ಡಾ.ರಾಜಕುಮಾರ್ ಕನ್ನಡದ ಅಸ್ಮಿತೆ:ಆರ್.ರಘು ಕೌಟಿಲ್ಯ ಬಣ್ಣನೆ

ಪುರಭವನದಲ್ಲಿ ಅಯೋಜಿಸಿದ್ದ ವರನಟ ಡಾ.ರಾಜಕುಮಾರ್ ಸವಿ ನೆನಪಿನಲ್ಲಿ ‘ದೊಡ್ಡೋರ ಧ್ವನಿ’ ಸಂಗೀತ ಸಂಜೆ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಆರ್.ರಘುಕೌಟಿಲ್ಯ, ನಾಗರಾಜ್ ವಿ.ಬೈರಿ, ಮಡ್ಡೀಕೆರೆಗೋಪಾಲ್, ಮೈಸೂರು ಜಯರಾಂ ಇತರರು ಇದ್ದರು.
ಪುರಭವನದಲ್ಲಿ ಅಯೋಜಿಸಿದ್ದ ವರನಟ ಡಾ.ರಾಜಕುಮಾರ್ ಸವಿ ನೆನಪಿನಲ್ಲಿ ‘ದೊಡ್ಡೋರ ಧ್ವನಿ’ ಸಂಗೀತ ಸಂಜೆ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಆರ್.ರಘುಕೌಟಿಲ್ಯ, ನಾಗರಾಜ್ ವಿ.ಬೈರಿ, ಮಡ್ಡೀಕೆರೆಗೋಪಾಲ್, ಮೈಸೂರು ಜಯರಾಂ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಗೋಕಾಕ್ ಚಳವಳಿಯಲ್ಲಿ ನಾಡಿನ ಉದ್ದಗಲಕ್ಕೂ ಸಂಚರಿಸಿ ಕನ್ನಡಿಗರು ಒಂದುಗೂಡುವಂತೆ ಮಾಡುವ ಮೂಲಕ ಕನ್ನಡ ನಾಡಿನಲ್ಲಿ ಹೊಸ ಅಲೆ ಸೃಷ್ಟಿಸಿದ್ದರು
  • ಸಂಸ್ಕೃತಿಯಂತಹ ಚಿತ್ರಗಳು ಕಣ್ಮರೆಯಾಗುತ್ತಿರುವ ಈ ಗಳಿಗೆಯಲ್ಲಿ ರಾಜಕುಮಾರ್ ಗೈರು ಎದ್ದು ಕಾಣುತ್ತಿದೆ
ಮೈಸೂರು:ಗೋಕಾಕ್ ಚಳವಳಿ ಮೂಲಕ ಕನ್ನಡ ನಾಡಿನಲ್ಲಿ ಹೊಸ ಅಲೆ ಸೃಷ್ಟಿಸಿದ್ದ ಡಾ.ರಾಜಕುಮಾರ್ ಕನ್ನಡನಾಡಿನ ಅಸ್ಮಿತೆ ಎಂದು ಬಿಜೆಪಿ ರಾಜ್ಯ ಒಬಿಪಿ ಮೋರ್ಚಾ ಅಧ್ಯಕ್ಷ ಆರ್.ರಘು ಕೌಟಿಲ್ಯ ಬಣ್ಣಿಸಿದರು.
ನಗದ ಡಾ.ರಾಜಕುಮಾರ್ ಮ್ಯೂಸಿಕಲ್ ಗ್ರೂಪ್‌ನಿಂದ ಪುರಭವನದಲ್ಲಿ ಅಯೋಜಿಸಿದ್ದ ವರನಟ ಡಾ.ರಾಜಕುಮಾರ್ ಸವಿ ನೆನಪಿನಲ್ಲಿ ‘ದೊಡ್ಡೋರ ಧ್ವನಿ’ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಡಾ.ರಾಜಕುಮಾರ್ ಚಿತ್ರರಂಗದ ಮೂಲಕ ಕನ್ನಡ ನಾಡು, ನುಡಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಗೋಕಾಕ್ ಚಳವಳಿಯಲ್ಲಿ ನಾಡಿನ ಉದ್ದಗಲಕ್ಕೂ ಸಂಚರಿಸಿ ಕನ್ನಡಿಗರು ಒಂದುಗೂಡುವಂತೆ ಮಾಡುವ ಮೂಲಕ ಕನ್ನಡ ನಾಡಿನಲ್ಲಿ ಹೊಸ ಅಲೆ ಸೃಷ್ಟಿಸಿದ್ದರು ಎಂದರು.
