಡಿಯಾಗಿದೆ. ಈ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಸಂಸ್ಕಾರ ಭಾರತಿಯಂತಹ ಸಂಸ್ಥೆಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಅಭಿಪ್ರಾಯಪಟ್ಟರು.
ಸಂಘಟಕರಾದ ಬಾಲಕೃಷ್ಣ, ಮುಕುಂದ ಪೇಶ್ವೆ, ವೀರಣ್ಣ ಅರ್ಕಸಾಲಿ, ಶಶಿಕಲಾ ಇತರರು ಇದ್ದರು.