ಇಂತಹ ಮೇರು ವ್ಯಕ್ತಿತ್ವ ಕುರಿತು ಮಹಾಪ್ರಬಂಧಗಳನ್ನೇ ರಚಿಸಬಹುದು. ಅವರಂತಹ ಆದರ್ಶ ವ್ಯಕ್ತಿ ಬಹುಶಃ ಚಿತ್ರರಂಗ, ನಾಡಿನಲ್ಲಿ ಅತ್ಯಂತ ವಿರಳ ಎನ್ನಬಹುದು. ಇವತ್ತಿನ ದಿನದಂದು ಸಂಸ್ಕೃತಿಯಂತಹ ಚಿತ್ರಗಳು ಕಣ್ಮರೆಯಾಗುತ್ತಿವೆ. ಈ ಗಳಿಗೆಯಲ್ಲಿ ರಾಜಕುಮಾರ್ ಗೈರು ಎದ್ದು ಕಾಣುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕನ್ನಡ ಚಿತ್ರರಂಗದಲ್ಲಿ ರಾಜಕುಮಾರ್ ಒಂದು ತೋಟ ಇದ್ದಂತೆ. ಆ ತೋಟದಲ್ಲಿ ಪ್ರತಿಯೊಬ್ಬ ಕಲಾವಿದ ಅರಳಿದ ಹೂಗಳಿದ್ದಂತೆ. ಅದಕ್ಕೆಲ್ಲಾ ಸ್ಫೂರ್ತಿ ಡಾ.ರಾಜಕುಮಾರ್ ಎಂದು ಹೇಳಿದರು.
ಪುನೀತ್ ರಾಜ್‌ಕುಮಾರ್ ಕೂಡ ತಮ್ಮ ತಂದೆ ಆಶಯಗಳನ್ನು ಇಟ್ಟುಕೊಂಡಿದ್ದು, ಅದಕ್ಕಾಗಿ ದುಡಿದು ಜನರ ಪ್ರೀತಿ ಗಳಿಸಿದ್ದರು. ಇಬ್ಬರು ದೈಹಿಕವಾಗಿ ಜತೆ ಇಲ್ಲದಿದ್ದರು ಸದಾ ನಮ್ಮ ಜತೆಯಿದ್ದಾರೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಮಡ್ಡಿಕೇರೆ ಗೋಪಾಲ್ ಮಾತನಾಡಿ, ರಾಜಕುಮಾರ್ ಕನ್ನಡ ಭಾಷೆಗೆ ಭಾವನೆ ತುಂಬಿದ್ದಾರೆ. ಕಲ್ಪನೆಗೆ ರೆಕ್ಕೆ ನೀಡಿದ್ದಾರೆ. ನಟನೆ, ಕಲೆ ಏನೆಂದು ತೋರಿಸಿಕೊಟ್ಟಿದ್ದಾರೆ. ಇದನ್ನು ಇಂದಿನ ಯುವ ಜನಾಂಗ ಆದರ್ಶವಾಗಿ ಇಟ್ಟುಕೊಳ್ಳಬೇಕು ಎಂದರು.
ಕನ್ನಡ ಚಲನಚಿತ್ರ ರಂಗದಲ್ಲಿ ಪೌರಾಣಿಕ, ಇತಿಹಾಸಿಕ, ಸಾಮಾಜಿಕ ಸೇರಿದಂತೆ ಎಲ್ಲ ಪಾತ್ರಗಳಲ್ಲಿಯೂ ತಮ್ಮದೇ ಛಾಪು ಮೂಡಿಸಿದ್ದಾರೆ. ಮಾತ್ರವಲ್ಲ, ಸಾಂಸ್ಕೃತಿಕ ಐಕಾನ್ ಆಗಿ ಡಾ.ರಾಜಕುಮಾರ್ ಕನ್ನಡಿಗರ ಹೃದಯಲ್ಲಿ ನೆಲೆಸಿದ್ದಾರೆ ಎಂದರು.
ಗ್ರೂಪ್‌ನ ಸಂಸ್ಥಾಪಕ ಅಧ್ಯಕ್ಷ ಮೈಸೂರು ಜಯರಾಂ, ವಿಜಯನಗರದ ಯೋಗಾನರಸಿಂಹಸ್ವಾಮಿ ದೇವಸ್ಥಾನದ ಭಾಷ್ಯಂ ಸ್ವಾಮೀಜಿ, ಮುಡಾ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್, ಮಾಜಿ ಶಾಸಕ ಎಸ್.ಬಾಲರಾಜ್, ಮೈಸೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಜಿ.ಹರೀಶ್, ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ನಾಗರಾಜ್ ವಿ.ಭೈರಿ, ಕಲಾಪೋಷಕ ರಘುರಾಂ ವಾಜಪೇಯಿ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಡಾ.ವೈ.ಡಿ. ರಾಜಣ್ಣ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net